ಮೋದಿಜಿ ಸರ್ಕಾರದಿಂದ ಬಂಪರ್ ಯೋಜನೆ, ಮಹಿಳೆಯರಿಗೆ ಮಾಸಿಕ 7,000 ರೂಪಾಯಿ

14 ರಿಂದ 70 ವರ್ಷದ ಮಹಿಳೆಯರು ಈ ಯೋಜನೆಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದಾಗಿದೆ. 2024ರ ಡಿಸೆಂಬರ್ 9ನೇ ತಾರೀಕಿನಂದು ನರೇಂದ್ರ ಮೋದಿ ರವರಿಂದ ಪ್ರಾರಂಭವಾದ ಯೋಜನೆ

- - - - - - - - - - - - - Story - - - - - - - - - - - - -
  • ಸರ್ಕಾರದ ಈ ಯೋಜನೆಯಿಂದ ಮಹಿಳೆಯರು 7,000 ದುಡಿಬಹುದು.
  • ಬಿಮಾ ಸಖಿ ಯೋಜನೆಯಲ್ಲಿ ಸೇರಿಕೊಳ್ಳುವುದಕ್ಕೆ ಇವೆ ಕಡ್ಡಾಯ ನಿಯಮಗಳು.
  • ಇಂಥವರು ಬಿಮಾ ಸಖಿ ಯೋಜನೆ ಅಡಿಯಲ್ಲಿ ಸೇರ್ಪಡೆಗೊಳ್ಳಲು ಸಾಧ್ಯವಿಲ್ಲ.

LIC Bima Sakhi Scheme : ಮಹಿಳೆಯರನ್ನು ಸಮಾಜದಲ್ಲಿ ಸಬಲರನ್ನಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಿಮಗೆ ಎಲ್ಐಸಿ ಬಿಮಾ ಸಖಿ ಯೋಜನೆಯ ಬಗ್ಗೆ ಹೇಳಲು ಹೊರಟಿದ್ದೇವೆ.

ಗೃಹಿಣಿಯರಿಗೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹಾಗಾದ್ರೆ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ಬಿಮಾ ಸಖಿ ಯೋಜನೆ

14 ರಿಂದ 70 ವರ್ಷದ ಮಹಿಳೆಯರು ಈ ಯೋಜನೆಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದಾಗಿದೆ. 2024ರ ಡಿಸೆಂಬರ್ 9ನೇ ತಾರೀಕಿನಂದು ನರೇಂದ್ರ ಮೋದಿ ರವರಿಂದ ಪ್ರಾರಂಭವಾದಂತಹ ಈ ಯೋಜನೆ ಅಡಿಯಲ್ಲಿ ಒಂದೇ ತಿಂಗಳಲ್ಲಿ 50,000 ಕ್ಕೂ ಹೆಚ್ಚಿನ ಮಹಿಳೆಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ಮೋದಿಜಿ ಸರ್ಕಾರದಿಂದ ಬಂಪರ್ ಯೋಜನೆ, ಮಹಿಳೆಯರಿಗೆ ಮಾಸಿಕ 7,000 ರೂಪಾಯಿ

ಇದಕ್ಕಾಗಿ 10ನೇ ತರಗತಿ ಪಾಸ್ ಆಗಿರ್ಬೇಕಾಗಿರುತ್ತದೆ. ಇದಕ್ಕಾಗಿ ಮಹಿಳೆಯರಿಗೆ ಟ್ರೈನಿಂಗ್ ಕೂಡ ನೀಡಲಾಗುತ್ತದೆ ಹಾಗೂ ಮೊದಲ ಮೂರು ವರ್ಷ ಸ್ಟೈಪೆಂಡ್ ನೀಡಲಾಗುತ್ತದೆ. ಅದಾದ್ಮೇಲೆ ಎಲ್ಐಸಿ ಏಜೆಂಟಾಗಿ ಕೆಲಸ ಮಾಡುವ ಅವಕಾಶ ಸಿಗುತ್ತೆ. ಡಿಗ್ರಿ ಮುಗಿಸಿದ್ರೆ ಡೆವಲಪ್ಮೆಂಟ್ ಆಫೀಸರ್ ಆಗಿ ಕೂಡ ಕೆಲಸ ಮಾಡಬಹುದು.

ಒಂದು ತಿಂಗಳಲ್ಲಿ 52,511 ಮಹಿಳೆಯರು ನೋಂದಾವಣೆ ಮಾಡಿಕೊಂಡಿದ್ದು, ಇದರಲ್ಲಿ 14,583 ಮಹಿಳೆಯರು ಪಾಲಿಸಿನ ಮಾರಾಟ ಮಾಡಿಕೊಂಡಿದ್ರೆ, 27,695 ಮಹಿಳೆಯರಿಗೆ ಅಪಾಯಿಂಟ್ಮೆಂಟ್ ಸರ್ಟಿಫಿಕೇಟ್ ಕೂಡ ನೀಡಲಾಗಿದೆ.

Women Can Earn 7,000 with LIC Bima Sakhi Scheme

ಕಡಿಮೆ ಸಮಯದಲ್ಲಿ ನಿಗದಿತ ಆದಾಯ ಪಡೆದುಕೊಳ್ಳುವುದಕ್ಕೆ ಉತ್ತಮ ಮಾರ್ಗವಾಗಿದೆ. ಒಂದು ವರ್ಷದಲ್ಲಿ ಪ್ರತಿ ಪಂಚಾಯತ್ ನಲ್ಲಿ ಕೂಡ ಒಬ್ಬ ಬಿಮಾ ಸಖಿಯನ್ನು ನೇಮಿಸುವುದು ನಮ್ಮ ಗುರಿ ಎಂಬುದಾಗಿ ಎಲ್ಐಸಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಇದಕ್ಕಾಗಿ ಬೇಕಾಗಿರುವಂತಹ ತರಬೇತಿಗಳನ್ನು ಕೂಡ ನೀಡಲಾಗುತ್ತಿದೆ ಎನ್ನುವುದನ್ನ ಇಲ್ಲಿ ಹೇಳಿಕೊಂಡಿದ್ದಾರೆ.

ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ 5000 ರೂಪಾಯಿ! ಕೂಡಲೇ ಅರ್ಜಿ ಸಲ್ಲಿಸಿ

ಸದ್ಯಕ್ಕೆ ಮುಂದಿನ ಮೂರು ವರ್ಷಗಳಲ್ಲಿ ಎಲ್ಐಸಿ ಸಂಸ್ಥೆ 2 ಲಕ್ಷ ಬಿಮಾ ಸಖಿಯರನ್ನು ನೇಮಿಸುವಂತ ಗುರಿಯನ್ನು ಹೊಂದಿದೆ. ಮೊದಲ ವರ್ಷ 7,000, ಎರಡನೇ ವರ್ಷ 6000 ಹಾಗೂ ಮೂರನೇ ವರ್ಷ ಐದು ಸಾವಿರ ಸ್ಟೈಪಂಡ್ ಅನ್ನು ಬಿಮಾ ಸಖಿಯರಿಗೆ ಅನ್ನು ನೀಡುವುದರ ಜೊತೆಗೆ ಕಮಿಷನ್ ಅನ್ನು ಕೂಡ ನೀಡಲಾಗುತ್ತದೆ.

ರಿಟೈರ್ಮೆಂಟ್ ಆಗಿರುವಂತಹ ಉದ್ಯೋಗಿಗಳು ಅಥವಾ ಈಗಾಗಲೇ ಎಲ್ಐಸಿ ಏಜೆಂಟ್ ಆಗಿರುವ ಸಂಬಂಧಿಕರು ಅರ್ಜಿ ಸಲ್ಲಿಸುವ ಹಾಗಿಲ್ಲ. ಇನ್ನು ಸೇರ್ಪಡೆಗೊಳ್ಳುವುದಕ್ಕೆ ಹತ್ತಿರದ ಎಲ್ಐಸಿ ಕಚೇರಿಗೆ ಹೋಗಿ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿ ಹಾಗು ಅಗತ್ಯವಾಗಿರುವಂತಹ ಡಾಕ್ಯುಮೆಂಟ್ ಗಳನ್ನು ನೀವು ಒದಗಿಸಬೇಕಾಗಿರುತ್ತದೆ. ಈ ಮೂಲಕ ನಿಮ್ಮ ಸ್ವಾವಲಂಬಿ ಜೀವನದ ಪ್ರಯಾಣವನ್ನ ಪ್ರಾರಂಭ ಮಾಡಬಹುದು.

Women Can Earn 7,000 with LIC Bima Sakhi Scheme, Know the Rules and Eligibility

English Summary
Related Stories