ಗಂಡ ಹೆಂಡತಿ ಇಬ್ಬರೂ ಪಡೆಯಬಹುದು ಪ್ರತಿ ತಿಂಗಳು 6,000 ರೂಪಾಯಿ! ಹೊಸ ಯೋಜನೆ

Story Highlights

ಇ - ಶ್ರಮ್ ಕಾರ್ಡ್ ಹೊಂದಿರುವ ಸಂಘಟಿತ ವಲಯದ ಕಾರ್ಮಿಕರು 3000ಗಳನ್ನು ಪ್ರತಿ ತಿಂಗಳು ಪಿಂಚಣಿಯಾಗಿ (Pension) ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರ (central government) ದೇಶದಲ್ಲಿ ಇರುವ ಪ್ರತಿಯೊಂದು ವರ್ಗದ ಜನರಿಗೂ ಕೂಡ ಅನುಕೂಲವಾಗುವಂತಹ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಅದರಲ್ಲಿ ಕೆಲವು ಮುಖ್ಯ ಯೋಜನೆಗಳನ್ನು ಜಾರಿಗೆ ತರುವುದು ಕೂಡ ಒಂದು. ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೂ ಕೂಡ ಒಂದೇ ರೀತಿಯ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.

ಇ – ಶ್ರಮ್ ಯೋಜನೆ! (E shram scheme)

ಕೇಂದ್ರ ಸರ್ಕಾರ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಇ – ಶ್ರಮ್ ಯೋಜನೆ ಜಾರಿಗೆ ತಂದಿದೆ. ನಿಮ್ಮ ಬಳಿ ಇ – ಶ್ರಮ್ ಯೋಜನೆಯ ಕಾರ್ಡ್ ಇದ್ರೆ ಸರ್ಕಾರದ ಎಲ್ಲಾ ರೀತಿಯ ಯೋಜನೆಯ ಪ್ರಯೋಜನ ಪಡೆಯಬಹುದು.

ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆಯೋದಕ್ಕೂ ಕಟ್ಟಬೇಕು ತೆರಿಗೆ; ಹೊಸ ನಿಯಮ

ಇ – ಶ್ರಮ್ ಕಾರ್ಡ್ ಯಾಕೆ ಬೇಕು?

ಇದು ಹೊಸ ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಮಾತ್ರ ಕೊಡಲಾಗುವ ಕಾರಣ ಆಗಿತ್ತು ಈ ಗುರುತಿನ ಚೀಟಿ ಹೊಂದಿದ್ದರೆ ಅಂತವರಿಗೆ ಸರಕಾರ ಇದು ಯಾವ ಸೌಲಭ್ಯವನ್ನು ನೀಡುತ್ತದೆಯೋ ಅವೆಲ್ಲವನ್ನ ಪಡೆದುಕೊಳ್ಳಬಹುದು.

ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಬ್ಸಿಡಿ ನೀಡುವುದಿರಬಹುದು, ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ಕೂಡ ಇ – ಶ್ರಮ್ ಕಾರ್ಡ್ ಮೂಲಕ ಪಡೆಯಬಹುದು. ಇನ್ನು ಇ – ಶ್ರಮ್ ಕಾರ್ಡ್ ಹೊಂದಿರುವ ಸಂಘಟಿತ ವಲಯದ ಕಾರ್ಮಿಕರು 3000ಗಳನ್ನು ಪ್ರತಿ ತಿಂಗಳು ಪಿಂಚಣಿಯಾಗಿ (Pension) ಪಡೆದುಕೊಳ್ಳಬಹುದು.

2020ರಲ್ಲಿ ಆರಂಭವಾದ ಯೋಜನೆಯ ಅಡಿಯಲ್ಲಿ ಈಗ ಸುಮಾರು 28 ಕೋಟಿ ಜನ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಅಸಂಘಟಿತ ವಲಯ (non organised sector) ದಲ್ಲಿ ಕೆಲಸ ಮಾಡುವವರಿಗೆ ನೀಡಲಾಗುವ ಇ – ಶ್ರಮ್ ಕಾರ್ಡ್ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ.

ಇನ್ಮುಂದೆ ಆಸ್ತಿ ಮಾರಾಟ, ಖರೀದಿ ಹಾಗೂ ನೋಂದಣಿಗೆ ಹೊಸ ರೂಲ್ಸ್! ಇಲ್ಲಿದೆ ಮಾಹಿತಿ

Pension Schemeಯಾರು ಇ – ಶ್ರಮ್ ಕಾರ್ಡ್ ಪಡೆಯಬಹುದು? (Eligibilities)

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಾದ, ಹಾಲು ಹಾಕುವವರು, ನ್ಯೂಸ್ ಪೇಪರ್ ಹಾಕುವವರು, ವ್ಯಾಪಾರಿಗಳು, ಕಿರಾಣಿ ಅಂಗಡಿಯವರು, ಆಟೋ ಡ್ರೈವರ್ ಗಳು, ಕೃಷಿ ಕಾರ್ಮಿಕರು ಬೀದಿ ಬದಿಯಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವವರು ಇ – ಶ್ರಮ್ ಕಾರ್ಡ್ ಪಡೆದುಕೊಳ್ಳಬಹುದು.

