Business News

18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಹೊಸ ಅಪ್ಡೇಟ್

ದೇಶದಲ್ಲಿ ಪ್ರತಿಯೊಬ್ಬರ ಗುರುತಿನ ಚೀಟಿ ಆಧಾರ್ ಕಾರ್ಡ್ (Aadhaar Card) ಆಗಿದೆ. ನಮ್ಮ ಎಲ್ಲಾ ಕೆಲಸಕ್ಕೂ ಕೂಡ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಬಳಕೆ ಮಾಡಬಹುದು.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯು ಎ ಡಿ ಎ ಐ (UIDAI), ಜನವರಿ 18 2024 ನೇ ತಾರೀಖಿನಂದು ಆಧಾರ್ ಕಾರ್ಡ್ ನವೀಕರಣ ಹಾಗೂ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ನೀಡಿದೆ, ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆಧಾರ್‌ ಉಚಿತ ಅಪ್‌ಡೇಟ್‌ಗೆ ಗಡುವು ಯಾವಾಗ ಕೊನೆ? ಇಲ್ಲಿದೆ ಬಿಗ್ ಅಪ್ಡೇಟ್

ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದ ಸಹಾಯಧನ; ಹೊಸ ವಸತಿ ಯೋಜನೆ

ಆಧಾರ್ ನೋಂದಣಿ ಮತ್ತು ನವೀಕರಣಕ್ಕೆ ಹೊಸ ನಿಯಮ!

ಆಧಾರ್ ನೋಂದಣಿ (Aadhar registration) ಮತ್ತು ನವೀಕರಣ (Aadhaar update) ಕ್ಕೆ ಸಂಬಂಧಿಸಿದಂತೆ ಯುಎಡಿಎಐ ಹೊಸ ನಮೂನೆಯನ್ನು ಸೂಚಿಸಿದೆ. ಅವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆಧಾರ್ ಕಾರ್ಡ್ ನ ಲೋಪ ಸರಿಪಡಿಸಿಕೊಳ್ಳಲು ಅವಕಾಶ!

18 ವರ್ಷ ವಯಸ್ಸಿನವರು ಆಧಾರ್ ಕಾರ್ಡ್ ಹೊಂದಿದ್ದರೆ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ಇರುವ ಲೋಪ ಅಥವಾ ರದ್ದುಪಡಿಗೆ ಅರ್ಜಿ ಸಲ್ಲಿಸಬಹುದು ಫಾರ್ಮ್ ನಂಬರ್ 19 ಭರ್ತಿ ಮಾಡುವ ಮೂಲಕ, ಆಧಾರ್ ಸಂಖ್ಯೆಯನ್ನು ಬಿಟ್ಟುಬಿಡಲು ಅಥವಾ ರದ್ದುಪಡಿ ಮಾಡಲು ಅವಕಾಶ ನೀಡಲಾಗುವುದು.

18 ವರ್ಷಗಳ ಬಳಿಕ ಆಧಾರ್ ಕಾರ್ಡ್ ಪಡೆದುಕೊಳ್ಳುವವರು ಫಾರ್ಮ್ 1 ನ್ನು ಭರ್ತಿ ಮಾಡಬೇಕು. 2016ರ ನಿಯಮದ ಪ್ರಕಾರ ಆಧಾರ್ ಕಾರ್ಡ್ ನಲ್ಲಿ ವಿಳಾಸ ನವೀಕರಣಕ್ಕಾಗಿ ಆನ್ಲೈನಲ್ಲಿಯೇ ಅರ್ಜಿ ಸಲ್ಲಿಸಬಹುದು.

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಬೇಕೇ ಬೇಕು; ವಿಶೇಷ ಆದೇಶ

Aadhaar Cardಇಂತಹ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ಬಿಟ್ಟುಬಿಡಬಹುದು!

ಅದನ್ನ 2016ರ ನಿಯಮದ ಪ್ರಕಾರ ಕೆಲವು ಪ್ರಕರಣಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಆಧಾರ ಸಂಖ್ಯೆಯನ್ನು ಬಿಟ್ಟುಬಿಡುವುದಕ್ಕೆ ಅವಕಾಶವಿರುತ್ತದೆ.

