ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ಸಾಲ! ಇಂದೇ ಅಪ್ಲೈ ಮಾಡಿ

Story Highlights

ಈ ಉದ್ಯೋಗಿನಿ ಯೋಜನೆಗೆ ಯಾರು ಬೇಕಾದರೂ ಅಪ್ಲೈ ಮಾಡಬಹುದು. ಸಾಮಾನ್ಯ ಮಹಿಳೆಯರು, ವಿಧವೆಯರು, ಅಂಗವಿಕಲರು ಎಲ್ಲಾ ಮಹಿಳೆಯರು ಅಪ್ಲೈ ಮಾಡಬಹುದು. ಸಾಮಾನ್ಯ ಮಹಿಳೆಯರಿಗೆ ₹3 ಲಕ್ಷದವರೆಗು Loan ಸಿಗುತ್ತದೆ.

Loan Scheme : ನಮ್ಮ ದೇಶದಲ್ಲಿ ಬಹಳಷ್ಟು ಮಹಿಳೆಯರಿಗೆ ಅವರು ಅಂದುಕೊಂಡ ಹಾಗೆ ಓದಲು ಸಾಧ್ಯ ಆಗಿರುವುದಿಲ್ಲ. ಆದರೆ ಎಲ್ಲರಿಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಇರಬೇಕು ಎನ್ನುವ ಆಸೆ ಇರುತ್ತದೆ. ಅಂಥ ಮಹಿಳೆಯರಿಗೆ ಮನೆಯಲ್ಲಿ ಒಳ್ಳೆಯ ಸಪೋರ್ಟ್ ಸಿಗುವುದಿಲ್ಲ.

ಆರ್ಥಿಕವಾಗಿ ಸಮಸ್ಯೆಗಳು ಇರುವಂಥ ಮಹಿಳೆಯರು ಸ್ವಂತ ಉದ್ಯೋಗ (Own Business) ಅಥವಾ ಸ್ವಂತ ಉದ್ಯಮ ಶುರು ಮಾಡಬೇಕು ಎಂದು ಆಸೆ ಇದ್ದರು ಕೂಡ ಮಾಡಲು ಸಾಧ್ಯವಾಗದೆ ಹಾಗೆಯೇ ಇರುತ್ತಾರೆ.

ಅಂಥ ಕನಸುಗಳನ್ನು ಕಟ್ಟಿಕೊಂಡಿರುವ ಮಹಿಳೆಯರಿಗೆ ಇದೀಗ ಕೇಂದ್ರ ಸರ್ಕಾರ ನೆರವಾಗಲು ಮುಂದಾಗಿದೆ. ಹೌದು, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲಿ, ಅವರ ಕನಸಿನಂತೆ ಸ್ವಂತ ಉದ್ಯಮ ಅಥವಾ ಉದ್ಯೋಗ ಶುರು ಮಾಡಲಿ ಎಂದು ಕೇಂದ್ರ ಸರ್ಕಾರ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ.

ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗ್ತಾಯಿದೆ ಅತಿಹೆಚ್ಚು ಬಡ್ಡಿ! ಗ್ರಾಹಕರಿಗೆ ಸೂಪರ್ ಆಫರ್

ಈ ಒಂದು ಯೋಜನೆಯ ಮೂಲಕ ಮಹಿಳೆಯರು ತಮ್ಮದೇ ಸ್ವಂತ ಉದ್ಯೋಗ ಶುರು ಮಾಡಲು ಕೇಂದ್ರ ಸರ್ಕಾರ ನೆರವಾಗಲಿದ್ದು, ಇದರಲ್ಲಿ ಮಹಿಳೆಯರಿಗೆ 3 ಲಕ್ಷದ ವರೆಗು ಸ್ವಂತ ಬ್ಯುಸಿನೆಸ್ ಶುರು ಮಾಡುವುದಕ್ಕೆ ಸಾಲ ಸಿಗುತ್ತದೆ..

