ನಮ್ಮ ದೇಶದಲ್ಲಿ ಆಸ್ತಿ ನೋಂದಣಿ ಆರಂಭವಾಗಿದ್ದು ಯಾವಾಗ? ಆಗ ಶುಲ್ಕ ಎಷ್ಟಿತ್ತು!
- ಆಸ್ತಿ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು ಯಾವಾಗ ಗೊತ್ತಾ?
- ಮೊಘಲರ ಕಾಲದಲ್ಲಿಯೂ ಇತ್ತು ಆಸ್ತಿ ನೋಂದಣಿ ಪ್ರಕ್ರಿಯೆ
- ಆಸ್ತಿ ನೋಂದಣಿಯ ಶುಲ್ಕ ಅಷ್ಟಿತ್ತು ಇಲ್ಲಿದೆ ಮಾಹಿತಿ
Property Registration : ನಿಮಗೆಲ್ಲಾ ತಿಳಿದಿರುವ ಹಾಗೆ ಯಾವುದೇ ವ್ಯಕ್ತಿ ತನ್ನ ಸ್ವಂತ ಆಸ್ತಿಯನ್ನು ಹೊಂದಿದ್ದರೆ ಅದನ್ನು ಸರ್ಕಾರದ ಆಫೀಶಿಯಲ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ನೀವು ನಿಮ್ಮ ಆಸ್ತಿಪಾಸ್ತಿ ರಿಜಿಸ್ಟರ್ ಮಾಡಿಕೊಳ್ಳದೆ ಇದ್ದಲ್ಲಿ, ಆ ಆಸ್ತಿ ನಿಮ್ಮ ಕೈ ತಪ್ಪಿ ಹೋಗಬಹುದು ಬೇರೆ ಯಾರಾದರೂ ಅದನ್ನ ತನ್ನ ಆಸ್ತಿ ಎಂದು ಹೇಳಿಕೊಳ್ಳಬಹುದು.
ಹೀಗಾಗಿ ಆಸ್ತಿ ನೊಂದಣಿ ಎನ್ನುವುದು ಬಹಳ ಮುಖ್ಯವಾಗಿರುವ ವಿಚಾರ. ಆರಂಭದಲ್ಲಿ ಹಣ ಇರುವವರು ಮಾತ್ರ ಸುಲಭವಾಗಿ ಆಸ್ತಿ ನೋಂದಣಿ ಮಾಡಿಕೊಳ್ಳುತ್ತಿದ್ದರು ಬಡವರು ನೋಂದಣಿ ಮಾಡಿಕೊಳ್ಳದೆ ಹಾಗೆ ಸುಮ್ಮನಿರುತ್ತಿದ್ದರು. ಇದರಿಂದ ಬಡವರ ಆಸ್ತಿಯಲ್ಲಿ ವಂಚನೆ ಆಗಿರುವ ಉದಾಹರಣೆಗಳು ಕೂಡ ಇವೆ. ಇದಕ್ಕಾಗಿ ದೇಶದಲ್ಲಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭಿಸಲಾಯಿತು.
ಆಸ್ತಿ ನೋಂದಣಿ ಆರಂಭವಾಗಿದ್ದು ಯಾವಾಗ?
ದೇಶದಲ್ಲಿ ಮನೆಯ ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು 1908ರಲ್ಲಿ. ಆದರೆ ಜನವರಿ ಒಂದು 1909ರಲ್ಲಿ ನೊಂದಣಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಲಾಯಿತು.
ಆಸ್ತಿ ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಕಾನೂನು ಸಿಂಧುತ್ವವನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅದು ಅಲ್ಲದೆ ಯಾವುದೇ ಆಸ್ತಿ ನೋಂದಣಿ ಆದಾಗ ಅದು ಕಾನೂನಿನ ಚೌಕಟ್ಟಿನೊಳಗೆ ಬರುತ್ತದೆ. ಹಾಗೂ ಆದಾಯ ತೆರಿಗೆ ಪಾವತಿ ಮಾಡಲು ಸಹಕಾರಿಯಾಗುತ್ತದೆ.
ಬ್ಯಾಂಕ್ ದರೋಡೆ ಆದರೆ ಬ್ಯಾಂಕಿನಲ್ಲಿ ನೀವು ಇಟ್ಟ ಹಣಕ್ಕೆ ಗ್ಯಾರಂಟಿ ಇದೆಯಾ?
ರಾಜರ ಕಾಲದಲ್ಲಿಯೂ ಇತ್ತು ಆಸ್ತಿ ನೋಂದಣಿ!
ಆಸ್ತಿ ನೊಂದಣಿ ಪ್ರಕ್ರಿಯೆ ಇಂದು ನಿರ್ಣಯದಲ್ಲ ಮೊಘಲರ ಕಾಲದಲ್ಲಿಯೂ ಕೂಡ ಈ ವ್ಯವಸ್ಥೆ ಜಾರಿಯಲ್ಲಿ ಇತ್ತು ಆದರೆ ಆಧುನಿಕವಾಗಿ ಆಸ್ತಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ತಡವಾಗಿ. ಇನ್ನು ನೋಂದಣಿ ಸುಲಭದ ಬಗ್ಗೆ ಹೇಳುವುದಾದರೆ ಮೊದಲು ನೋಂದಣಿ ಶುಲ್ಕ ಬಹಳ ಕಡಿಮೆ ಇತ್ತು ನಂತರ ರಾಜ್ಯದಲ್ಲಿ ಆಸ್ತಿ ಮೌಲ್ಯದ ಶೇಕಡಾವಾರು ಮೊತ್ತವನ್ನು ಅವಲಂಬಿಸಿ ಶುಲ್ಕವನ್ನು ವಿಧಿಸುವ ಪ್ರಕ್ರಿಯೆ ಆರಂಭವಾಯಿತು.
