ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಫೆಬ್ರವರಿ 1ರಿಂದ ಹೊಸ ರೂಲ್ಸ್!

ಪ್ರತಿ ತಿಂಗಳು ಮುಗಿದು ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ಸರ್ಕಾರ ಕೆಲವು ಕ್ಷೇತ್ರಗಳಲ್ಲಿ ಕೆಲವು ಬದಲಾವಣೆ ಮಾಡುತ್ತದೆ. ಅದು ಬ್ಯಾಂಕಿಂಗ್ ಕ್ಷೇತ್ರ (banking sector) ವಾಗಿರಬಹುದು ಅಥವಾ ಇತರ ಯಾವುದೇ ವ್ಯವಹಾರ ಆಗಿರಬಹುದು, ನಿಯಮಗಳಲ್ಲಿ ಬದಲಾವಣೆ ಹಾಗೂ ನಿಯಮಗಳ ಪರಿಷ್ಕರಣೆ ಮಾಡಲಾಗುತ್ತದೆ.
ಇನ್ನೇನು ಜನವರಿ ತಿಂಗಳು ಕಳೆದು ಫೆಬ್ರವರಿ ತಿಂಗಳು ಆರಂಭವಾಗಲಿದೆ. ಫೆಬ್ರುವರಿ ತಿಂಗಳಿನಲ್ಲಿ ಬ್ಯಾಂಕ್ ಅಕೌಂಟ್ (Bank Account), ಸಿಲಿಂಡರ್ (Gas Cylinder), ಫಾಸ್ಟ್ ಟ್ಯಾಗ್ (Fastag) ಹೀಗೆ ಮೊದಲಾದ ವಿಚಾರಗಳಲ್ಲಿ ನಿಯಮ ಬದಲಾವಣೆ ಆಗಲಿದ್ದು ಇದರಿಂದ ಗ್ರಾಹಕರಿಗೆ ತೊಂದರೆ ಆಗಲಿದ್ಯಾ ಅಥವಾ ಪ್ರಯೋಜನ ಆಗಲಿದೆಯಾ ಎನ್ನುವುದನ್ನು ನೋಡೋಣ.
ಈ 10 ರೂಪಾಯಿ ನೋಟು ನಿಮ್ಮ ಬಳಿ ಇದ್ರೆ ನೀವೇ ಲಕ್ಷಾಧಿಪತಿ! ಇಲ್ಲಿದೆ ಮಾಹಿತಿ
ಆರ್ ಬಿ ಐ ರೂಲ್ಸ್! (RBI new rules)
ವರ್ಷದ ಎರಡನೇ ತಿಂಗಳು ಫೆಬ್ರವರಿ ತಿಂಗಳಿನಲ್ಲಿ ಕೇಂದ್ರ ಬಜೆಟ್ ಕೂಡ ಮಂಡನೆ ಆಗಲಿದೆ. ಸಾಕಷ್ಟು ಜನ ಕೇಂದ್ರ ಬಜೆಟ್ ಮೇಲೆ ಈ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬ್ಯಾಂಕ್ ಖಾತೆಯ ಕನಿಷ್ಠ ಬ್ಯಾಲೆನ್ಸ್ ಹಾಗೂ ಸಿಬಿಲ್ ಸ್ಕೋರ್ ಗೆ ಸಂಬಂಧಪಟ್ಟ ಹಾಗೆ, ಫೆಬ್ರವರಿ 1.2024ಕ್ಕೆ ಹೊಸ ನಿಯಮ ಜಾರಿಗೆ ತರಲಿದೆ. ಇದು ಸಾಲದ ಪ್ರಕ್ರಿಯೆ ಹಾಗೂ ಬ್ಯಾಂಕಿಂಗ್ ವ್ಯವಹಾರದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.
IMPS ನಿಯಮ ಪರಿಷ್ಕರಣೆ!
