ನಿಮ್ಮ ಹಣ ಡಬಲ್ ಮಾಡೋ ಟಾಪ್ 6 ಪೋಸ್ಟ್ ಆಫೀಸ್ ಯೋಜನೆಗಳಿವು! ಒಂದಕ್ಕಿಂತ ಒಂದು ಬೆಸ್ಟ್
ಸಣ್ಣ ಮೊತ್ತವನ್ನು ಬಹಳ ದಿನಗಳವರೆಗು ಹೂಡಿಕೆ ಮಾಡುತ್ತಾ ಬಂದರೆ, ಯೋಜನೆ ಮೆಚ್ಯುರ್ ಆಗುವ ವೇಳೆ ನಿಮಗೆ ದೊಡ್ಡ ಆದಾಯವೇ (Income) ಸಿಗುತ್ತದೆ. ಇಂಥ ಹಲವು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ.
ನೀವು ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ ಅದಕ್ಕೆ ಪೋಸ್ಟ್ ಆಫೀಸ್ ಯೋಜನೆಗಳು (Post Office Schemes) ಅತ್ಯುತ್ತಮ ಆಯ್ಕೆ ಆಗಿರುತ್ತದೆ. ಏಕೆಂದರೆ ಪೋಸ್ಟ್ ಆಫೀಸ್ ನಲ್ಲಿ ಅಷ್ಟೊಂದು ಯೋಜನೆಗಳು ಲಭ್ಯವಿದೆ. ಜೊತೆಗೆ ಇಲ್ಲಿ ನೀವು ದೊಡ್ಡ ಮೊತ್ತವನ್ನೇ ಹೂಡಿಕೆ ಮಾಡಬೇಕು ಎನ್ನುವ ಹಾಗೇನು ಇಲ್ಲ.
ಸಣ್ಣ ಮೊತ್ತವನ್ನು ಬಹಳ ದಿನಗಳವರೆಗು ಹೂಡಿಕೆ ಮಾಡುತ್ತಾ ಬಂದರೆ, ಯೋಜನೆ ಮೆಚ್ಯುರ್ ಆಗುವ ವೇಳೆ ನಿಮಗೆ ದೊಡ್ಡ ಆದಾಯವೇ (Income) ಸಿಗುತ್ತದೆ. ಇಂಥ ಹಲವು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ.
ಹೌದು, ಪೋಸ್ಟ್ ಆಫೀಸ್ ನ ಹೂಡಿಕೆಗಳು ಸುರಕ್ಷಿತವಾಗಿ ಕೂಡ ಇರುವ ಕಾರಣ ನೀವು ಹೆಚ್ಚಾಗಿ ಯೋಚಿಸಬೇಕಾದ ಅಗತ್ಯ ಕೂಡ ಇರುವುದಿಲ್ಲ. ಇಂದು ನಾವು ನಿಮಗೆ ಉತ್ತಮವಾದ ರಿಟರ್ನ್ಸ್ ಕೊಟ್ಟು, ನಿಮ್ಮ ಹಣವನ್ನು ಡಬಲ್ ಮಾಡುವಂಥ ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ಸಾಲ! ಇಂದೇ ಅಪ್ಲೈ ಮಾಡಿ
ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ನೀವು ಕೂಡ ಒಳ್ಳೆಯ ಲಾಭ ಪಡೆಯಬಹುದು. ಹಾಗಿದ್ದಲ್ಲಿ ಆ ಟಾಪ್ 6 ಯೋಜನೆಗಳು ಯಾವುವು ಎಂದು ತಿಳಿಯೋಣ..
1. ಪೋಸ್ಟ್ ಪೋಸ್ಟ್ PPF Fund: ಇದು Post Office Public Provident Fund ಯೋಜನೆ ಆಗಿದ್ದು, ಈ ಒಂದು ಯೋಜನೆಯ ಅಡಿಯಲ್ಲಿ 7.1% ಬಡ್ಡಿದರ ಸಿಗುತ್ತದೆ. ಇದು 15 ವರ್ಷಗಳ ಅವಧಿವ ಯೋಜನೆ ಆಗಿದ್ದು, ಇನ್ನು 5 ವರ್ಷಗಳ ಕಾಲ ವಿಸ್ತರಣೆ ಮಾಡಬಹುದು. ಮಿನಿಮಮ್ 500 ರೂಪಾಯಿ, ಮ್ಯಾಕ್ಸಿಮಮ್ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.
2. ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ (POMIS): ಪ್ರತಿ ತಿಂಗಳು ಆದಾಯ ನೀಡುವಂಥ ಯೋಜನೆ ಇದಾಗಿದ್ದು, 1 ರಿಂದ 5 ವರ್ಷಗಳ ಲಾಕಿನ್ ಅವಧಿ ಸಿಗುತ್ತದೆ. ಈ ಯೋಜನೆಗೆ 7.4% ಬಡ್ಡಿದರ ಲಭ್ಯವಿದೆ. ಇದು 5 ವರ್ಷದ ಯೋಜನೆ ಆಗಿದ್ದು, ಮಿನಿಮಮ್ 1000 ಮ್ಯಾಕ್ಸಿಮಮ್ 9 ಲಕ್ಷ ಹೂಡಿಕೆ ಮಾಡಬಹುದು. ಜಂಟಿ ಖಾತೆ ಆದರೆ ಮ್ಯಾಕ್ಸಿಮಮ್ 15 ಲಕ್ಷ ಹೂಡಿಕೆ ಮಾಡಬಹುದು.
ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗ್ತಾಯಿದೆ ಅತಿಹೆಚ್ಚು ಬಡ್ಡಿ! ಗ್ರಾಹಕರಿಗೆ ಸೂಪರ್ ಆಫರ್
3. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್: ಈ ಒಂದು ಯೋಜನೆಯಲ್ಲಿ 4 ಬೇರೆ ಬೇರೆ ಬಗೆಗಳಿವೆ. ಎಲ್ಲಾ ಯೋಜನೆಗೆ ಸ್ಥಿರವಾದ ಬಡ್ಡಿದರವನ್ನು ಒದಗಿಸುತ್ತದೆ. ಜೂನ್ 30ರಂದು ಈ ಯೋಜನೆ ಮುಗಿಯಲಿದ್ದು, ಇಲ್ಲಿ ತ್ರೈಮಾಸಿಕ, 2, 3 ಮತ್ತು 5 ವರ್ಷಗಳ ಯೋಜನೆಗೆ 7.0%, 7.1% ಹಾಗೂ 7.5% ಬಡ್ಡಿ ಒದಗಿಸುತ್ತದೆ.
4. ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಯೋಜನೆ: ಇದು 9 ವರ್ಷ 7 ತಿಂಗಳಿಗೆ ಹಣ ಡಬಲ್ ಆಗುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ 7.5% ಬಡ್ಡಿದರ ಸಿಗುತ್ತದೆ. ಹೂಡಿಕೆಗೆ ಇದು ಉತ್ತಮವಾದ ಆಯ್ಕೆ ಆಗಿದೆ.
5. ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ (Savings Scheme): ಇದು ವಯಸ್ಸಿನಲ್ಲಿ ಹಿರಿಯರಾದವರಿಗೆ ಆರ್ಥಿಕವಾಗಿ ಸಪೋರ್ಟ್ ಮಾಡಬೇಕು ಎನ್ನುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಆಗಿದ್ದು, ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯರಿಗೆ 8.2% ಬಡ್ಡಿ ಸಿಗುತ್ತದೆ. 60 ವರ್ಷ ಮೇಲ್ಪಟ್ಟವರು ಇಲ್ಲಿ ಹೂಡಿಕೆ ಮಾಡಬಹುದು. ನಿವೃತ್ತಿ ನಂತರದ ಬದುಕಿಗೆ ಇದು ಉತ್ತಮವಾದ ಯೋಜನೆ ಆಗಿದೆ.
ಪ್ರತಿ ತಿಂಗಳು ₹9000 ಆದಾಯ ಕೊಡೋ ಪೋಸ್ಟ್ ಆಫೀಸ್ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ!
6. ಮಹಿಳಾ ಸಮ್ಮಾನ್ ಪ್ರಮಾಣಪತ್ರ: ಇದು ವಿಶೇಷವಾಗಿ ಮಹಿಳೆಯರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಜಾರಿಗೆ ಬಂದಿರುವ ಯೋಜನೆ. ಒಳ್ಳೆಯ ಬಡ್ಡಿದರ ಹಾಗೂ ಸುರಕ್ಷತೆ ಈ ಒಂದು ಯೋಜನೆಯಲ್ಲಿ ಸಿಗುತ್ತದೆ. ಇಲ್ಲಿ ಮಹಿಳೆಯರಿಗೆ 7.5% ಬಡ್ಡಿದರ ಸಿಗುತ್ತದೆ, ಇಲ್ಲಿ ನೀವು ಮಿನಿನಮ್ 1000 ಹೂಡಿಕೆ ಮಾಡಿದರೆ, 2 ವರ್ಷಗಳ Fixed Deposit ಮೆಚ್ಯುರಿಟಿ ಅವಧಿಗೆ 2 ಲಕ್ಷದವರೆಗು ರಿಟರ್ನ್ಸ್ ಇದೆ.
Top 6 Post Office Schemes to Double Your Money