ರೈತರಿಗಾಗಿ ಬಂಪರ್ ಯೋಜನೆ; ಪ್ರತಿ ತಿಂಗಳು ಸಿಗಲಿದೆ 3,000 ರೂಪಾಯಿ

ರೈತರಿಗಾಗಿ ಬಂಪರ್ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ; ಪ್ರತಿ ತಿಂಗಳು ಖಾತೆಗೆ ಬರಲಿದೆ 3,000 ರೂ

- - - - - - - - - - - - - Story - - - - - - - - - - - - -

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ರೈತರಿಗಾಗಿ ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ. ಯೋಜನೆಗಳ ಲಾಭವನ್ನು ಇಂದು ರೈತರು ಪಡೆದುಕೊಳ್ಳುತ್ತಿದ್ದಾರೆ.

ರೈತರ ಆರ್ಥಿಕ ಸಬಲೀಕರಣ (farmers financial empowerment) ಕ್ಕಾಗಿ ಘೋಷಣೆ ಮಾಡಿರುವ ಕಿಸಾನ್ ಯೋಜನೆಗಳು ರೈತರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು.

ಮನೆ ಕಟ್ಟುವವರಿಗೆ, ಖರೀದಿ ಮಾಡುವವರಿಗೆ ಸಿಹಿ ಸುದ್ದಿ! ಗೃಹ ಸಾಲದ ಬಗ್ಗೆ ಅಪ್ಡೇಟ್

PM Kisan Yojana New Update on Deposit of Money to Bank Account

ಪ್ರಧಾನ ಮಂತ್ರಿ ಮನ್ ಧನ್ ಪಿಂಚಣಿ ಯೋಜನೆ! (Pension scheme)

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ 6,000ಗಳನ್ನು ಸರ್ಕಾರ ಫಲಾನುಭವಿ ರೈತರ ಖಾತೆಗೆ (Bank Account) ಮಂಜೂರು ಮಾಡುತ್ತಿದೆ. ಇದೀಗ ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಸಬಲತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮನ್ ಧನ್ ಯೋಜನೆ ಆರಂಭಿಸಿದೆ. ಈ ಯೋಜನೆಯ ಪ್ರಯೋಜನವನ್ನು ದೇಶದಾದ್ಯಂತ ಪ್ರತಿಯೊಬ್ಬ ಫಲಾನುಭವಿ ರೈತರು ಕೂಡ ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶ.

ಪ್ರಧಾನ ಮಂತ್ರಿ ಮನ್ ಧನ್ ಯೋಜನೆ ಒಂದು ಪಿಂಚಣಿ (pension scheme) ಯೋಜನೆ ಆಗಿದೆ. ಸಾಮಾನ್ಯವಾಗಿ ಸರ್ಕಾರಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಹಾಗೂ ಕೆಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ ಇರುತ್ತದೆ. ದುಡಿಯುವ ವ್ಯಕ್ತಿ ನಿವೃತ್ತಿಯನ್ನು ಪಡೆದುಕೊಂಡು ನಂತರ ಅವರ ವೃದ್ಧಾಪ್ಯದ ಸಮಯದ ಆರ್ಥಿಕ ಪರಿಸ್ಥಿತಿಗೆ ನೆರವಾಗುತ್ತದೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಯಾರು ಪಿಂಚಣಿ ನೀಡುವುದಿಲ್ಲ. ಹಾಗಾಗಿ ಸರ್ಕಾರ ರೈತರಿಗಾಗಿಯೇ ಪ್ರಧಾನಮಂತ್ರಿ ಮನ್ ಧನ್ ಯೋಜನೆಯನ್ನು ಆರಂಭಿಸಿದೆ.

ಜನಸಾಮಾನ್ಯರಿಗೆ ಬಿಗ್ ರಿಲೀಫ್! ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಗೆ ಸರ್ಕಾರ ಚಿಂತನೆ

Pension Schemeಪ್ರಧಾನ್ ಮಂತ್ರಿ ಮನ್ ಧನ್ ಯೋಜನೆ ಪ್ರಯೋಜನಗಳು!

ಈ ಯೋಜನೆಯ 18ರಿಂದ 40 ವರ್ಷನವರು ಹೂಡಿಕೆ (Investment) ಮಾಡುವುದರ ಮೂಲಕ ಪಡೆದುಕೊಳ್ಳಬಹುದು. ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತ ಅತಿ ಕಡಿಮೆ. 51 ರೂಪಾಯಿಗಳಿಂದ 210ಗಳ ವರೆಗೆ ಹೂಡಿಕೆ ಮಾಡಬಹುದು. 18 ವರ್ಷ ವಯಸ್ಸಿನಲ್ಲಿ ಯೋಜನೆಯನ್ನು ಆರಂಭಿಸಿದ್ರೆ ಅತಿ ಕಡಿಮೆ ಹೂಡಿಕೆ ಮಾಡಿದರೆ ಸಾಕು. ರೈತರಿಗೆ 60 ವರ್ಷ ವಯಸ್ಸಾದ ನಂತರ ಪ್ರತಿ ತಿಂಗಳು 3,000 ಗಳನ್ನು ಸರ್ಕಾರ ಪಿಂಚಣಿಯಾಗಿ ನೀಡುತ್ತದೆ.

ಈ ಯೋಜನೆಯನ್ನು ಒಮ್ಮೆ ಆರಂಭಿಸಿದ್ರೆ ಮಧ್ಯದಲ್ಲಿ ಹಣ ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಹೂಡಿಕೆದಾರ ಅಕಾಲಿಕ ಮರಣ ಹೊಂದಿದರೆ ಹೂಡಿಕೆಯ 50% ನಷ್ಟು ಹಣವನ್ನು ಆತನ ಪತ್ನಿಗೆ ನೀಡಲಾಗುವುದು. ಇಲ್ಲಿ ನಾಮಿನಿ ಹೆಂಡತಿ ಮಾತ್ರ ಆಗಿರಬೇಕು ಮಕ್ಕಳಿಗೆ ಇದರ ಪ್ರಯೋಜನ ಸಿಗುವುದಿಲ್ಲ.

ಮನೆ, ಆಸ್ತಿ, ಜಮೀನು ಖರೀದಿಗೂ ಮುನ್ನ ಈ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ!

ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯಲ್ಲಿ ಹೂಡಿಕೆಯ ಆರಂಭಿಸಿದರೆ ವಾರ್ಷಿಕವಾಗಿದೆ 60 ವರ್ಷದ ನಂತರ 36,000ಗಳನ್ನು ಪಡೆದುಕೊಳ್ಳಬಹುದು. ಇದನ್ನೇ ತಿಂಗಳಿಗೆ 3000 ಗಳಂತೆ ಪಿಂಚಣಿ ಪಡೆಯಬಹುದು. ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ರೈತರು ಈ ಯೋಜನೆಯಲ್ಲಿಯೂ ಹೂಡಿಕೆ ಮಾಡಬಹುದು. ಹತ್ತಿರದ ಕೃಷಿ ಕೇಂದ್ರ ಅಥವಾ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ ಪ್ರಧಾನ ಮಂತ್ರಿ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಹಾಗೂ ಹೂಡಿಕೆ ಆರಂಭಿಸಿ.

Bumper Scheme for Farmers, 3,000 rupees for Farmers every month

Related Stories