ಫೋನ್ ಪೇ, ಗೂಗಲ್ ಪೇ, UPI ಪೇಮೆಂಟ್ ಮಾಡೋರಿಗೆ ಹೊಸ ರೂಲ್ಸ್; ನಿಯಮ ತಿಳಿದುಕೊಳ್ಳಿ!

UPI Payment : ನೀವು ಜಿಪೇ (Gpay) ಅಥವಾ ಗೂಗಲ್ ಪೇ (Google pay) ಗ್ರಾಹಕರಾಗಿದ್ದರೆ 18004190157 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ

UPI Payment : ನಾವೆಲ್ಲರೂ ಕ್ಯಾಶ್ ಲೆಸ್ (cashless transaction) ವ್ಯವಹಾರವನ್ನು ಆರಂಭಿಸಿ ವರ್ಷಗಳೇ ಕಳೆದಿವೆ. ಪ್ರತಿಯೊಬ್ಬರು ಕೂಡ ಯುಪಿಐ ಮೂಲಕ ಪೇಮೆಂಟ್ (UPI payment) ವ್ಯವಹಾರವನ್ನು ಮಾಡುತ್ತೇವೆ. ಅದರಲ್ಲೂ ಯುಪಿಐ ಪೇಮೆಂಟ್ ಗಾಗಿ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೊದಲಾದ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು (third party application) ಬಳಸಲಾಗುತ್ತದೆ. ಇನ್ನು ಮುಂದೆ ಈ ರೀತಿಯ ಅಪ್ಲಿಕೇಶನ್ ಬಳಸುವಾಗ ನೀವು ಬಹಳ ಜಾಗರೂಕತೆಯಿಂದ ಇರಬೇಕು.

ಹೌದು, ಪೇಮೆಂಟ್ ಅಪ್ಲಿಕೇಶನ್ಗಳನ್ನು ನಾವು ನಮ್ಮ ಸ್ಮಾರ್ಟ್ ಫೋನ್ (smartphone) ನಲ್ಲಿ ಬಳಸುತ್ತೇವೆ. ಒಂದು ವೇಳೆ ಫೋನ್ ಕಳುವಾದರೆ ಅಥವಾ ಕಳೆದು ಹೋದರೆ (if you lost your phone) ಅದು ಕಳ್ಳ ಕಾಕರ ಕೈ ಸೇರಿದರೆ ಸುಲಭವಾಗಿ ಈ ಅಪ್ಲಿಕೇಶನ್ ಮೂಲಕ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಲಪಟಾಯಿಸಬಹುದು. ಈ ಕೆಲವು ಹೊಸ ನಿಯಮಗಳನ್ನು ಪಾಲನೆ ಮಾಡಿದರೆ ನೀವು ಚಿಂತೆ ಇಲ್ಲದೆ ಇರಬಹುದು.

ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಆಗಿದೆ, ನಿಮ್ಮ ಖಾತೆಗೆ ಜಮಾ ಆಗಿದ್ಯಾ ಈ ರೀತಿ ತಿಳಿಯಿರಿ

ಫೋನ್ ಪೇ, ಗೂಗಲ್ ಪೇ, UPI ಪೇಮೆಂಟ್ ಮಾಡೋರಿಗೆ ಹೊಸ ರೂಲ್ಸ್; ನಿಯಮ ತಿಳಿದುಕೊಳ್ಳಿ! - Kannada News

Paytm ಗ್ರಾಹಕರಾಗಿದ್ದರೆ!

ನೀವು ಪೇಟಿಎಂ (Paytm) ಮೂಲಕ ಹಣಕಾಸಿನ ವ್ಯವಹಾರ ಮಾಡುವವರಾಗಿದ್ದರೆ ಈ ವಿಚಾರವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಫೋನ್ ಕಳೆದು ಹೋದರೆ ತಕ್ಷಣ ಫೋನ್ ಕಳೆದು ಹೋಗಿರುವುದರ ಬಗ್ಗೆ ಪೊಲೀಸ್ ಕಂಪ್ಲೇಂಟ್ (police complaint) ನೀಡಬೇಕು.

ನಂತರ ನಿಮ್ಮ ಮೊಬೈಲ್ ಫೋನ್ ಬ್ಲಾಕ್ ಮಾಡಿಸಬೇಕು. ಇನ್ನು ನೀವು ಪೇಟಿಎಂ ಗ್ರಾಹಕರಾಗಿದ್ದರೆ ತಕ್ಷಣ ಸಹಾಯವಾಣಿ 01204456456 ಗೆ ಕರೆ ಮಾಡಿ. ಅಲ್ಲಿ ಕೇಳುವ ಮಾಹಿತಿಗಳನ್ನು ಗಮನವಿಟ್ಟು ಕೇಳಿ ನಂತರ ಅಗತ್ಯ ಇರುವ ಆಪ್ಷನ್ ಆಯ್ದುಕೊಳ್ಳಿ.