ಎರಡು ಆಧಾರ್ ಕಾರ್ಡ್ ಹೊಂದಿದ್ದರೆ – ಒಬ್ಬ ವ್ಯಕ್ತಿಗೆ ಎರಡು ಆಧಾರ್ ಸಂಖ್ಯೆಯನ್ನು ನೀಡಿದ್ದರೆ, ಮೊದಲ ಸಂಖ್ಯೆಯನ್ನು ಉಳಿಸಿಕೊಂಡು ಎರಡನೇ ಸಂಖ್ಯೆಯನ್ನು ರದ್ದುಪಡಿಸ (cancellation) ಲಾಗುತ್ತದೆ.

ಕೇವಲ ₹600 ರೂಪಾಯಿಗೆ ಗ್ಯಾಸ್ ಸಿಲಿಂಡರ್! ಹೊಸ ಸಬ್ಸಿಡಿ ಪಟ್ಟಿ ಬಿಡುಗಡೆ

ಇನ್ನು ಎರಡನೆಯದಾಗಿ ದಾಖಲಾತಿ ಕೇಂದ್ರದಲ್ಲಿ ಹೊಸ ಫೋಟೋ ತೆಗೆದುಕೊಳ್ಳುವುದರ ಬದಲಿಗೆ ಹಳೆಯ ಫೋಟೋವನ್ನು ದಾಖಲಾತಿಗಾಗಿ ನೀಡಿದರೆ, ಅಥವಾ ದಾಖಲಾತಿ ಸಮಯದಲ್ಲಿ ಬಯೋಮೆಟ್ರಿಕ್ (biometric) ತೆಗೆದುಕೊಳ್ಳದೆ ಇದ್ದರೆ ಅಂತಹ ಸಂದರ್ಭದಲ್ಲಿ ನಿವಾಸಿಯ ಆಧಾರ್ ಕಾರ್ಡನ್ನು ರದ್ದುಪಡಿ ಮಾಡಲಾಗುತ್ತದೆ.

ಇನ್ನು ಬಯೋಮೆಟ್ರಿಕ್ ತಪ್ಪಿಸಿಕೊಳ್ಳಲು ಐದು ವರ್ಷಕ್ಕಿಂತ ಕಡಿಮೆ ಮಕ್ಕಳಂತೆ ಆಧಾರ್ ಕಾರ್ಡ್ ಪಡೆದುಕೊಳ್ಳಲು ಪ್ರಯತ್ನಿಸಿದರೆ ಆಗಲು ಆಧಾರ್ ಕಾರ್ಡ್ ರದ್ದಾಗುತ್ತದೆ.

ಈ ಸಂದರ್ಭಗಳಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನಿಷ್ಕ್ರಿಯಗೊಳಿಸಲಾಗುತ್ತದೆ!

ಭಾರತೀಯ ನಿವಾಸಿ ಮಾಹಿತಿ ನೀಡುವ ಸ್ಥಿತಿಯಲ್ಲಿ ಇದ್ದರೂ ಕೂಡ ಬಯೋಮೆಟ್ರಿಕ್ ದಾಖಲೆ ನೀಡದೆ ಆಧಾರ್ ಕಾರ್ಡ್ ನವೀಕರಣಕ್ಕೆ ಪ್ರಯತ್ನಿಸಿದರೆ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಇನ್ನು ನವೀಕರಣಕ್ಕಾಗಿ ಪೋಷಕರ ಆಧಾರ್ ದಾಖಲಾತಿಯನ್ನು ನೀಡಬೇಕು, ಒಂದು ವೇಳೆ ದಾಖಲಾತಿ ನೀಡಿದ್ದೇವೆ ಎಂದು ಸುಳ್ಳು ಹೇಳಿ ನವೀಕರಣಕ್ಕೆ ಪ್ರಯತ್ನಿಸಿದರೆ ಅಂತಹ ಸಂದರ್ಭದಲ್ಲಿಯು ಆಧಾರ್ ಸಂಖ್ಯೆ ನಿಷ್ಕ್ರಿಯಗೊಳ್ಳುತ್ತದೆ. ಇಂತಹ ಕೆಲವು ಪ್ರಮುಖ ವಿಚಾರಗಳನ್ನು ಆಧಾರ್ ಕಾರ್ಡ್ ನೋಂದಣಿ ಮತ್ತು ನವೀಕರಣದ ಸಮಯದಲ್ಲಿ ತಿಳಿದುಕೊಂಡಿರಬೇಕು.

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಈ ರೀತಿ ಚೆಕ್ ಮಾಡಿಕೊಳ್ಳಿ

Change in Aadhaar Card rules for those above 18 years

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories