100 ರೂಪಾಯಿ ಬದಲು 110 ರೂಪಾಯಿಗೆ ಪೆಟ್ರೋಲ್ ಹಾಕಿಸುವ ರೂಢಿ ಯಾಕಿದೆ ಗೊತ್ತಾ?
ನಾವು ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಹಾಕಿಸುವಾಗ ನೂರು ರೂಪಾಯಿ ಬದಲಿಗೆ 110 ಅಥವಾ 200 ಬದಲಿಗೆ 220 ರೂಪಾಯಿಗಳ ಪೆಟ್ರೋಲ್ ಹಾಕಿಸ್ತೇವೆ.
- 100 ರೂಪಾಯಿ ಬದಲಿಗೆ 110 ರೂಪಾಯಿಗೆ ಪೆಟ್ರೋಲ್ ಹಾಕುವುದು ಯಾಕೆ?
- ಹಣಕ್ಕಿಂತ ಪೆಟ್ರೋಲ್ ಹಾಕುವಾಗ ಲೀಟರ್ ಅಳತೆ ಯಾಕೆ ಬೆಟರ್ ಗೊತ್ತಾ?
- ಪೆಟ್ರೋಲ್ ಪ್ರಮಾಣವನ್ನು ಅಳತೆ ಮಾಡುವುದಕ್ಕೆ ಯಂತ್ರದಲ್ಲಿ ಏನನ್ನು ಅಳವಡಿಸಲಾಗಿದೆ?
Petrol Bunk : ಸಾಕಷ್ಟು ಬಾರಿ ನಾವು ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ (Petrol) ಹಾಕಿಸುವಾಗ ನೂರು ರೂಪಾಯಿ ಬದಲಿಗೆ 110 ಅಥವಾ 200 ಬದಲಿಗೆ 220 ರೂಪಾಯಿಗಳ ಪೆಟ್ರೋಲ್ ಹಾಕಿಸ್ತೇವೆ. ನಾವಂತೂ ಇದನ್ನ ಸ್ಟಾರ್ಟ್ ಮಾಡಿಲ್ಲ ಆದರೆ ಎಲ್ಲರೂ ಮಾಡೋದನ್ನ ನೋಡಿ ನಾವು ಕೂಡ ಇದನ್ನೇ ಮುಂದುವರಿಸಿಕೊಂಡು ಹೋಗ್ತಾ ಇದ್ದೀವಿ. ಆದರೆ ಇದನ್ನು ನಿಜಕ್ಕೂ ಯಾಕಾಗಿ ಮುಂದುವರಿಸಿಕೊಂಡು ಬರಲಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ.
ನಿಮ್ಮತ್ರ ಡ್ಯಾಮೇಜ್ ನೋಟುಗಳು ಇದ್ರೆ ಈ ರೀತಿ ಬದಲಾಯಿಸಿಕೊಳ್ಳಿ, ಸುಲಭ ವಿಧಾನ
ಯಾಕೆ ರೌಂಡ್ ಫಿಗರ್ ಪೆಟ್ರೋಲ್ ಹಾಕ್ಸಲ್ಲ?
ಸಾಮಾನ್ಯವಾಗಿ 100, 200 ರೂಪಾಯಿ ಬೆಲೆಯ ಪೆಟ್ರೋಲ್ ಗೆ ಬಟನ್ ಇರುತ್ತೆ ಅದನ್ನ ಪ್ರೆಸ್ ಮಾಡಿದಾಗ ಅಷ್ಟೇ ಮೌಲ್ಯದ ಪೆಟ್ರೋಲ್ ಬಂದು ಸೇರುತ್ತೆ. ಇದಾಗಿಯೂ ಕೂಡ ಗ್ರಾಹಕರು ಇಂತಹ ಸಂಖ್ಯೆಗಳ ಹಿಂದೆ ಸೆಟ್ಟಿಂಗ್ ಇದೆ ಹೀಗಾಗಿ ಆ ರೀತಿಯ ಪೆಟ್ರೋಲ್ ಹಾಕ್ಸಲ್ಲ.
ಈ ವಿಚಾರದ ಪ್ರಕಾರ ಯಂತ್ರದಲ್ಲಿ ಲೀಟರ್ ಲೆಕ್ಕದಲ್ಲಿ ಪೆಟ್ರೋಲ್ ಅನ್ನು ಅಳತೆ ಮಾಡಲಾಗುತ್ತದೆ ಹಾಗೂ ಸಾಫ್ಟ್ವೇರ್ ಮೂಲಕ ಇದನ್ನ ರೂಪಾಯಿಗಳಿಗೆ ಪರಿವರ್ತಿಸಲಾಗುತ್ತದೆ.