ನಿಮ್ಮ ಫೋನ್ ಕಳೆದು ಹೋಗಿರುವುದರ ಬಗ್ಗೆ ಮಾಹಿತಿ ನೀಡಿ. ತಾತ್ಕಾಲಿಕವಾಗಿ ಪೇಟಿಎಂ ಲಾಗ್ ಔಟ್ ಆಗುವಂತೆ ಹೇಳಿ. ಹೀಗೆ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಅಥವಾ ಪೇಟಿಎಂನ ವೆಬ್ಸೈಟ್ಗೆ ಹೋಗಿ ಅಲ್ಲಿಯೂ ನೀವು ಸರಿಯಾದ ಮಾಹಿತಿಯನ್ನು ನೀಡುವುದರ ಮೂಲಕ ನಿಮ್ಮ ಖಾತೆಯನ್ನು ಲಾಗ್ ಔಟ್ ಮಾಡಿಸಬಹುದು.

18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಹೊಸ ಅಪ್ಡೇಟ್

UPI PaymentGoogle Pay ಗ್ರಾಹಕರಾಗಿದ್ದರೆ!

ಇನ್ನು ನೀವು ಜಿಪೇ (Gpay) ಅಥವಾ ಗೂಗಲ್ ಪೇ (Google pay) ಗ್ರಾಹಕರಾಗಿದ್ದರೆ 18004190157 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ನಿಮ್ಮ ಗೂಗಲ್ ಪೇ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು. ಅಥವಾ ಗೂಗಲ್ ನಲ್ಲಿ ಫೈಂಡ್ ಮೈ ಫೋನ್ (find my phone) ಎನ್ನುವ ವೆಬ್ಸೈಟ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಇರುವ ಪ್ರಮುಖ ದಾಖಲೆಗಳನ್ನು ನೀವು ಡಿಲೀಟ್ ಮಾಡಬಹುದು.

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಬೇಕೇ ಬೇಕು; ವಿಶೇಷ ಆದೇಶ

PhonePe ಗ್ರಾಹಕರಾಗಿದ್ದರೆ!

ದೇಶದಲ್ಲಿ ಕೋಟ್ಯಾಂತರ ಜನ ಫೋನ್ ಪೆ ಗ್ರಾಹಕರಾಗಿದ್ದಾರೆ. ನೀವು ಕೂಡ ಅವರುಗಳಲ್ಲಿ ಒಬ್ಬರಾಗಿದ್ದರೆ ನಿಮ್ಮ ಫೋನ್ ಕಳೆದು ಹೋದಾಗ ತಕ್ಷಣ ಈ ಕೆಲಸ ಮಾಡಿ. 08068727374 / 02268727374 ಈ ಎರಡು ನಂಬರ್ಗಳಲ್ಲಿ ಯಾವುದಾದರು ಒಂದು ನಂಬರ್ಗೆ ಕರೆ ಮಾಡಿ ಮಾಹಿತಿಯನ್ನು ನೀಡಿ. ನಿಮ್ಮ ಫೋನ್ ಕಳೆದು ಹೋಗಿದೆ ಹಾಗಾಗಿ ನನ್ನ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಂದು ಕೇಳಿ. ನಂತರ ನೀವು ಯಾವಾಗ ನಿಮ್ಮ ಫೋನ್ ಸಿಗುತ್ತದೆ ಅಥವಾ ಹೊಸ ಫೋನ್ ಖರೀದಿ ಮಾಡುತ್ತೀರೋ, ಬಳಿಕ ಮತ್ತೆ ಅಪ್ಲಿಕೇಶನ್ ಆರಂಭಿಸಬಹುದು.

ಕೇವಲ ₹600 ರೂಪಾಯಿಗೆ ಗ್ಯಾಸ್ ಸಿಲಿಂಡರ್! ಹೊಸ ಸಬ್ಸಿಡಿ ಪಟ್ಟಿ ಬಿಡುಗಡೆ

ಮೊಟ್ಟ ಮೊದಲನೆದಾಗಿ ಫೋನ್ ಕಳುವಾಗದಂತೆ ಅಥವಾ ಕಳೆದು ಹೋಗದಂತೆ ಎಚ್ಚರಿಕೆಯಿಂದ ಇರಬೇಕು. ಆದರೂ ನಿಮ್ಮ ಎಚ್ಚರಿಕೆ ತಪ್ಪಿ ಫೋನ್ ಕಳೆದುಕೊಂಡಾಗ ಪ್ರಮುಖವಾಗಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲಾ ಅಪ್ಲಿಕೇಶನ್ ಹಾಗೂ ಮತ್ತಿತರ ವಿವರಗಳನ್ನು ಬ್ಲಾಕ್ ಮಾಡುವುದನ್ನ ಮರೆಯಬೇಡಿ. ಇಲ್ಲವಾದರೆ ನಿಮ್ಮ ಖಾತೆಯಲ್ಲಿ (Bank Account) ಇರುವ ಹಣವನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬೇಕಾಗುತ್ತದೆ.

New Rules for PhonePe, Google Pay, UPI Payment

Follow us On

FaceBook Google News

New Rules for PhonePe, Google Pay, UPI Payment