ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪಕ್ಕಾ 5 ಲಕ್ಷ ಆದಾಯ!

Post Office Scheme : ಮಾಸಿಕ ಉಳಿತಾಯ ಯೋಜನೆ (Monthly Savings Scheme) ಎಂದರೆ, ನಿಶ್ಚಿತ ಆದಾಯವನ್ನು ಕೊಡುವಂತಹ ಒಂದು ಯೋಜನೆ ಆಗಿದೆ

Bengaluru, Karnataka, India
Edited By: Satish Raj Goravigere

Post Office Scheme : ನೀವು ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಯೋಚಿಸಿದರೆ, ಅಂಚೆ ಕಚೇರಿಯ ಈ ಸ್ಕೀಮ್ ನಿಮಗೆ ಹೇಳಿ ಮಾಡಿಸಿದಂತೆ ಇದೆ. ಯಾಕಂದರೆ ಯಾವುದೇ ಮಾರುಕಟ್ಟೆಯ ಅಪಾಯವು ಇಲ್ಲದೆ ಹೂಡಿಕೆ ಮಾಡಬಹುದಾದ ಏಕೈಕ ಸಂಸ್ಥೆ ಅಂದರೆ ಅದು ಸರ್ಕಾರಿ ಸ್ವಾಮ್ಯದ ಅಂಚೆ ಕಚೇರಿ ಎಂದು ಹೇಳಬಹುದು.

ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯಲ್ಲಿ 12ಕ್ಕೂ ಅಧಿಕ ಉಳಿತಾಯ ಯೋಜನೆಗಳನ್ನು ಪರಿಚಯಿಸಲಾಗಿದ್ದು, ಈ ಯೋಜನೆಗಳು, ಒಂದಕ್ಕಿಂತ ಒಂದು ಉತ್ತಮ ಹೂಡಿಕೆ ಯೋಜನೆಗಳಾಗಿವೆ. ಇವುಗಳಲ್ಲಿ ಮುಖ್ಯವಾಗಿರುವ ಒಂದು ಯೋಜನೆ ಮಾಸಿಕ ಉಳಿತಾಯ ಯೋಜನೆ.

post office scheme

ಇಂಥವರಿಗೆ ಮಾತ್ರ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ; ಹೊಸ ಪಟ್ಟಿ ಬಿಡುಗಡೆ

ಏನಿದು ಮಾಸಿಕ ಉಳಿತಾಯ ಯೋಜನೆ?

ಮಾಸಿಕ ಉಳಿತಾಯ ಯೋಜನೆ (Monthly Savings Scheme) ಎಂದರೆ, ನಿಶ್ಚಿತ ಆದಾಯವನ್ನು ಕೊಡುವಂತಹ ಒಂದು ಯೋಜನೆ ಆಗಿದೆ. ಈ ಯೋಜನೆಯ ಅವಧಿ ಐದು ವರ್ಷಗಳು. ನೀವು ಸಣ್ಣ ವಯಸ್ಸಿನಿಂದಲೇ ಹೂಡಿಕೆ ಆರಂಭಿಸಿದರೆ ಈ ಯೋಜನೆಯ ಅಡಿಯಲ್ಲಿ ಐದು ವರ್ಷಗಳ ಮೆಚುರಿಟಿ ಅವಧಿಯಲ್ಲಿ ಲಕ್ಷಗಟ್ಟಲೆ ಹಣ ಸಂಪಾದಿಸಿಕೊಳ್ಳಲು ಸಾಧ್ಯವಿದೆ.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್

ಮಾಸಿಕ ಉಳಿತಾಯ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬಹುದು?

Post office Schemeಈ ಯೋಜನೆಯಲ್ಲಿ ನೀವು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಖಾತೆ ಆರಂಭಿಸಬಹುದು. 7.4% ಬಡ್ಡಿ ದರವನ್ನು ನಿಗದಿಪಡಿಸಲಾಗಿದ್ದು, ವೈಯಕ್ತಿಕವಾಗಿ 9 ಲಕ್ಷದವರೆಗೆ ಹಾಗೂ ಜಂಟಿಯಾಗಿ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಇವು ಒಂಬತ್ತು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಬಯಸಿದರೆ ಪ್ರತಿ ತಿಂಗಳು ರೂ.5,550ಗಳನ್ನು ಗಳಿಸಬಹುದು. ಅಂದರೆ ವರ್ಷಕ್ಕೆ 66,600 ಗಳಂತೆ ಐದು ವರ್ಷಗಳಲ್ಲಿ 3,33,000ಗಳನ್ನು ಹಿಂಪಡೆಯಲು ಸಾಧ್ಯವಿದೆ.

ಸರ್ಕಾರದಿಂದ ಉಚಿತ ಮನೆ! ಅರ್ಹರ ಪಟ್ಟಿ ಬಿಡುಗಡೆ; ಇಂಥವರಿಗೆ ಮಾತ್ರ ಸಿಗಲಿದೆ ಮನೆ

ಇನ್ನು ಜಂಟಿ ಖಾತೆ ಆರಂಭಿಸುವುದಾದರೆ ಪತಿ-ಪತ್ನಿ ಮಾತ್ರ ಖಾತೆ ಆರಂಭಿಸಬೇಕಾಗಿ ಇಲ್ಲ. ತಂದೆ – ಮಕ್ಕಳು, ಸಹೋದರ – ಸಹೋದರಿ ಹೀಗೆ ಯಾರು ಬೇಕಾದರೂ ಜಂಟಿ ಖಾತೆ ಆರಂಭಿಸಬಹುದು.

ಅಂಚೆ ಕಚೇರಿಯಲ್ಲಿ ಐದು ವರ್ಷಗಳಲ್ಲಿ ಸಿಕ್ಕ ಹಣವನ್ನು ನೀವು ಇದೇ ಯೋಜನೆಯಲ್ಲಿ ಮುಂದುವರಿಸಬಹುದು ಅಥವಾ ಆ ಹಣವನ್ನು ತೆಗೆದು ಬ್ಯಾಂಕ್ ನಲ್ಲಿ (Bank Account) ಇಟ್ಟು ಬಡ್ಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿಯನ್ನು ಸಂಪರ್ಕಿಸಿ.

5 lakh income if you invest in this post office scheme