Gas Cylinder Subsidy : ಪ್ರತಿಯೊಬ್ಬರೂ ಸ್ವಲ್ಪ ಆರಾಮದಾಯಕ ಜೀವನ ನಡೆಸಬೇಕು ಅಂದರೆ ಹಣದುಬ್ಬರದ ಸಮಸ್ಯೆಗೆ ಒಂದು ಬ್ರೇಕ್ ಬೇಕು. ಯಾಕಂದ್ರೆ ದಿನದಿಂದ ದಿನಕ್ಕೆ ದಿನಸಿಯಿಂದ ಹಿಡಿದು ಪೆಟ್ರೋಲ್ (petrol rate increased) ವರೆಗೆ ಬೆಲೆ ಜಾಸ್ತಿ ಆಗುತ್ತಲೇ ಇದೆ. ಈ ಬೆಲೆಯನ್ನು ನಿಯಂತ್ರಿಸದೆ ಇದ್ದಲ್ಲಿ ಜನಸಾಮಾನ್ಯರ ದಿನದ ಬದುಕು ಕಷ್ಟವಾಗುತ್ತದೆ.
ಇದನ್ನು ಅರಿತಿರುವ ಕೇಂದ್ರ ಸರ್ಕಾರ (Central government) ಸಾಧ್ಯವಾಗುವ ರೀತಿಯಲ್ಲಿ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder) ವಿತರಣೆ ಮಾಡುವ ಕೆಲಸವನ್ನು ಆರಂಭಿಸಿದೆ.
ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಈ ರೀತಿ ಚೆಕ್ ಮಾಡಿಕೊಳ್ಳಿ
ಕಳೆದ ಒಂದು ವರ್ಷಗಳ ಹಿಂದೆ, ಸಾವಿರದ ಗಡಿ ದಾಟಿದ 14.2 ಕೆಜಿ ಎಲ್‌ಪಿಜಿ ಸಿಲೆಂಡರ್ ದರವನ್ನು ಇಳಿಕೆ ಮಾಡಿ 900 ರೂಪಾಯಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವಂತೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.
ಸರ್ಕಾರದ ಸಬ್ಸಿಡಿ! (Government gas cylinder subsidy)
ಸರ್ಕಾರ ಈಗಾಗಲೇ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿಗಳ ಸಬ್ಸಿಡಿ ನೀಡುತ್ತಿದೆ. ಉಚಿತವಾಗಿ ಗ್ಯಾಸ್ ಕನೆಕ್ಷನ್ (free gas connection) ವಿತರಣೆ ಮಾಡುವ ಉಜ್ವಲ ಯೋಜನೆಯ (pradhanmantri Ujjwala Yojana) ಅಡಿಯಲ್ಲಿ, ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವವರಿಗೆ ರೂ.300 ಸಬ್ಸಿಡಿ ನೀಡಲಾಗುತ್ತಿದೆ. ಹಾಗಾಗಿ ಉಜ್ವಲ ಯೋಜನೆ ಅಡಿಯಲ್ಲಿ 14.2 ಲೀಟರ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 600 ಗಳಿಗೆ ಖರೀದಿ ಮಾಡಬಹುದು.
ಮನೆ, ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದ ಮಹತ್ವದ ಸೂಚನೆ
ಈ ಕೆವೈಸಿ ಕಡ್ಡಾಯ! (E-KYC mandatory)
ನೀವು ಇನ್ನು ಮುಂದೆ ಯಾವುದೇ ರೀತಿಯ ಬ್ಯಾಂಕ್ ವ್ಯವಹಾರ ಮಾಡುವುದಿದ್ದರೂ ಅಥವಾ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರು, ಮಾಡಬೇಕಾಗಿರುವ ಬಹಳ ಮುಖ್ಯವಾಗಿರುವ ಕೆಲಸ ಅಂದ್ರೆ ಕೆವೈಸಿ ಮಾಡಿಸಿಕೊಳ್ಳುವುದು.
ನಿಮ್ಮ ಬ್ಯಾಂಕ್ ಖಾತೆ (Bank Account), ರೇಷನ್ ಕಾರ್ಡ್, ಗ್ಯಾಸ್ ಕಾರ್ಡ್ ಎಲ್ಲವೂ ಕೂಡ ಆಧಾರ್ನೊಂದಿಗೆ ಕನೆಕ್ಟ್ ಆಗಿರಬೇಕು. ಈ ರೀತಿ ಕೆ ವೈ ಸಿ ಮಾಡಿಸಿಕೊಂಡವರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಹೆಸರು ಇದೆ ಎಂಬುದನ್ನು ಚೆಕ್ ಮಾಡಿ.
ಈ 2 ರೂಪಾಯಿ ಕಾಯಿನ್ ನಿಮ್ಮತ್ರ ಇದ್ರೆ ನೀವೇ ಲಕ್ಷಾಧಿಪತಿ; ಲಕ್ಷ ಗಳಿಸೋದು ಹೇಗೆ ಗೊತ್ತಾ?
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ? (How to check subsidy status)
ಉಜ್ವಲ ಯೋಜನೆ ಅಡಿಯಲ್ಲಿ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ಗಳಿಗೆ 300 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ. ಗ್ಯಾಸ್ ಖರೀದಿ ಮಾಡುವಾಗ ನೀವು ಸಂಪೂರ್ಣ ಮೊತ್ತವನ್ನು ನೀಡಬೇಕು ಹಾಗೂ 300 ರೂಪಾಯಿಗಳ ಸಬ್ಸಿಡಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಸಬ್ಸಿಡಿ ಫಲಾನುಭವಿಗಳಲ್ಲಿ ನೀವು ಒಬ್ಬರಾಗಿದ್ದರೆ ಈ ರೀತಿ ಮಾಹಿತಿ ತಿಳಿದುಕೊಳ್ಳಿ. https://www.mylpg.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ನಿಮಗೆ ಗ್ಯಾಸ್ ಕಂಪನಿಯ 3 ಹೆಸರುಗಳು ಕಾಣಿಸುತ್ತದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪಕ್ಕಾ 5 ಲಕ್ಷ ಆದಾಯ!
Bharat, HP, Indian ಈ 3ರಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಪಡೆದುಕೊಂಡಿದ್ದೀರೋ ಅದರ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಪುಟ ತೆರೆದುಕೊಳ್ಳುತ್ತಿದೆ.
ನಂತರ ಹೊಸ ಪುಟದ ಮೇಲ್ಭಾಗದಲ್ಲಿ ಕಾಣಿಸುವ ಉಜ್ವಲ ಬೆನಿಫಿಷಿಯರಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ರಾಜ್ಯ ಜಿಲ್ಲೆ, ತಾಲೂಕು ಗ್ಯಾಸ್ ಬುಕ್ ಸಂಖ್ಯೆ ಮೊದಲಾದವುಗಳನ್ನು ನಮೂದಿಸಬೇಕು. ಇಷ್ಟು ಮಾಡಿದ್ರೆ ಉಜ್ವಲಾ ಯೋಜನೆಯ ಫಲಾನುಭವಿಗಳ ಲಿಸ್ಟ್ ನಿಮ್ಮ ಮುಂದೆ ಇರುತ್ತದೆ. ಇಲ್ಲಿ ನಿಮ್ಮ ಹೆಸರು ಇದ್ರೆ ನಿಮಗೆ ಸಬ್ಸಿಡಿ ಮಿಸ್ ಆಗದೆ ಜಮಾ ಆಗುತ್ತೆ.
Gas cylinder for only 600 rupees, New subsidy list Released
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.