ಇದರ ಮೂಲಕ ಎಷ್ಟು ಹಣಕ್ಕೆ ಎಷ್ಟು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ (Petrol and Diesel) ಬರುತ್ತೆ ಅನ್ನೋದನ್ನ ಲೆಕ್ಕಾಚಾರ ಹಾಕಲಾಗುತ್ತದೆ. ನೂರು ರೂಪಾಯಿಗಳ ರೌಂಡ್ ಫಿಗರ್ ಪೆಟ್ರೋಲ್ ಹಾಕಿದಾಗ ಲೀಟರ್ ಲೆಕ್ಕದಲ್ಲಿ ಪೆಟ್ರೋಲ್ ಕಡಿಮೆ ಬರಬಹುದು ಹಾಗೂ 110 ಅಥವಾ 120 ರೂಪಾಯಿಗಳ ಪೆಟ್ರೋಲ್ ಹಾಕಿದಾಗ ಹೆಚ್ಚು ಅಥವಾ ಉತ್ತಮ ಕ್ವಾಲಿಟಿಯ ಪೆಟ್ರೋಲ್ ಸಿಗುತ್ತೆ ಅನ್ನೋದಕ್ಕೆ ಯಾವುದೇ ಪುರಾವೆ ಇಲ್ಲ ಆದರೂ ಕೂಡ ಇದೇ ಲೆಕ್ಕಾಚಾರದಲ್ಲಿ ಇದು ಮುಂದುವರೆದುಕೊಂಡು ಬಂದಿದೆ.
ಹಸು ಸಗಣಿಗೂ ಬಂತು ಡಿಮ್ಯಾಂಡ್; ಒಂದು ಕೆಜಿ 50 ರೂಪಾಯಿಗಳಿಗೆ ಮಾರಾಟ
ನಾವು ಪೆಟ್ರೋಲ್ ಬಂಕ್ (Petrol Bunk) ಅನ್ನು ನಂಬಬೇಕಾಗುತ್ತದೆ. ಯಂತ್ರದಲ್ಲಿ ಅಳವಡಿಸಲಾಗಿರುವಂತಹ ಫ್ಲೋ ಮೀಟರ್ ಮೂಲಕ ಇಲಾಖೆ ಅದರಿಂದ ಬರುವಂತಹ ತೈಲವನ್ನ ಮಾಪನ ಮಾಡಲಾಗುತ್ತದೆ ಹಾಗೂ ತೈಲ ಕಂಪನಿ ಕೂಡ ಇದನ್ನೇ ಅಳತೆ ಮಾಡೋದು. ಇದೇ ಕಾರಣಕ್ಕಾಗಿ ಸಾಮಾನ್ಯ ನಿಗದಿತ ರೌಂಡ್ ಫಿಗರ್ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪೆಟ್ರೋಲ್ ಹಾಕುವುದಕ್ಕೆ ಗ್ರಾಹಕರು ಬಳಸಿಕೊಳ್ಳುತ್ತಾರೆ.
ಈ ಒಂದು ನೋಟ್ ನಿಮ್ಮತ್ರ ಇದ್ರೆ ನೀವು ಲಕ್ಷಾಧಿಪತಿಯಾಗುವುದು ಪಕ್ಕ! ಲಕ್ಷಗಟ್ಟಲೆ ದುಡ್ಡು
ಇಷ್ಟಿದ್ದರೂ ಕೂಡ ನೀವು ಪೆಟ್ರೋಲ್ ಹಾಕಿಸುವಂತಹ ಪೆಟ್ರೋಲ್ ಪಂಪ್ ನಲ್ಲಿ ಯಾವುದಾದರೂ ರೀತಿಯಲ್ಲಿ ನಿಮಗೆ ಅನ್ಯಾಯ ನಡೆಯುತ್ತಿದ್ದರೆ https://pgportal.gov.in/ ಪೋರ್ಟಲ್ ಗೆ ದೂರು ನೀಡಬಹುದಾಗಿದೆ. ಒಂದು ವೇಳೆ ಆ ಪೆಟ್ರೋಲ್ ಪಂಪ್ ಖಾಸಗಿ ಒಡೆತನದಲ್ಲಿ ಇದ್ದರೆ ಅಲ್ಲಿ ಕೂಡ ನೀವು ದೂರನ್ನು ಸಲ್ಲಿಸುವಂತಹ ಅವಕಾಶವನ್ನು ಹೊಂದಿದ್ದೀರಿ.
Why is it a Trend to Get Petrol for 110 Rupees Instead of 100