Business News

ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗ್ತಾಯಿದೆ ಅತಿಹೆಚ್ಚು ಬಡ್ಡಿ! ಗ್ರಾಹಕರಿಗೆ ಸೂಪರ್ ಆಫರ್

ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ SBI. ಬಹಳಷ್ಟು ವರ್ಷಗಳಿಂದ ಚಾಲ್ತಿಯಲ್ಲಿರುವ ಈ Bank ಜನರಿಗೆ ಉತ್ತಮ ಸೇವೆಗಳನ್ನು ನೀಡುವುದರ ಜೊತೆಗೆ, ಜನರ ವಿಶ್ವಾಸ ಪಡೆದಿದೆ, ಹಾಗೆಯೇ ಜನರ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಕೂಡ ಹೊಂದಿದೆ.

ಇದೀಗ SBI ತಮ್ಮ ಗ್ರಾಹಕರಿಗೆ ಅನುಕೂಲ ಅಗುವಂಥ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಹೆಚ್ಚು ಲಾಭ ಸಿಗಲಿದ್ದು, ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..

Bumper news for State Bank customers, New FD scheme Launched

ಹೂಡಿಕೆ ಮಾಡಿ, ಒಳ್ಳೆಯ ಲಾಭಗಳನ್ನು ಪಡೆಯಲು Fixed Deposit ಯೋಜನೆಗಳು ಅನುಕೂಲಕರ ಹಾಗೂ ಉತ್ತಮವಾದ ಆಯ್ಕೆ ಎಂದು ಹೇಳಬಹುದು. ಈ FD ಯೋಜನೆಗಳ ಮೇಲೆ ಉತ್ತಮವಾದ ಬಡ್ಡಿದರ ಕೂಡ ಲಭ್ಯವಾಗುತ್ತದೆ.

ಪ್ರತಿ ತಿಂಗಳು ₹9000 ಆದಾಯ ಕೊಡೋ ಪೋಸ್ಟ್ ಆಫೀಸ್ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ!

State Bank Of India ನಲ್ಲಿ ಒಳ್ಳೆಯ ಯೋಜನೆಗಳಿದ್ದು, ಇದೀಗ SBI ಅತಿಹೆಚ್ಚು ಬಡ್ಡಿ ನೀಡುವ ಹೊಸದೊಂದು FD ಯೋಜನೆಯನ್ನು ಲಾಂಚ್ ಮಾಡಿದೆ. ಈ ಯೋಜನೆಯ ಹೆಸರು SBI ಅಮೃತ್ ವೃಷ್ಟಿ ಯೋಜನೆ. ಇದರ ಬಗ್ಗೆ ತಿಳಿಯೋಣ..

ಅಮೃತ್ ವೃಷ್ಟಿ FD ಯೋಜನೆಯನ್ನು SBI ಇದೇ ತಿಂಗಳು 2024ರ ಜುಲೈ 15ರಂದು ಜಾರಿಗೆ ತಂದಿತು. ಇದು 444 ದಿನಗಳ FD ಯೋಜನೆ ಆಗಿದ್ದು, ಉತ್ತಮವಾದ ರಿಟರ್ನ್ಸ್ ಕೊಡಲಿದೆ..ಈ ಯೋಜನೆಯಲ್ಲಿ ಭಾರತೀಯರು ಮತ್ತು NRI ಗಳು ಇಬ್ಬರು ಕೂಡ ಹೂಡಿಕೆ ಮಾಡಬಹುದು.

ಅಮೃತ್ ವೃಷ್ಟಿ ಯೋಜನೆಯಲ್ಲಿ ಸಾಮಾನ್ಯ ಜನರಿಗೆ 7.25% ಬಡ್ಡಿ, ಹಿರಿಯ ಗ್ರಾಹಕರಿಗೆ ಹೆಚ್ಚುವರಿಯಾಗಿ 0.50% ಬಡ್ಡಿ ಸಿಗಲಿದೆ. ಹಾಗೆಯೇ ಈ ಹೂಡಿಕೆ ಮೊತ್ತದ ಮೇಲೆ ಸಾಲ ಕೂಡ ಪಡೆಯಬಹುದು.

ಅಮೃತ್ ವೃಷ್ಟಿ ಯೋಜನೆಯಲ್ಲಿ ಖಾತೆ ತೆರೆಯಲು ಬಯಸುವವರು, SBI ಬ್ರಾಂಚ್, YONO App ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲಿ ಎಲ್ಲಿಯಾದರೂ ಖಾತೆ ಶುರು ಮಾಡಬಹುದು. ಇನ್ನಿತರ FD ಯೋಜನೆಗಿಂತ ಇಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ.

ಬಾಡಿಗೆ ಮನೆಯಲ್ಲಿ ಇದ್ದು ನೀವಿನ್ನೂ ರೆಂಟ್ ಅಗ್ರಿಮೆಂಟ್ ಮಾಡಿಸಿಲ್ವಾ? ಬಂತು ನೋಡಿ ಹೊಸ ರೂಲ್ಸ್

State Bank Fixed Depositಈ ಯೋಜನೆಯು 2024ರ ಜುಲೈ 15 ರಿಂದ 2025ರ ಮಾರ್ಚ್ 31 ರ ವರೆಗು ಲಭ್ಯವಿರಲಿದೆ. ಇದರ ಅವಧಿ 444 ದಿನಗಳು. ಈ FD ಯೋಜನೆಯ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಸಮಯದಲ್ಲಿ ಪಡೆಯಬಹುದು. ಈ ಬಡ್ಡಿಗೆ TDS ಸೌಲಭ್ಯವಿದೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಜಾಸ್ತಿ ಹಣ ಇಟ್ಟಿದ್ದೆ ಆದ್ರೆ ಏನಾಗುತ್ತೆ ಗೊತ್ತಾ?

ಇದರ ಜೊತೆಗೆ ಉತ್ತಮವಾದ ಮತ್ತೊಂದು FD ಯೋಜನೆ ಇದ್ದು, ಅದು ಅಮೃತ್ ಕಲಶ್ ಯೋಜನೆ ಆಗಿದೆ. ಇದು 400 ದಿನಗಳ FD ಯೋಜನೆ ಆಗಿದ್ದು, ಸಾಮಾನ್ಯ ಜನರಿಗೆ 7.10%, ಹಿರಿಯ ನಾಗರೀಕರಿಗೆ 7.60% ಬಡ್ಡಿ ಇದರಿಂದ ಸಿಗುತ್ತದೆ.

ಇಲ್ಲಿ ನೀವು ಹೂಡಿಕೆ ಮಾಡಿದ ಬಳಿಕ, 7 ದಿನಗಳಾದ ನಂತರ ಮಾತ್ರ ಬಡ್ಡಿ ಸಿಗುತ್ತದೆ. ಅದಕ್ಕಿಂತ ಮೊದಲು ಸಿಗುವುದಿಲ್ಲ. ಈ ಉತ್ತಮವಾದ ಯೋಜನೆಗಳಲ್ಲಿ ಇಂದೇ ಹೂಡಿಕೆ ಮಾಡಿ.

Get the highest interest on your fixed Deposit in State Bank Of India

Our Whatsapp Channel is Live Now 👇

Whatsapp Channel

Related Stories