ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ದಂಡ! ಹೊಸ ಅಪ್ಡೇಟ್

Minimum Bank Balance : ನೀವು ಬ್ಯಾಂಕ್ ಖಾತೆ (bank account) ಹೊಂದಿದ್ರೆ ಈ ಸುದ್ದಿ ನಿಮಗಾಗಿ. ಸಾಕಷ್ಟು ಜನ ತಮ್ಮ ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುತ್ತಾರೆ. ಅದು ಉಳಿತಾಯ ಖಾತೆ (savings account) ಇರಬಹುದು ಅಥವಾ ಚಾಲ್ತಿ ಖಾತೆ (current account) ಇರಬಹುದು.
ಖಾತೆ ಯಾವುದೇ ಇರಲಿ, ನೀವು ಬ್ಯಾಂಕ್ ನಲ್ಲಿ ಖಾತೆ ತೆರೆದ ನಂತರ ಅದಕ್ಕೆ ಸಂಬಂಧಪಟ್ಟ ಕೆಲವು ನಿಯಮಗಳನ್ನು ತಿಳಿದುಕೊಂಡಿರಬೇಕು.
ನಿಮ್ಮ ಬಳಿ ಈ 5 ರೂಪಾಯಿ ಹಳೆಯ ನೋಟು ಇದ್ರೆ ನೀವೇ ಲಕ್ಷಾಧಿಪತಿ! ಹೇಗೆ ಗೊತ್ತಾ?
ಮಿನಿಮಮ್ ಬ್ಯಾಲೆನ್ಸ್ ಇದೆಯಾ ಚೆಕ್ ಮಾಡಿ! (Check your minimum balance)
ನಿಮಗೆಲ್ಲ ತಿಳಿದಿರುವ ಹಾಗೆ ಬೇರೆ ಬೇರೆ ಬ್ಯಾಂಕುಗಳ ಖಾತೆ ನಿರ್ವಹಣೆಗಾಗಿ ಮಿನಿಮಂ ಬ್ಯಾಲೆನ್ಸ್ (minimum balance) ಇರಲೇಬೇಕು ಎನ್ನುವ ನಿಯಮವನ್ನು ಮಾಡಿವೆ.
ಉಳಿತಾಯ ಖಾತೆ ಹೊಂದಿದ್ದರೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ರೀತಿಯ ಮಿನಿಮಮ್ ಬ್ಯಾಲೆನ್ಸ್ ನಿಯಮ ಇದೆ. ಕೆಲವು ಬ್ಯಾಂಕುಗಳು ಶೂನ್ಯ ಬ್ಯಾಲೆನ್ಸ್ (zero balance) ಹೊಂದಿರುವ ಉಳಿತಾಯ ಖಾತೆಗೆ ಅವಕಾಶ ಮಾಡಿಕೊಡುತ್ತದೆ.
ಆದರೆ ಇನ್ನೂ ಹಲವು ಬ್ಯಾಂಕುಗಳು ಕನಿಷ್ಠ ಮೊತ್ತವನ್ನು ನಿಮ್ಮ ಖಾತೆಯಲ್ಲಿ ಇಡಲೇಬೇಕು ಎನ್ನುವ ನಿಯಮ ಮಾಡಿವೆ. ಹಾಗೂ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ, ನಿಮಗೆ ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ.
2024 – 25 ನೇ ಸಾಲಿನ ಹಣಕಾಸು ವರ್ಷ ಆರಂಭವಾಗಲಿದ್ದು, ಏಪ್ರಿಲ್ ಒಂದರಿಂದ ಆರ್ಬಿಐ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಿದೆ. ಯಾವುದೇ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇರುವ ಖಾತೆದಾರನಿಗೆ ಶುಲ್ಕ ವಿಧಿಸುವ ಹಾಗಿಲ್ಲ ಎಂದು ಆರ್ಬಿಐ ತಿಳಿಸಿದೆ. ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು ನಿಜ, ಆದ್ರೆ ಒಂದು ವೇಳೆ ಖಾತೆದಾರ ಹಣವನ್ನು ಇಡದೆ ಇದ್ದರೆ ಆತನಿಗೆ ಶುಲ್ಕ ವಿಧಿಸುವ ಹಾಗಿಲ್ಲ ಎಂದು ಆರ್ಬಿಐ ತಿಳಿಸಿದೆ!
