ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್
Bank Loan : ಬ್ಯಾಂಕ್ (Bank) ಗೆ ಸಂಬಂಧಿಸಿದ ಕೆಲವು ಹೊಸ ಪ್ರಕರಣಗಳನ್ನು ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ (Karnataka High court) ಇದೀಗ ಬ್ಯಾಂಕ್ ನ ಸಾಲದ ಬಗ್ಗೆ ಮಹತ್ವದ ತೀರ್ಮಾನವನ್ನು ಹೊರಹಾಕಿದೆ.
ಬ್ಯಾಂಕುಗಳು ಸಾಲ (loan) ಕೊಡುವಾಗ ಇನ್ನು ಮುಂದೆ ಈ ದಾಖಲೆಯನ್ನು ಅಡಮಾನವಾಗಿ ಇಟ್ಟುಕೊಳ್ಳಬಾರದು ಎನ್ನುವ ಮಹತ್ವದ ಆದೇಶ ನೀಡಿದೆ. ಹೈಕೋರ್ಟ್ ತೀರ್ಮಾನದಿಂದ ಯಾರಿಗೆ ಪ್ರಯೋಜನವಾಗಲಿದೆ ಎನ್ನುವುದನ್ನು ನೋಡೋಣ.
ಸರ್ಕಾರದಿಂದ ಉಚಿತ ಮನೆ! ಅರ್ಹರ ಪಟ್ಟಿ ಬಿಡುಗಡೆ; ಇಂಥವರಿಗೆ ಮಾತ್ರ ಸಿಗಲಿದೆ ಮನೆ
ಇವುಗಳನ್ನು ಬ್ಯಾಂಕ್ ಅಡಮಾನವಾಗಿ ಇಟ್ಟುಕೊಳ್ಳುವಂತಿಲ್ಲ!
ಭಾರತದಲ್ಲಿಯೇ ಜನಿಸಿದ ಓಸಿಐ (OCI card ) ಕಾರ್ಡ್ ಹೊಂದಿರುವ ಯುಕೆ ಪ್ರಜೆ ಒಬ್ಬರು ಸಲ್ಲಿಸಿದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗ ಪ್ರಸನ್ನ ಅವರು ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ!
ಬ್ಯಾಂಕ್ ಆಫ್ ಬರೋಡ (Bank of Baroda) ಬ್ಯಾಂಕ್ ನಲ್ಲಿ ಇಬ್ಬರು ವ್ಯಕ್ತಿಗಳು, ಗೃಹ ಸಾಲ (Home loan) ವನ್ನು ಪಡೆದುಕೊಂಡಿದ್ದರು. ಈ ಸಾಲ ಪಡೆದುಕೊಳ್ಳಲು ಓಸಿ ಐ ಕಾರ್ಡ್ ಹಾಗೂ ಪಾಸ್ಪೋರ್ಟ್ ಅನ್ನು ಅಡಮಾನವಾಗಿ ಬ್ಯಾಂಕ್ ಇಟ್ಕೊಂಡಿತ್ತು.
