ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ಯಾರ ಮನೆಗೆ ಇದುವರೆಗೆ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ (LPG gas connection) ಇಲ್ಲವೋ ಅಂತವರು ಮಾತ್ರ ಈ ಯೋಜನೆಯ ಫಲಾನುಭವಿಗಳು ಆಗಬಹುದು.

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರ (Central government) ಮಹಿಳೆಯರಿಗಾಗಿ ಉಚಿತ ಗ್ಯಾಸ್ ಕನೆಕ್ಷನ್ (free gas connection) ನೀಡುತ್ತಿದೆ. ಇಂದು ಕೋಟ್ಯಾಂತರ ಕುಟುಂಬಗಳು ಸುಲಭವಾಗಿ ಇಂತಹ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡು ಅಡುಗೆ ಮಾಡಲು ಸಾಧ್ಯವಾಗಿದೆ. ಕಟ್ಟಿಗೆ, ಹೊಗೆ ಇವುಗಳಿಂದ ದೂರ ಉಳಿದು ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0! (Pradhanmantri Ujjwala Yojana 2.0)

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಇಂದು ಸಾಕಷ್ಟು ಮಹಿಳೆಯರು ತಮ್ಮ ಮನೆಗೆ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಯಾರ ಮನೆಗೆ ಇದುವರೆಗೆ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ (LPG gas connection) ಇಲ್ಲವೋ ಅಂತವರು ಮಾತ್ರ ಈ ಯೋಜನೆಯ ಫಲಾನುಭವಿಗಳು ಆಗಬಹುದು. ಮತ್ತು ಇದು ಮಹಿಳೆಯರಿಗೆ ಮಾತ್ರ ಲಭ್ಯ ಇರುವ ಯೋಜನೆಯಾಗಿದೆ.

BPL ration card Holder will get free gas cylinder and stove

ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್; ಸಿಗಲಿದೆ 10 ಲಕ್ಷ ರೂಪಾಯಿವರೆಗೆ ಸುಲಭ ಸಾಲ

ಉಚಿತ ಗ್ಯಾಸ್ ಕನೆಕ್ಷನ್! (Free gas connection)

ದೇಶಾದ್ಯಂತ ಸಾಕಷ್ಟು ಮಹಿಳೆಯರು ಉಚಿತ ಗ್ಯಾಸ್ ಕಲೆಕ್ಷನ್ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಕಲೆಕ್ಷನ್ ಜೊತೆಗೆ, ಒಂದು ಗ್ಯಾಸ್ ಸ್ಟವ್, ಒಂದು ಸಿಲಿಂಡರ್ ಹಾಗೂ ಲೈಟರ್ ಇರುವ ಕಿಟ್ ಕೊಡಲಾಗುತ್ತದೆ. ಇದರ ಜೊತೆಗೆ 300 ರೂಪಾಯಿಗಳ ಸಬ್ಸಿಡಿಯನ್ನು ಕೂಡ ಕೇಂದ್ರ ಸರ್ಕಾರ ಘೋಷಿಸಿದ್ದು, ಒಂದು ವರ್ಷದಲ್ಲಿ 12 ಸಿಲೆಂಡರ್ ಗಳನ್ನು ತಲ 605 ರೂಪಾಯಿಗಳಿಗೆ ಖರೀದಿ ಮಾಡಲು ಸಾಧ್ಯವಿದೆ.

Gas Cylinderಯಾರು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಅರ್ಹರು?

*18 ವರ್ಷ ಮೇಲ್ಪಟ್ಟ ಮಹಿಳೆಯರು ಅರ್ಜಿ ಸಲ್ಲಿಸಬಹುದು.

*ಈಗಾಗಲೇ ಗ್ಯಾಸ್ ಕನೆಕ್ಷನ್ ಇದ್ದರೆ ಮತ್ತೆ ಗ್ಯಾಸ್ ಉಚಿತವಾಗಿ ನೀಡಲಾಗುವುದಿಲ್ಲ.

* ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಅರ್ಜಿ ಸಲ್ಲಿಸಬಹುದು.

*ಬಡತನ ರೇಖೆಗಿಂತ ಕೆಳಗಿರುವವರು, ಎಸ್ ಸಿ, ಎಸ್ ಟಿ ಮಹಿಳೆಯರು, ಬುಡಕಟ್ಟು ಜನಾಂಗ ಮೊದಲಾದವರು ಅರ್ಜಿ ಸಲ್ಲಿಸಬಹುದು.

ಫೋನ್ ಪೇ, ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ!

ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು (documents to apply)

ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರ (EKYC ಕಡ್ಡಾಯ)
ಮನೆಯ ವಿಳಾಸದ ಪುರಾವೆ

ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆಯೋದಕ್ಕೂ ಕಟ್ಟಬೇಕು ತೆರಿಗೆ; ಹೊಸ ನಿಯಮ

ಹೀಗೆ ಅರ್ಜಿ ಸಲ್ಲಿಸಿ! (Apply now)

https://www.pmuy.gov.in/ujjwala2.html ಮೇಲೆ ಕ್ಲಿಕ್ ಮಾಡಿ. ಉಜ್ವಲ 2.0 ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಈಗ ನಿಮಗೆ ಮೂರು ಗ್ಯಾಸ್ ಕಂಪನಿಯ ಹೆಸರು ಕಾಣಿಸುತ್ತದೆ. ಭಾರತ್ ಗ್ಯಾಸ್, ಹೆಚ್ ಪಿ ಗ್ಯಾಸ್ ಹಾಗೂ ಇಂಡಿಯನ್ ಗ್ಯಾಸ್. ಈ ಮೂರಲ್ಲಿ ನಿಮಗೆ ಬೇಕಾಗಿರುವ ಗ್ಯಾಸ್ ಕಂಪನಿಯನ್ನು ಆಯ್ದುಕೊಳ್ಳಿ.

ಆ ಕಂಪನಿಯ ಲೋಗೋ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ಕಂಪನಿಯ ನೇರವಾದ ವೆಬ್ಸೈಟ್ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಅಗತ್ಯ ಇರುವವರಗಳನ್ನು ನೀಡಿ, ಅರ್ಜಿ ಫಾರ್ಮ್ ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ, ನಿಮ್ಮ ಅರ್ಜಿಯನ್ನು ಸಬ್ಮಿಟ್ ಮಾಡಬಹುದು.

ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ನೀವು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು. ಸಾಕಷ್ಟು ಸಂದರ್ಭಗಳಲ್ಲಿ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಸ್ಥಳ ಪರಿಶೀಲನೆ ಮಾಡಬಹುದು. ನಂತರ ಕೆಲವೇ ದಿನಗಳಲ್ಲಿ ನಿಮ್ಮ ಅರ್ಜಿ ಅಪ್ರೂವ್ ಆಗಿದ್ದರೆ ಗ್ಯಾಸ್ ಕನೆಕ್ಷನ್ ಉಚಿತವಾಗಿ ಸಿಗುತ್ತದೆ.

ಗಂಡ ಹೆಂಡತಿ ಇಬ್ಬರೂ ಪಡೆಯಬಹುದು ಪ್ರತಿ ತಿಂಗಳು 6,000 ರೂಪಾಯಿ! ಹೊಸ ಯೋಜನೆ

Apply like this to get free gas cylinder and gas stove