ಫೋನ್ ಪೇ, ಗೂಗಲ್ ಪೇ, UPI ಪೇಮೆಂಟ್ ಮಾಡೋರಿಗೆ ಹೊಸ ರೂಲ್ಸ್; ನಿಯಮ ತಿಳಿದುಕೊಳ್ಳಿ!
ಇಂಥವರ ಖಾತೆ ನಿಷ್ಕ್ರಿಯಗೊಳಿಸುವಂತಿಲ್ಲ!
ವಿದ್ಯಾರ್ಥಿಗಳ ಸ್ಕಾಲರ್ಶಿಪ್ (Education scholarship) ಅಥವಾ ನೇರ ಪ್ರಯೋಜನ ಹೊಂದಿರುವ ಖಾತೆ ಬಳಕೆ ಆಗದೆ ಇದ್ದರೂ ಕೂಡ ಅಂತಹ ಖಾತೆಯನ್ನು ನಿಷ್ಕ್ರಿಯೆ (account deactivation) ಗೊಳಿಸುವಂತಿಲ್ಲ.
ಎರಡು ವರ್ಷಗಳವರೆಗೆ ಇಂತಹ ಖಾತೆಯನ್ನು ಬಳಕೆ ಮಾಡದೇ ಇದ್ದರೂ ಕೂಡ ಅವುಗಳನ್ನು ಬ್ಯಾಂಕುಗಳು ನಿಷ್ಕ್ರಿಯಗೊಳಿಸುವಂತಿಲ್ಲ. ಇನ್ನು ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸುವುದು ಕೂಡ ಸುಲಭ. ನೀವು ನಿಮ್ಮ ಮಾಹಿತಿಯನ್ನು ನೀಡಿ ಮತ್ತೆ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು ಹಾಗೂ ಇದಕ್ಕೆ ಯಾವುದೇ ರೀತಿಯ ಶುಲ್ಕವನ್ನು ಬ್ಯಾಂಕುಗಳು ವಿಧಿಸುವಂತಿಲ್ಲ.
ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಆಗಿದೆ, ನಿಮ್ಮ ಖಾತೆಗೆ ಜಮಾ ಆಗಿದ್ಯಾ ಈ ರೀತಿ ತಿಳಿಯಿರಿ
ಇನ್ನು ಯಾವುದೇ ವ್ಯಕ್ತಿಯ ಖಾತೆಯನ್ನು ಡಿಆಕ್ಟಿವ್ ಗೊಳಿಸುವುದಿದ್ದಾರೆ, ಖಾತೆದಾರನಿಗೆ ಇಮೇಲ್, ಎಸ್ಎಂಎಸ್ ಅಥವಾ ಇನ್ಯಾವುದೇ ರೂಪದಲ್ಲಿ ಮಾಹಿತಿ ನೀಡಬೇಕು. ಒಂದು ವೇಳೆ ಗ್ರಾಹಕರು ಇದಕ್ಕೆ ಪ್ರತಿಕ್ರಿಯೆ ಸೂಚಿಸದೆ ಇದ್ದಲ್ಲಿ, ಬ್ಯಾಂಕ್ ಖಾತೆದಾರ ನೀಡಿರುವ ನಾಮಿನಿ (nominee) ಅಥವಾ ಸಂಬಂಧಿಕರನ್ನು ಸಂಪರ್ಕಿಸಬಹುದು.
ಆಗಲೂ ಪ್ರಯೋಜನ ಆಗದೇ ಇದ್ದಲ್ಲಿ, ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು. ಹಾಗಾಗಿ ಇನ್ನು ಮುಂದೆ ಬ್ಯಾಂಕ್ ನಿಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಅನಗತ್ಯವಾಗಿ ಶುಲ್ಕ ವಿಧಿಸಿದರೆ ನೀವು ಆರ್ ಬಿ ಐ ಗೆ ಕಂಪ್ಲೇಂಟ್ ಕೂಡ ಮಾಡಬಹುದು.
Penalty if there is no minimum balance in the bank account
ಇಂಥವರ ಖಾತೆ ನಿಷ್ಕ್ರಿಯಗೊಳಿಸುವಂತಿಲ್ಲ!



