ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಹೊರಬಿತ್ತು ಹೈಕೋರ್ಟ್ ನ ಐತಿಹಾಸಿಕ ತೀರ್ಪು!

Story Highlights

ಹೆಣ್ಣು ಮಕ್ಕಳಿಗೂ ಕೂಡ ಆಕೆಯ ಮದುವೆಯ ನಂತರ ಪಿತ್ರಾರ್ಜಿತ (Inheritance property) ಆಸ್ತಿಯಲ್ಲಿ ಹಕ್ಕು ಇದೆ

ಹೆಣ್ಣು ಮಕ್ಕಳಿಗೂ ಕೂಡ ತಂದೆಯ ಆಸ್ತಿ (rights to property) ಯಲ್ಲಿ ಸಮಾನವಾದ ಹಕ್ಕು ನೀಡಬೇಕು ಗಂಡು ಮಕ್ಕಳಿಗೆ ಹೇಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದಿಯೋ ಅದೇ ರೀತಿ ಹೆಣ್ಣು ಮಕ್ಕಳಿಗೂ ಕೂಡ ಆಕೆಯ ಮದುವೆಯ ನಂತರ ಪಿತ್ರಾರ್ಜಿತ (Inheritance property) ಆಸ್ತಿಯಲ್ಲಿ ಹಕ್ಕು ಇದೆ ಎಂದು ಈಗಾಗಲೇ ಸುಪ್ರೀಂ ಕೋರ್ಟ್ (supreme court) ಆದೇಶ ಹೊರಡಿಸಿದೆ. ಆದರೆ ಹಿಂದೂ ಉತ್ತರಾಧಿಕಾರ ಕಾಯ್ದೆ 2005ರ ತಿದ್ದುಪಡಿಗಿಂತ ಮೊದಲು ನಿಯಮಗಳು ಬೇರೆ.

ಹೌದು, 2005ರಲ್ಲಿ ಇಂದು ಉತ್ತರಾಧಿಕಾರ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. 2005ಕ್ಕಿಂತ ಮೊದಲು ಹೆಣ್ಣು ಮಕ್ಕಳಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಪಾಲು ಇತ್ತು. ಆದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವಂತೆ ಇರಲಿಲ್ಲ. ಅದು ಗಂಡು ಮಕ್ಕಳಿಗೆ ಮಾತ್ರ ಸೇರುತ್ತಿತ್ತು.

ಬಾಡಿಗೆ ಮನೆಯಲ್ಲಿ ಇರೋರು ತಪ್ಪದೆ ತಿಳಿಯಿರಿ! ನಿಯಮದಲ್ಲಿ ಹೊಸ ಬದಲಾವಣೆ

ಈ ಕಾನೂನು ಬದಲಾವಣೆ ಮಾಡಿ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಹಕ್ಕು ನೀಡಬೇಕು ಎನ್ನುವ ಕಾನೂನನ್ನು ಜಾರಿಗೆ ತರಲಾಯಿತು. ಆದರೆ 2005ಕ್ಕಿಂತ ಮೊದಲು ಇದು ಯಾವುದೇ ಹೆಣ್ಣು ಮಗಳು ತನ್ನ ತಂದೆಯ ಆಸ್ತಿ ಬೇಡ ಎಂದು ಪತ್ರಕ್ಕೆ ಸಹಿ ಹಾಕಿ ಕೊಟ್ಟಿದ್ದರೆ ಈ ತಿದ್ದುಪಡಿಯ ನಂತರವೂ ಕೂಡ ತಂದೆ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ.

ಹೆಣ್ಣು ಮಕ್ಕಳು ವಾರಸುದಾರರಿಗೆ ಪಾಲು!

Property Documents2005 ಕ್ಕಿಂತ ಮೊದಲು ಬದುಕಿದ್ದ ತಾಯಿಯ ಮಕ್ಕಳಿಗೆ ಆಕೆಯ ತಂದೆಯ ಆಸ್ತಿಯಲ್ಲಿ ಹಕ್ಕು ಇದೆ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಇತ್ತೀಚಿಗೆ ಗದಗದ ಪ್ರಕರಣ ಒಂದರಲ್ಲಿ ಹೈಕೋರ್ಟ್ ತೀರ್ಪನ್ನು ನೀಡಿದೆ.

ಹಿಂದೆ 2005 ಮೊದಲು ಬದುಕಿದ್ದ ಮಹಿಳೆಯ ಮಕ್ಕಳಿಗೆ ಮಾತ್ರ ಆಕೆಯ ಪಾಲಿಗೆ ಬಂದಿರುವ ಆಸ್ತಿಯಲ್ಲಿ ಹಕ್ಕು ಇರುತ್ತಿತ್ತು. 2005 ತಿದ್ದುಪಡಿಯ ನಂತರ ಹೆಣ್ಣು ಮಕ್ಕಳು ಬದುಕಿದ್ದರು ಅಥವಾ ಇಲ್ಲದೇ ಇದ್ದರೂ ಅವರ ಆಸ್ತಿಯವರ ವಾರಸುದಾರರಿಗೆ ಸೇರಬೇಕು ಎಂದು ತಿಳಿಸಲಾಗಿದೆ.

ಆಸ್ತಿ, ಜಮೀನು, ಮನೆ ಖರೀದಿ ಮಾಡೋರಿಗೆ ಹೊಸ ನಿಯಮ! ಬಾರೀ ಬದಲಾವಣೆ

ಒಂದು ವೇಳೆ 2005ಕ್ಕೂ ಮೊದಲೇ ಹೆಣ್ಣು ಮಕ್ಕಳು ತೀರಿಕೊಂಡಿದ್ದರೆ ಅವರ ಉತ್ತರಾಧಿಕಾರಿಗೆ ಆಸ್ತಿ ಹಕ್ಕನ್ನು ನಿರಾಕರಿಸುವಂತಿಲ್ಲ. ಸೆಪ್ಟೆಂಬರ್ 9, 2005 ಮೊದಲು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ ಎನ್ನುವ ಕಾರಣಕ್ಕೆ ಅವರ ವಾರಸುದಾರರಿಂದ ಅವರಿಗೆ ಸಿಗಬೇಕಾದ ಆಸ್ತಿ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ. ಆ ರೀತಿ ಏನಾದ್ರೂ ಮಾಡಿದ್ರೆ ನ್ಯಾಯಾಲಯದ ಮೊರೆ ಹೋಗಬಹುದು.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಚನ್ನಬಸಪ್ಪ ಎನ್ನುವವರ, ಅಪೀಲನ್ನು ವಜಾಗೊಳಿಸಿರುವ ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. 2005ರ ತಿದ್ದುಪಡಿ ಲಿಂಗ ಸಮಾನತೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ಬಂದಿರುವ ಆಸ್ತಿಯಲ್ಲಿ ಅವರ ಮಕ್ಕಳು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಸಮಾನ ಹಕ್ಕನ್ನು ಹೊಂದಿರುತ್ತಾರೆ.

ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

The historic decision of the High Court came out in the matter of property Rights

Related Stories