ಬಂಗಾರ, ಬೆಳ್ಳಿ ಆಭರಣಗಳನ್ನು ಪಿಂಕ್ ಪೇಪರ್ನಲ್ಲೇ ಸುತ್ತಿ ಕೊಡುವ ಕಾರಣ ಗೊತ್ತಾ? - Gold jewellery
ನಾವು ಬಂಗಾರ, ಬೆಳ್ಳಿ ಆಭರಣಗಳನ್ನು ಖರೀದಿಸಿದಾಗ ಪಿಂಕ್ ಪೇಪರ್ನಲ್ಲಿ ಸುತ್ತಿ ಕೊಡುತ್ತಾರೆ. ಇದಕ್ಕೆ ಕಾರಣ ಕೇವಲ ಅಲಂಕಾರವಲ್ಲ, ಹಳೆಯ ಸಂಪ್ರದಾಯ ಮತ್ತು ಆಭರಣಗಳ ರಕ್ಷಣೆಗೂ ಸಂಬಂಧಿಸಿದೆ.

- ಬಂಗಾರ, ಬೆಳ್ಳಿ ಆಭರಣಗಳು ಪಿಂಕ್ ಪೇಪರ್ನಲ್ಲಿ ಸುತ್ತುವ ಸಂಪ್ರದಾಯ
- ಆಭರಣಗಳನ್ನು ಪಿಂಕ್ ಪೇಪರ್ನಲ್ಲಿ ಇಡುವ ಹಳೆಯ ಪರಂಪರೆ
- ನಗದ ವ್ಯಾಪಾರಿಗಳು ಆಭರಣ ರಕ್ಷಣೆಗಾಗಿ ಬಳಸುವ ರಹಸ್ಯ
ನಾವು ಬಂಗಾರ ಅಥವಾ ಬೆಳ್ಳಿ ಆಭರಣಗಳನ್ನು (Silver and Gold jewellery) ಖರೀದಿಸಿದಾಗ, ಆಭರಣದ ಅಂಗಡಿಯಲ್ಲಿ ಅವನ್ನು ಸಾಮಾನ್ಯವಾಗಿ ಪಿಂಕ್ ಬಣ್ಣದ ಕಾಗದದಲ್ಲಿ ಸುತ್ತಿ ನೀಡುತ್ತಾರೆ. ಹಲವರು ಇದನ್ನು ಗಮನಿಸಿದರೂ, ಅದರ ಹಿಂದಿರುವ ನಿಜವಾದ ಕಾರಣ ಬಹುತೇಕ ಜನರಿಗೆ ಗೊತ್ತಿರುವುದಿಲ್ಲ.
ಹಳೆಯ ಕಾಲದಿಂದಲೇ ನಗದ ವ್ಯಾಪಾರಿಗಳು ಈ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಗ್ರಾಹಕರಿಗೆ ಆಭರಣಗಳನ್ನು ಹಸ್ತಾಂತರಿಸುವಾಗ ಅದನ್ನು ಪಿಂಕ್ ಪೇಪರ್ನಲ್ಲಿ (Pink Paper) ಇಟ್ಟು ಕೊಡುವುದು ಒಂದು ರೀತಿಯ ವ್ಯವಹಾರ ಪದ್ಧತಿ ಆಗಿ ಬೆಳೆಯಿತು. ಇಂದು ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಈ ಸಂಪ್ರದಾಯ ಅದೇ ರೀತಿ ಮುಂದುವರಿಯುತ್ತಿದೆ.
ವ್ಯಾಪಾರಿಗಳ ಪ್ರಕಾರ, ಪಿಂಕ್ ಪೇಪರ್ನಲ್ಲಿ ಸ್ವಲ್ಪ ಮೆಟಾಲಿಕ್ ಹೊಳಪು ಇರುವುದರಿಂದ ಆಭರಣಗಳು ಅದರೊಳಗೆ ಇಡುತ್ತಿದ್ದಂತೆಯೇ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಖರೀದಿಸಲು ಬಂದ ಗ್ರಾಹಕರಿಗೆ ಆಭರಣ ಚೆನ್ನಾಗಿ, ಹೊಳೆಯುತ್ತಾ ಕಾಣಿಸುವುದು ಅವರಿಗೆ ಖರೀದಿ ನಿರ್ಧಾರ ಮಾಡಲು ಸಹಕಾರಿ. ಆದ್ದರಿಂದ ವ್ಯಾಪಾರಿಗಳು ಈ ಕಾಗದವನ್ನು ಬಳಸುತ್ತಾರೆ.
ಇದಲ್ಲದೆ, ಪಿಂಕ್ ಪೇಪರ್ ಆಭರಣಗಳನ್ನು ಸಣ್ಣ ಗೀಟುಗಳಿಂದ ಕೂಡ ಕಾಪಾಡುತ್ತದೆ. ಬಾಕ್ಸ್ ಒಳಗೆ ಮೊದಲ ಪದರವಾಗಿ ಬಳಸುವ ಈ ಕಾಗದ ಆಭರಣಗಳಿಗೆ ಭದ್ರತೆ ನೀಡುತ್ತದೆ. ಆಭರಣವನ್ನು ಕೇವಲ ಬಾಕ್ಸ್ನಲ್ಲಿ ಇಟ್ಟರೆ ಅದು ಕೆಲವೊಮ್ಮೆ ನೇರವಾಗಿ ಬಾಕ್ಸ್ ತುದಿಗೆ ತಗುಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಿಂಕ್ ಪೇಪರ್ ಒಂದು ರೀತಿಯ ರಕ್ಷಣೆ ಒದಗಿಸುತ್ತದೆ.
ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಭಾರತೀಯರು ವಿಶೇಷವಾಗಿ ಇಷ್ಟಪಡುತ್ತಾರೆ. ಮದುವೆ, ಹಬ್ಬ ಮತ್ತು ಪ್ರತಿ ಪ್ರಮುಖ ಸಂದರ್ಭದಲ್ಲೂ ಜನರು ಆಭರಣ ಖರೀದಿಸುತ್ತಾರೆ (Buy Gold).
ಬಡವರು, ಮಧ್ಯಮ ವರ್ಗದವರು, ಶ್ರೀಮಂತರು ಎಲ್ಲರೂ ಬಂಗಾರವನ್ನು ಖರೀದಿಸುವ ಸಂಪ್ರದಾಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಪಿಂಕ್ ಪೇಪರ್ನಲ್ಲಿ ಆಭರಣಗಳನ್ನು ಸುತ್ತುವ ಈ ಹಳೆಯ ಪದ್ಧತಿ ಇಂದಿಗೂ ಜೀವಂತವಾಗಿದೆ.
Why Gold and Silver Jewellery is Always Wrapped in Pink Paper