ಹೌದು, ಈ ಒಂದು ಯೋಜನೆಯ ಮೂಲಕ ಮಹಿಳೆಯರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಇದುವರೆಗೂ ಉದ್ಯೋಗಿನಿ ಯೋಜನೆಯ ಮೂಲಕ ಸುಮಾರು 48 ಸಾವಿರ ಮಹಿಳೆಯರು ಸಾಲ ಪಡೆದು ತಮ್ಮದೇ ಸ್ವಂತ ಉದ್ಯಮ ಶುರು ಮಾಡಿದ್ದಾರೆ.

18 ರಿಂದ 55 ವರ್ಷಗಳ ಒಳಗಿನ ಮಹಿಳೆಯರು ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. 88 ರೀತಿಯ ಸಣ್ಣ ಬ್ಯುಸಿನೆಸ್ ಗಳನ್ನು ಮಹಿಳೆಯರು ಈ ಯೋಜನೆಯ ಸಹಾಯದಿಂದ ಶುರು ಮಾಡಬಹುದು. ಹಳ್ಳಿ ಭಾಗದ ಮಹಿಳೆಯರಿಗೆ ಸಹಾಯ ಆಗಲಿ ಎಂದು ವಿಶೇಷವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪ್ರತಿ ತಿಂಗಳು ₹9000 ಆದಾಯ ಕೊಡೋ ಪೋಸ್ಟ್ ಆಫೀಸ್ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ!

Loan Schemeಈ ಉದ್ಯೋಗಿನಿ ಯೋಜನೆಗೆ ಯಾರು ಬೇಕಾದರೂ ಅಪ್ಲೈ ಮಾಡಬಹುದು. ಸಾಮಾನ್ಯ ಮಹಿಳೆಯರು, ವಿಧವೆಯರು, ಅಂಗವಿಕಲರು ಎಲ್ಲಾ ಮಹಿಳೆಯರು ಅಪ್ಲೈ ಮಾಡಬಹುದು. ಸಾಮಾನ್ಯ ಮಹಿಳೆಯರಿಗೆ ₹3 ಲಕ್ಷದವರೆಗು Loan ಸಿಗುತ್ತದೆ.

ಅಂಗವಿಕಲ ಹಾಗೂ ವಿಧವೆಯರಿಗೆ ಇನ್ನು ಹೆಚ್ಚು Loan ಸಿಗುತ್ತದೆ. ಅಂಥವರು ಯಾವ ಬ್ಯುಸಿನೆಸ್ ಮಾಡುತ್ತಿದ್ದಾರೆ, ಹಾಗೆಯೇ ಅವರ ವಿದ್ಯಾರ್ಹತೆ ಏನು ಎನ್ನುವುದರ ಮೇಲೆ ಅವರ ಹೆಚ್ಚು ಸಾಲ ಕೊಡಲಾಗುತ್ತದೆ.

ಬಾಡಿಗೆ ಮನೆಯಲ್ಲಿ ಇದ್ದು ನೀವಿನ್ನೂ ರೆಂಟ್ ಅಗ್ರಿಮೆಂಟ್ ಮಾಡಿಸಿಲ್ವಾ? ಬಂತು ನೋಡಿ ಹೊಸ ರೂಲ್ಸ್

ಈ ಯೋಜನೆಯ ಮತ್ತೊಂದು ವಿಶೇಷ ಏನು ಎಂದರೆ, ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಸಿಗುವ ಸಾಲಕ್ಕೆ ಬಡ್ಡಿ ವಿಧಿಸಲಾಗುವುದಿಲ್ಲ. ಸಾಮಾನ್ಯ ಮಹಿಳೆಯರಿಗೆ 10% ಇಂದ 12% ವರೆಗು ಬಡ್ಡಿ ವಿಧಿಸಲಾಗುತ್ತದೆ.

ಇನ್ನು ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ, ಅಭ್ಯರ್ಥಿಯ ಆಧಾರ್ ಕಾರ್ಡ್, ಬರ್ತ್ ಸರ್ಟಿಫಿಕೇಟ್, ಕ್ಯಾಸ್ಟ್ ಸರ್ಟಿಫಿಕೇಟ್, ರೇಶನ್ ಕಾರ್ಡ್ ಮತ್ತು ಇನ್ನಿತರ ಪ್ರಮುಖ ದಾಖಲೆಗಳು ಬೇಕಾಗಲಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.

Women who want to do their own business will get 3 lakh loan

Related Stories