5 ರೂಪಾಯಿ ನಾಣ್ಯ ಕ್ಯಾನ್ಸಲ್ ಆಗುತ್ತಾ? ನಮ್ಮತ್ರ ಇರುವ ನಾಣ್ಯಗಳನ್ನು ಏನು ಮಾಡಬೇಕು?
- ನಿಮ್ಮ ಬಳಿ ಇರುವ ಐದು ರೂಪಾಯಿ ನಾಣ್ಯ ಬ್ಯಾನ್ ಆಗುತ್ತಾ?
- ಐದು ರೂಪಾಯಿ ದಪ್ಪಗಿರುವ ಕಾಯಿನ್ ಮಾರುಕಟ್ಟೆಯಲ್ಲಿ ಇನ್ನು ಮುಂದೆ ಚಲಾವಣೆಯಲ್ಲಿ ಇರುವುದಿಲ್ಲ
- ಐದು ರೂಪಾಯಿ ಕಾಯಿನ್ ಚಲಾವಣೆಯ ಬಗ್ಗೆ ಆರ್ ಬಿ ಐ ಸ್ಪಷ್ಟನೆ
5 Rupees Coin : ಯಾವುದೇ ಕರೆನ್ಸಿಯನ್ನು ಬ್ಯಾನ್ ಮಾಡುವುದಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI Bank) ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವ ಕಾರಣಕ್ಕೂ ಯಾವ ಕರೆನ್ಸಿಯನ್ನು ಮಾಡಲಾಗುತ್ತಿದೆ, ನಾಣ್ಯ ಅಥವಾ ನೋಟನ್ನು ಯಾವ ಕಾರಣಕ್ಕೆ ಮುದ್ರಣ ನಿಲ್ಲಿಸಲಾಗುತ್ತಿದೆ ಎನ್ನುವುದನ್ನು ಸರ್ಕಾರಕ್ಕೆ ತಿಳಿಸಿ ಆರ್‌ಬಿಐ ಈ ಕೆಲಸವನ್ನು ಮಾಡಬಹುದು.
ಇನ್ನು ಕರೆನ್ಸಿ ಬ್ಯಾನ್ ಮಾಡುವುದು ನಮ್ಮ ದೇಶದಲ್ಲಿ ಹೊಸದೇನು ಅಲ್ಲ. ಇತ್ತೀಚಿಗೆ 2000 ರೂ. ನೋಟನ್ನು ಕೂಡ ಬ್ಯಾನ್ ಮಾಡಲಾಗಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಐದು ರೂಪಾಯಿ ದಪ್ಪ ನಾಣ್ಯವನ್ನು ಆರ್ ಬಿಐ ಬ್ಯಾಂಕ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ICICI ಬ್ಯಾಂಕ್ ನಲ್ಲಿ 40 ಲಕ್ಷ ಹೋಮ್ ಲೋನ್ ಪಡೆದರೆ EMI ಎಷ್ಟು ಕಟ್ಟಬೇಕಾಗುತ್ತೆ?
ರೂ. 5 ರೂಪಾಯಿ ನಾಣ್ಯದ ಮುದ್ರಣ ನಿಲ್ಲಿಸಿದ ಆರ್ ಬಿ ಐ!
ನಮ್ಮಲ್ಲಿ ಈಗ ಬೇರೆ ಬೇರೆ ರೀತಿಯ ಐದು ರೂಪಾಯಿ ನಾಣ್ಯದ ಚಲಾವಣೆ ಇದೆ. ಗೋಲ್ಡ್ ಬಣ್ಣದಲ್ಲಿರುವ ತೆಳುವಾದ ಐದು ರೂಪಾಯಿ ನಾಣ್ಯ, ದಪ್ಪಗಿನ ಐದು ರೂಪಾಯಿ ನಾಣ್ಯ, ತೆಳುವಾದ ಹಿತ್ತಾಳೆ ನಾಣ್ಯ ಚಲಾವಣೆಯಲ್ಲಿ ಇದೆ, ಬ್ರಾಸ್ ಮತ್ತು ನಿಕ್ಕಲ್ ನಿಂದ ಐದು ರೂಪಾಯಿ ನಾಣ್ಯವನ್ನು ತಯಾರಿಸಲಾಗಿದೆ. ಸದ್ಯ ದಪ್ಪಗಿರುವ ಐದು ರೂಪಾಯಿ ನಾಣ್ಯ ತಯಾರಿಕೆಯನ್ನು ಆರ್ ಬಿ ಐ ನಿಲ್ಲಿಸಿದೆ ಎಂದು ವರದಿಯಾಗಿದೆ.
ಐದು ರೂಪಾಯಿ ನಾಣ್ಯಗಳ ಅಕ್ರಮ ಸಾಗಾಟ!
ದಪ್ಪಗಿರುವ ಐದು ರೂಪಾಯಿ ನಾಣ್ಯವನ್ನು ಕರಗಿಸಿ ಶೇವಿಂಗ್ ಬ್ಲೇಡ್ ತಯಾರಿಸಲಾಗುತ್ತದೆ. ಇದರಿಂದ ಹತ್ತು ರೂಪಾಯಿ ಮೌಲ್ಯ ಸಂಪಾದಿಸಲಾಗುತ್ತದೆ. ಮುಖ ಬೆಲೆಗಿಂತ ನಾಣ್ಯದ ಮೌಲ್ಯ ಹೆಚ್ಚಾಗುತ್ತದೆ, ಈ ರೀತಿ ಮಾಡುವುದು ಕಾನೂನು ಬಾಹಿರ.
ಅದರಲ್ಲೂ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಐದು ರೂಪಾಯಿ ನಾಣ್ಯವನ್ನು ನಮ್ಮ ದೇಶದಿಂದ ರವಾನೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಇಂತಹ ನಾಣ್ಯದ ಚಲಾವಣೆಯನ್ನು ನಿಲ್ಲಿಸಲಿದೆ ಎಂದು ವರದಿಯಾಗಿದೆ, ಆದರೆ ಆರ್‌ಬಿಐ ಇದರ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲ.
ಮಹಿಳೆಯರಿಗೆ ಒಂದು ರೂಪಾಯಿ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲ
ಕೆಲವು ವರದಿಯ ಪ್ರಕಾರ ಈಗಾಗಲೇ ದಪ್ಪಗಿರುವ ಐದು ರೂಪಾಯಿ ನಾಣ್ಯದ ಮುದ್ರಣವನ್ನು ಆರ್ ಬಿಐ ನಿಲ್ಲಿಸಿದೆ. ಆದರೆ ಈಗಾಗಲೇ ಮುದ್ರಣ ಗೊಂಡಿರುವ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇವೆ.
ಯಾವುದೇ ಕರೆನ್ಸಿಯ ಮುದ್ರಣದಲ್ಲಾಗಲಿ ಅಥವಾ ಕರೆನ್ಸಿ ಚಲಾವಣೆಯನ್ನು ನಿಲ್ಲಿಸುವುದರಲ್ಲಿ ಆಗಲಿ ಆರ್ ಬಿ ಐ ನಿರ್ಣಯವು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಸದ್ಯ ಆರ್‌ಬಿಐನಿಂದ ಅಧಿಕೃತವಾಗಿ ಐದು ರೂಪಾಯಿ ನಾಣ್ಯವನ್ನು ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರಿಂದಾಗಿ ಜನರು ಆತಂಕ ಪಟ್ಟುಕೊಳ್ಳುವ ಅಗತ್ಯ ಇಲ್ಲ.
Will the 5 rupee coin be cancelled