ಇಬ್ಬರೂ ಸಾಲ ಮರುಪಾವತಿ ಮಾಡದೇ ಇರುವ ಹಿನ್ನೆಲೆಯಲ್ಲಿ ಬ್ಯಾಂಕ್ ಅವರ ವಿರುದ್ಧ ಕ್ರಿಮಿನಲ್ ಹಾಗೂ ವಂಚನೆ ಮೊಕದ್ದಮೆ ದಾಖಲು ಮಾಡಿದೆ. ಆದರೆ ಬ್ಯಾಂಕ್ ನ ದೂರನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ರೈತರಿಗಾಗಿ ಬಂಪರ್ ಯೋಜನೆ; ಪ್ರತಿ ತಿಂಗಳು ಸಿಗಲಿದೆ 3,000 ರೂಪಾಯಿ
ಇನ್ನು ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು, ಬ್ಯಾಂಕ್ ಯಾವುದೇ ಕಾರಣಕ್ಕೂ ಪಾಸ್ಪೋರ್ಟ್ ಹಾಗೂ ಒಸಿಐ ದಾಖಲೆಗಳನ್ನು ಹಿಂತಿರುಗಿಸದೆ ತಮ್ಮ ಬಳಿ ಇಟ್ಟುಕೊಳ್ಳಲು ಅಧಿಕಾರವಿಲ್ಲ. ಯುಕೆ ನೀಡಿರುವ ಪಾಸ್ ಪೋರ್ಟ್ ತಡೆಹಿಡಿಯಲು ಬ್ಯಾಂಕಿಗೆ ಅಧಿಕಾರ ಇಲ್ಲ. ಓ ಸಿ ಐ ಕಾರ್ಡ್ ಗಳು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುತ್ತದೆ ವಿದೇಶಾಂಗ ಸಚಿವಾಲಯವನ್ನು ನಿಯಂತ್ರಿಸುವ ಹಕ್ಕು, ಬ್ಯಾಂಕಿಗೆ ಇಲ್ಲ ಎಂದು ವಾದಿಸಿದ್ದರು.
ಮನೆ ಕಟ್ಟುವವರಿಗೆ, ಖರೀದಿ ಮಾಡುವವರಿಗೆ ಸಿಹಿ ಸುದ್ದಿ! ಗೃಹ ಸಾಲದ ಬಗ್ಗೆ ಅಪ್ಡೇಟ್
ಕರ್ನಾಟಕ ಹೈಕೋರ್ಟ್ ತೀರ್ಪು!
ವಾದ ವಿವಾದಗಳನ್ನು ಆಲಿಸಿರುವ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ನಾಗ ಪ್ರಸನ್ನ ಅವರು, ಯುಕೆ ಪ್ರಜೆಗೆ (UK citizen) ಯುಕೆ ಸರ್ಕಾರ ನೀಡಿರುವ ಪಾಸ್ಪೋರ್ಟ್ (passport) ಅನ್ನು ಭಾರತದ ಯಾವುದೇ ಅಡಿಯಲ್ಲಿ ನೀಡಲಾಗುವುದಿಲ್ಲ ಹಾಗೂ ಅದನ್ನ ಬಳಸಿಕೊಳ್ಳುವಂತಿಲ್ಲ. ಪಾಸ್ಪೋರ್ಟ್ ಅನ್ನು ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಒಪ್ಪಂದದ ಮೂಲಕವೇ ಇಟ್ಟುಕೊಂಡಿದ್ದರು ಕೂಡ ಬ್ಯಾಂಕ್ ಹದಿನೈದು ದಿನಗಳಿಗಿಂತ ಹೆಚ್ಚು ಸಮಯ ತನ್ನ ಬಳಿ ಇಟ್ಟುಕೊಳ್ಳುವಂತಿಲ್ಲ.
ಒಂದು ವೇಳೆ ಸಾಲಗಾರರೇ ಒಸಿಐ ಕಾರ್ಡ್ (ಸಾಗರೋತ್ತರ ನಾಗರಿಕ ಕಾರ್ಡ್) ಮುತ್ತು ಪಾಸ್ಪೋರ್ಟ್ ನೀಡಿದರು ಕೂಡ 15 ದಿನಗಳ ಅವಧಿಗಿಂತ ಹೆಚ್ಚು ಸಮಯ ಇದನ್ನ ಬ್ಯಾಂಕ್ ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಈ ಎರಡು ದಾಖಲೆಗಳನ್ನು ಪ್ರಮಾಣವಾಗಿ ಇಟ್ಟುಕೊಂಡು ಸಾಲ ಸೌಲಭ್ಯವನ್ನು ಬ್ಯಾಂಕ್ ನಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ.
Good news for those who have taken loans from any bank
Our Whatsapp Channel is Live Now 👇