ಕೇಂದ್ರ ಸರ್ಕಾರದಿಂದ ಸೂಪರ್ ಯೋಜನೆ! 10,000 ನೇರವಾಗಿ ನಿಮ್ಮ ಖಾತೆಗೆ ಜಮಾ
ಹೊಸ ಆದಾಯ ತೆರಿಗೆ ಕಾಯ್ದೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಕ್ವಿಜ್ ಸ್ಪರ್ಧೆ ನಡೆಸುತ್ತಿದೆ. ಮೊಬೈಲ್ ಮೂಲಕವೇ ಭಾಗವಹಿಸಿ ₹10,000 ವರೆಗೆ ಬಹುಮಾನ ಪಡೆಯುವ ಅವಕಾಶ ನೀಡಲಾಗಿದೆ.

ಹೊಸ ಆದಾಯ ತೆರಿಗೆ ಕಾಯ್ದೆ ಬಗ್ಗೆ ಜಾಗೃತಿ
ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಕಾಯ್ದೆ 2025ನ್ನು ಜಾರಿಗೆ ತಂದಿದ್ದು, ಏಪ್ರಿಲ್ 1ರಿಂದ ಇದು ಕಾರ್ಯರೂಪಕ್ಕೆ ಬಂದಿದೆ. 1961ರ ಹಳೆಯ ಇನ್‌ಕಮ್ ಟ್ಯಾಕ್ಸ್ ಕಾಯ್ದೆಯ ಬದಲು ಹೊಸ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ತೆರಿಗೆದಾರರಿಗೆ ಸೇವೆಗಳು ಸುಲಭವಾಗುವಂತೆ ನಿಯಮಗಳನ್ನು ಸರಳಗೊಳಿಸಲಾಗಿದೆ.
ಸಾಮಾನ್ಯ ಜನರು ಸಹ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಹೊಸ ಐಟಿ ನಿಯಮಗಳನ್ನು ರೂಪಿಸಲಾಗಿದೆ. Income Tax Return (ITR) ಸಲ್ಲಿಸುವ ಪ್ರಕ್ರಿಯೆಯನ್ನೂ ಸರಳಗೊಳಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ವಿಶೇಷ ಕ್ವಿಜ್ ಕಾರ್ಯಕ್ರಮ ಆರಂಭಿಸಿದೆ.
ಕ್ವಿಜ್ ಗೆದ್ದರೆ ₹10,000 ಬಹುಮಾನ
ಈ ಕ್ವಿಜ್ ಅನ್ನು Income Tax Department ಹಾಗೂ ಸರ್ಕಾರದ MyGov ಪೋರ್ಟಲ್ ಸಹಯೋಗದಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಒಟ್ಟು 80 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ 10 ಮಂದಿ ವಿಜೇತರಿಗೆ ₹10,000 ಬಹುಮಾನ ನೀಡಲಾಗುತ್ತದೆ.
ಇನ್ನೂ ಮುಂದಿನ 20 ಮಂದಿಗೆ ₹5,000 ಹಾಗೂ ನಂತರದ 50 ಮಂದಿಗೆ ₹3,000 ಬಹುಮಾನ ನೀಡಲಾಗುತ್ತದೆ. ಈ ಕ್ವಿಜ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಪಾರ್ಟಿಸಿಪೇಶನ್ ಇ-ಸರ್ಟಿಫಿಕೆಟ್ ಸಹ ನೀಡಲಾಗುತ್ತದೆ.
ಕೇವಲ 10 ಪ್ರಶ್ನೆಗಳ ಕ್ವಿಜ್
ಈ ಕ್ವಿಜ್‌ನಲ್ಲಿ ಒಟ್ಟು 10 ಪ್ರಶ್ನೆಗಳು ಇರುತ್ತವೆ. ಪ್ರಶ್ನೆಗಳು ಹೊಸ ಆದಾಯ ತೆರಿಗೆ ಕಾಯ್ದೆ ಮತ್ತು ಅದರ ನಿಯಮಗಳಿಗೆ ಸಂಬಂಧಪಟ್ಟಿರುತ್ತವೆ. ಕ್ವಿಜ್ ಅನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು. ವಿಶೇಷವೆಂದರೆ ನೆಗಟಿವ್ ಮಾರ್ಕಿಂಗ್ ಇಲ್ಲ.
ಒಬ್ಬ ವ್ಯಕ್ತಿ ಕೇವಲ ಒಮ್ಮೆ ಮಾತ್ರ ಕ್ವಿಜ್‌ನಲ್ಲಿ ಭಾಗವಹಿಸಲು ಅವಕಾಶ ಇದೆ. ಭಾಗವಹಿಸಲು ಮೊದಲು MyGov ಪೋರ್ಟಲ್ ನಲ್ಲಿ ಲಾಗಿನ್ ಮಾಡಿ, ನಂತರ Income Tax Quiz ಆಯ್ಕೆ ಮಾಡಿ ಉತ್ತರಿಸಬೇಕು.
ಹಣ ನೇರವಾಗಿ ಬ್ಯಾಂಕ್ ಖಾತೆಗೆ
ಕ್ವಿಜ್ ಸ್ಪರ್ಧೆ ಮಾರ್ಚ್ 20, 2025ರಿಂದ ಆರಂಭವಾಗಿ ಏಪ್ರಿಲ್ 20ರವರೆಗೆ ನಡೆಯಲಿದೆ. ವಿಜೇತರ ಪಟ್ಟಿಯನ್ನು ನಂತರ ಪ್ರಕಟಿಸಲಾಗುತ್ತದೆ. ಗೆದ್ದವರಿಗೆ ಬಹುಮಾನ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಜನರಿಗೆ ಹೊಸ ತೆರಿಗೆ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಇದ್ದರೆ ಯಾರಾದರೂ ಈ ಕ್ವಿಜ್‌ನಲ್ಲಿ ಸುಲಭವಾಗಿ ಭಾಗವಹಿಸಬಹುದು.