ಮಾರುಕಟ್ಟೆಯಲ್ಲಿ ಆಸ್ತಿಯ ಮೌಲ್ಯ ಎಷ್ಟು ಇರುತ್ತದೆಯೋ ಅದರ ಒಂದು ಪರ್ಸೆಂಟ್ ನಷ್ಟು ನೋಂದಣಿ ಶುಲ್ಕವಾಗಿ ವಿಧಿಸಲಾಗುತ್ತದೆ. ಇದರ ಜೊತೆಗೆ ಸ್ಟ್ಯಾಂಪ್ ಶುಲ್ಕ ಹಾಗೂ ಇತರ ಅಂಕಗಳು ಸೇರಿವೆ
15 ವರ್ಷಕ್ಕೆ ಅಂತ 25 ಲಕ್ಷ ಪರ್ಸನಲ್ ಲೋನ್ ತೆಗೆದುಕೊಂಡರೆ EMI ಎಷ್ಟು ಕಟ್ಟಬೇಕು?
ಸ್ಟ್ಯಾಂಪ್ ಡ್ಯೂಟಿ ಪ್ರಕ್ರಿಯೆ ಆರಂಭವಾಗಿದ್ದು ಯಾವಾಗ!
1797ರಲ್ಲಿ ನಿಯಮ 6 ಇದರ ಅಡಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ಪರಿಕಲ್ಪನೆ ಕಟ್ಟಿಕೊಂಡಿತು. ಇದು ಮೊದಲ ಆರಂಭವಾಗಿದ್ದು ಬಂಗಾಳದಲ್ಲಿ. ಇನ್ನು 1908ರಲ್ಲಿ ಬ್ರಿಟಿಷ್ ನೋಂದಣಿ ಕಾಯ್ದೆಯ ಪ್ರಕಾರ, ಸ್ಟ್ಯಾಂಪ್ ಡ್ಯೂಟಿ ಪರಿಕಲ್ಪನೆಯನ್ನು ಪುನರಾರಂಭಿಸಲಾಯಿತು. ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ಮಿತಿಯನ್ನು ಅವಲಂಬಿಸಿ ಶುಲ್ಕವನ್ನು ವಿಧಿಸಲಾಗುತ್ತದೆ.
ಆಸ್ತಿ ನೋಂದಣಿ ಆರಂಭಿಸಿದ್ದು ಯಾಕೆ ಗೊತ್ತಾ?
ಮೊಟ್ಟಮೊದಲನೆಯದಾಗಿ ಸಾಮಾನ್ಯರ ಆಸ್ತಿಗೆ ಕಾನೂನು ಮಾನ್ಯತೆ ಒದಗಿಸಬೇಕು ಎನ್ನುವ ಕಾರಣಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಯಿತು. ಆಸ್ತಿ ಮಾಲೀಕತ್ವ ಹಾಗೂ ಹಕ್ಕನ್ನು ಈ ಮೂಲಕ ದೃಢಪಡಿಸಲಾಯಿತು.
ಹೀಗಾಗಿ ನಕಲಿ ಮಾಲೀಕತ್ವದ ಸಮಸ್ಯೆ ಇಲ್ಲದೆ ನಿಜವಾದ ಆಸ್ತಿ ಮಾಲೀಕರು ತಮ್ಮ ಆಸ್ತಿ ವಹಿವಾಟನ್ನು ಸುಲಭವಾಗಿ ಮಾಡಲು ಸಾಧ್ಯವಾಯಿತು.
ಆದರೆ ಈ ನೋಂದಾವಣಿ ಪ್ರಕ್ರಿಯೆ ಆರಂಭವಾದಾಗ ಸಾಕಷ್ಟು ಜನ ವಿರೋಧ ಮಾಡಿದ್ದೂ ಇದೆ. ಯಾಕಂದ್ರೆ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕಗಳು ಸರ್ಕಾರಕ್ಕೆ ಆದಾಯವನ್ನು ಕೊಡುತ್ತವೆ ಹೊರತು ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಜನ ಈ ನಿಯಮಕ್ಕೆ ವಿರೋಧ ಮಾಡಿದ್ದಾರೆ.
ಇನ್ನು ಆಸ್ತಿ ಬಗ್ಗೆ ಸಾಕಷ್ಟು ವಿವಾದಗಳು ಕೋರ್ಟ್ ನಲ್ಲಿ ಇದ್ದು ಅದರ ಪರಿಹಾರಕ್ಕೆ ಸಮಸ್ಯೆಯಾಗುತ್ತದೆ ಎಂದು ಕೂಡ ಸಾಕಷ್ಟು ಜನ ಭಾವಿಸಿದ್ದರು. ಜೊತೆಗೆ ಅಧಿಕಾರ ಶಾಹಿ ಬ್ರಷ್ಟಾಚಾರ ಹೆಚ್ಚಿರುವ ಪ್ರದೇಶದಲ್ಲಿ ಆಸ್ತಿ ನೊಂದಣಿಗೆ ವಿರೋಧ ವ್ಯಕ್ತವಾಗಿತ್ತು. ಆದರೂ ಇಂದು ಆಸ್ತಿ ನೋಂದಣಿ ಎನ್ನುವುದು ದೇಶದಲ್ಲಿ ಕಡ್ಡಾಯವಾಗಿದೆ.
When Did Property Registration Start in Our Country, What Were the Charges