ಐ ಎಂ ಪಿ ಎಸ್ ಹಣಕಾಸಿನ ವಹಿವಾಟು ಮತ್ತೊಂದು ಹಂತಕ್ಕೆ ಮೇಲೆರಲಿದೆ. ಇನ್ಮುಂದೆ ಇನ್ನೊಬ್ಬ ಬ್ಯಾಂಕ್ ಖಾತೆದಾರನ ಹೆಸರು ನೋಂದಾಯಿಸಿಕೊಂಡರೆ 5 ಲಕ್ಷ ವಹಿವಾಟು ನಡೆಸಬಹುದು. ಬಹಳ ಬೇಗ ಹಣಕಾಸು ವ್ಯವಹಾರ ಮಾಡಲು ಈ ವ್ಯವಸ್ಥೆ ಜಾರಿಗೆ ತರಲಾಗುವುದು. ಇದು ವೈಯಕ್ತಿಕ ಬಳಕೆದಾರರಿಗೆ ಹೆಚ್ಚು ಪ್ರಯೋಜನ ನೀಡಲಿದೆ. ಕೇವಲ 10 ಸೆಕೆಂಡ್ ಗಳಲ್ಲಿ ಹಣಕಾಸು ವಹಿವಾಟು ನಡೆಸಬಹುದು.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 6 ರೂಪಾಯಿ ಉಳಿತಾಯ ಮಾಡಿ 1 ಲಕ್ಷ ನಿಮ್ಮದಾಗಿಸಿಕೊಳ್ಳಿ
ಎಸ್ ಬಿ ಐ ಗೃಹ ಸಾಲ! SBI home loan

ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಹೊರಬಿತ್ತು ಹೈಕೋರ್ಟ್ ನ ಐತಿಹಾಸಿಕ ತೀರ್ಪು!
ಪಂಜಾಬ್ ಸಿಂಧ್ ಬ್ಯಾಂಕ್ ನ 444 ದಿನಗಳ ಎಫ್ ಡಿ! PSB bank FD
ಬಿ ಎಸ್ ಬಿ ಬ್ಯಾಂಕ್ 444 ದಿನಗಳ ಎಫ್‌ಡಿ ಯೋಜನೆಯ ಆರಂಭಿಸಿದ್ದು, ಈ ಹೂಡಿಕೆ ಮಾಡಿದ ಸಾಮಾನ್ಯ ಗ್ರಾಹಕರಿಗೆ 7.4%, ಹಿರಿಯ ನಾಗರಿಕರಿಗೆ 7.8% ಹಾಗೂ ಸೂಪರ್ ಹಿರಿಯ ನಾಗರಿಕರಿಗೆ 8.05% ಬಡ್ಡಿ ನೀಡಲಾಗುತ್ತದೆ.
ಫಾಸ್ಟ್ ಟ್ಯಾಗ್ ಗೆ ಕೆವೈ ಸಿ! KYC for Fastag
ಇನ್ನು ಮುಂದೆ ಟೋಲ್ ಗೇಟ್ ನಲ್ಲಿ ಮುಂದೆ ಹೋಗಲು ಫಾಸ್ಟ್ ಟ್ಯಾಗ್ ಗಳಿಗೆ KYC ಕೂಡ ಕಡ್ಡಾಯವಾಗಿದೆ. ನಗದು ವ್ಯವಹಾರವನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದೆ. ಹಾಗೂ ವಂಚನೆಯನ್ನು ತಡೆಗಟ್ಟಲು ಈ ನಿಯಮ ಜಾರಿಗೆ ಬರಲಿದೆ. ಇನ್ನು ಮುಂದೆ ಕೆವೈಸಿ ಮಾಡಿಸಿಕೊಳ್ಳದಿದ್ದರೆ FASTag ನಿಷೇಧಿಸಲಾಗುತ್ತದೆ ಹಾಗೂ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಬಾಡಿಗೆ ಮನೆಯಲ್ಲಿ ಇರೋರು ತಪ್ಪದೆ ತಿಳಿಯಿರಿ! ನಿಯಮದಲ್ಲಿ ಹೊಸ ಬದಲಾವಣೆ
ಉಜ್ವಲ ಯೋಜನೆಯಲ್ಲಿ ಭಾರಿ ಬದಲಾವಣೆ!
ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡುವಂತಹ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವವರು, ಗ್ಯಾಸ್ ಬುಕ್ ಗೆ ಕೆವೈಸಿ ಮಾಡಿಸಿಕೊಳ್ಳಬೇಕು. ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳಿಸಿ. ಇದನ್ನು ಮಾಡಿಸಿಕೊಳ್ಳದೆ ಇದ್ದರೆ ಸಬ್ಸಿಡಿ ಹಣ ಸಿಗುವುದಿಲ್ಲ.
New rules from February 1 including bank account, gas cylinder