ಇ – ಶ್ರಮ್ ಕಾರ್ಡ್ ಇತರ ಪ್ರಯೋಜನಗಳು! (Benefits of E-shram card)

60 ವರ್ಷ ಮೇಲ್ಪಟ್ಟ ಗಂಡ ಹೆಂಡತಿ ಇ – ಶ್ರಮ್ ಯೋಜನೆಯಲ್ಲಿ ತಲಾ ಮೂರು ಸಾವಿರ ರೂಪಾಯಿಗಳ ಪಿಂಚಣಿ (pension) ಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಪ್ರತಿ ತಿಂಗಳು ಕನಿಷ್ಠ ಮೊತ್ತದ ಪ್ರೀಮಿಯಂ ಪಾವತಿಸಬೇಕು.

60 ವಯಸ್ಸಿನವರೆಗೆ ಯಾವುದೇ ಅಪಘಾತ ಸಂಭವಿಸಿದರೆ 50,000ಗಳ ವಿಮೆ ಸಿಗುತ್ತದೆ. ಅಪಘಾತದಲ್ಲಿ ಮರಣ ಹೊಂದಿದರೆ ಎರಡು ಲಕ್ಷ ರೂಪಾಯಿ ಹಾಗೂ ಶಾಶ್ವತ ಅಂಗ ವೈಕಲ್ಯ ಉಂಟಾದರೆ ಒಂದು ಲಕ್ಷ ರೂಪಾಯಿಗಳ ವಿಮೆ ಸಿಗುತ್ತದೆ.

ಕೇಂದ್ರ ಸರ್ಕಾರದ ಎಲ್ಲಾ ಸೌಲಭ್ಯವನ್ನು ಕೂಡ ಇ – ಶ್ರಮ್ ಹೊಂದಿರುವವರು ಪಡೆದುಕೊಳ್ಳುತ್ತಾರೆ. ಎಲ್ಲಾ ಸದಸ್ಯರಿಗೂ ಇ – ಶ್ರಮ್ ಕಾರ್ಡ್ ವಿತರಣೆ ಮಾಡಲಾಗುವುದು.

ಇ – ಶ್ರಮ್ ಕಾರ್ಡ್ ಹೊಂದಿರುವ ಕಾರ್ಮಿಕರು ತಮ್ಮ 18ನೇ ವಯಸ್ಸಿನಲ್ಲಿ 55 ರೂಪಾಯಿಗಳನ್ನು ಪ್ರೀಮಿಯಂ ಪಾವತಿ ಮಾಡಿದರೆ 60 ವರ್ಷಕ್ಕೆ 3000 ಗಳ ಪೆನ್ಷನ್ ಪಡೆಯಬಹುದು.

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ದಂಡ! ಹೊಸ ಅಪ್ಡೇಟ್

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಪ್ರಮಾಣ ಪತ್ರ, ಆಧಾರ್ ಕಾರ್ಡ್ ತೆಗೆದುಕೊಂಡು ಹತ್ತಿರದ ಸಿ ಎಸ್ ಸಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ ಇ – ಶ್ರಮ್ ಕಾರ್ಡ್ ಪಡೆದುಕೊಳ್ಳಿ. ಇದಕ್ಕಾಗಿ ನೀವು ಅರ್ಜಿ ಶುಲ್ಕವನ್ನು ಕೂಡ ಪಾವತಿ ಮಾಡಬೇಕಾಗಿಲ್ಲ ಸರ್ಕಾರವೇ ಇಪ್ಪತ್ತು ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಸಿಎಸ್ಸಿ ಕೇಂದ್ರಕ್ಕೆ ನೀಡುತ್ತದೆ.

ಅಥವಾ https://eshram.gov.in/ ಈ ವೆಬ್ ಸೈಟ್ ಗೆ ಹೋಗಿ ಇ – ಶ್ರಮ್ ಕಾರ್ಡ್ ಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಇದು ನಿಮ್ಮ ಉಳಿತಾಯ ಖಾತೆಯ ಸಂಖ್ಯೆಯನ್ನು ಇಲ್ಲಿ ನೋಂದಾಯಿಸಿದರೆ ಪಿಂಚಣಿ ಪಡೆದುಕೊಳ್ಳಲು ಪಾವತಿ ಮಾಡಬೇಕಾದ ಪ್ರೀಮಿಯಂ ಹಣ ಪ್ರತಿ ತಿಂಗಳು ಆಟೋಮೆಟಿಕ್ ಆಗಿ ನಿಮ್ಮ ಖಾತೆಯಿಂದ (Bank Account) ಕಡಿತಗೊಳ್ಳುವಂತೆ ಮಾಡಬಹುದು.

Both husband and wife can get Rs 6,000 per month From This Scheme