ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 10 ಲಕ್ಷ ರೂಪಾಯಿಗಳ ಸಾಲ!
Loan Scheme : ಮಹಿಳಾ ಉದ್ಯಮಿಗಳು 10 ಲಕ್ಷ ರೂಪಾಯಿ ಗಳಿಂದ ಒಂದು ಕೋಟಿ ರೂಪಾಯಿಗಳವರೆಗೂ ಕೂಡ ಸಾಲ (Loan) ಪಡೆಯಬಹುದು.
Loan Scheme : ಇಂದು ದೇಶದಲ್ಲಿ ಸಾಕಷ್ಟು ಮಹಿಳಾ entrepreneur ಗಳನ್ನು ಕಾಣಬಹುದು. ತಮ್ಮದೇ ಆಗಿರುವ ಸ್ವಂತ ಉದ್ದಿಮೆ (Own business) ಯನ್ನು ಆರಂಭಿಸಿ ಕಷ್ಟಪಟ್ಟು ದುಡಿದು ಇಂದು ಉತ್ತಮ ಸ್ಥಾನದಲ್ಲಿ ನಿಂತಿರುವ ಮಹಿಳೆಯರು ಸಾಕಷ್ಟು ಜನರಿದ್ದಾರೆ.
ಮಹಿಳೆಯರು ಕೂಡ ಇಂದು ಸ್ವಾವಲಂಬಿ (independence life) ಯಾಗಿ ಜೀವನ ನಡೆಸಬೇಕು ಎನ್ನುವ ಅಭಿಲಾಷೆ ಹೊಂದಿರುತ್ತಾರೆ. ಇದನ್ನು ಈಡೇರಿಸಲು ಸರಕಾರವು ಕೂಡ ಸಾಕಷ್ಟು ಯೋಜನೆಗಳ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡುತ್ತಿದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಡಬಲ್ ಆದಾಯ! ಕೈತುಂಬಾ ಹಣ
ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಮಹಿಳಾ ಉದ್ಯಮಿಗಳು 10 ಲಕ್ಷ ರೂಪಾಯಿ ಗಳಿಂದ ಒಂದು ಕೋಟಿ ರೂಪಾಯಿಗಳವರೆಗೂ ಕೂಡ ಸಾಲ (Loan) ಪಡೆಯಬಹುದು. ಅದುವೇ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ!
ಏನಿದು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ! (Stand up India scheme)
10 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳ ವರೆಗೂ ಕೂಡ ಯಾವುದೇ ಬ್ಯಾಂಕ್ ನಲ್ಲಿ ಸ್ಟ್ಯಾಂಡ್ ಆಫ್ ಇಂಡಿಯಾ ಯೋಜನೆ ಅಡಿಯಲ್ಲಿ ಮಹಿಳಾ ಉದ್ಯಮಿಗಳು ಅಥವಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಸಾಲ ಸೌಲಭ್ಯ ಪಡೆಯಬಹುದು.
ಇದು ಕಾಂಪೋಸಿಟ್ ಸಾಲ (composite loan) ವಾಗಿದೆ. ಅಂದರೆ ಕರಾರು ಸಾಲವು ಹೌದು, ಕಾರ್ಯವಾಹಿ ಬಂಡವಾಳ ಸಾಲವು ಹೌದು. ಉತ್ಪಾದನೆ, ಸೇವೆ, ವ್ಯಾಪಾರ ಮೊದಲಾದ ಕ್ಷೇತ್ರದಲ್ಲಿ ಸ್ವ ಉದ್ಯಮ ಮಾಡುವ ಮಹಿಳೆಯರಿಗೆ, ಸಾಲ ನೀಡಲಾಗುತ್ತದೆ. ಪಾಲುದಾರಿಕೆಯ ಸಂಸ್ಥೆಯಾಗಿದ್ದರೆ, ಶೇಕಡ 51% ನಷ್ಟು ಷೇರು, ಮಹಿಳೆಯರು ಅಥವಾ ಪರಿಶಿಷ್ಟ ಜಾತಿ ಅಥವಾ ಪಂಗಡದ ಪುರುಷ ಹೊಂದಿರಬೇಕು.
ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಫೆಬ್ರವರಿ 1ರಿಂದ ಹೊಸ ರೂಲ್ಸ್!
ಅರ್ಜಿಯನ್ನು ಯಾರು ಸಲ್ಲಿಸಬಹುದು!
ಸ್ವ ಉದ್ಯಮ ಮಾಡಲು ಬಯಸುವ ಮಹಿಳೆಯರು
ಪರಿಶಿಷ್ಟ ಜಾತಿ ಅಥವಾ ಪಂಗಡದ ವ್ಯಕ್ತಿ.
ಸಾಲ ಪಡೆಯಲು 18 ವರ್ಷ ಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು.
ಹಸಿರು ಯೋಜನೆ ಕ್ಷೇತ್ರಗಳಾದ ಉತ್ಪಾದನೆ, ಸೇವೆ, ವ್ಯಾಪಾರ ಈ ಮೂರು ಕ್ಷೇತ್ರಗಳಲ್ಲಿ ಕೆಲಸ ಮಾಡಿದರೆ ಮಾತ್ರ ಸಾಲ ಸಿಗುತ್ತದೆ.
ಸಾಲ ಪಡೆದುಕೊಳ್ಳುವವರು ಬ್ಯಾಂಕ್ ಸದಸ್ಯರಾಗಿರಬಾರದು.
ಈ 10 ರೂಪಾಯಿ ನೋಟು ನಿಮ್ಮ ಬಳಿ ಇದ್ರೆ ನೀವೇ ಲಕ್ಷಾಧಿಪತಿ! ಇಲ್ಲಿದೆ ಮಾಹಿತಿ
ಈ ಮೇಲಿನ ಎಲ್ಲಾ ಅರ್ಹತೆಗಳು ನಿಮಗೆ ಇದ್ದರೆ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಸ್ಟ್ಯಾಂಡ್ ಅಪ್ ಇಂಡಿಯಾ ಸಾಲವನ್ನು ಕೇಳಿ. ಕಡಿಮೆ ಬಡ್ಡಿ ದರದಲ್ಲಿ ಸರ್ಕಾರ ಈ ಸೌಲಭ್ಯವನ್ನು, ದುಡಿದು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಕನಸು ಕಾಣುವ ಪ್ರತಿಯೊಬ್ಬ ಮಹಿಳೆಗೂ ಕೂಡ ಬ್ಯಾಂಕ್ (Bank Loan) ಮೂಲಕ ಒದಗಿಸುತ್ತಿದೆ.
Women who have their own business will get a loan of 10 lakh rupees