ಮನೆ, ಆಸ್ತಿ, ಜಮೀನು ಖರೀದಿಗೂ ಮುನ್ನ ಈ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ!
ಹಣವನ್ನ ಹೂಡಿಕೆ ಮಾಡುವುದಕ್ಕೂ ಮೊದಲು ದಾಖಲೆಗಳು (Property Documents) ಸರಿಯಾಗಿ ಇದ್ದರೆ ಯಾವುದೇ ರೀತಿ ನಷ್ಟ ಅನುಭವಿಸಬೇಕಾಗಿಲ್ಲ
ಸಾಮಾನ್ಯವಾಗಿ ನಾವು ಯಾವುದೇ ಸೈಟ್ (site) ಅಥವಾ ಮನೆ ಖರೀದಿಸುವಾಗ (Buy House) ನಾವು ಮತ್ತೆ ಅದನ್ನ ಮಾರಾಟ ಮಾಡಿದರೆ ಎಷ್ಟು ಹಣ ಸಿಗುತ್ತದೆ ಎಂದಷ್ಟೇ ವಿಚಾರ ಮಾಡುತ್ತೇವೆ. ಆದರೆ ಇದು ತಪ್ಪು.
ಹೌದು, ಯಾವುದೇ ಜಮೀನು, ಮನೆ, ಸೈಟ್ ಏನೇ ಖರೀದಿ (property purchase) ಮಾಡುವುದಿದ್ದರೂ ಕೂಡ ಅದರ ಬೆಲೆ ಲೆಕ್ಕಾಚಾರ ಹಾಕುವುದು ಮಾತ್ರವಲ್ಲ ಅದಕ್ಕೆ ಸಂಬಂಧಪಟ್ಟ ಕಾಗದ ಪತ್ರದ ವ್ಯವಹಾರದಲ್ಲಿ ಬಹಳ ಮುತುವರ್ಜಿಯಿಂದ ಇರಬೇಕು.
ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಹೆಚ್ಚಿನ ಸಬ್ಸಿಡಿ
ಯಾವಾಗ ನಿಮ್ಮ ಮೇಲೆ ಕೇಸ್ ದಾಖಲಾಗಬಹುದು, ಯಾವಾಗ ನೀವು ಖರೀದಿಸಿದ ಆಸ್ತಿಯನ್ನು ಕಳೆದುಕೊಳ್ಳಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ನೀವು ಆಸ್ತಿ ಖರೀದಿಗೂ (Property) ಮುನ್ನ ಈ ಕೆಲವು ಪ್ರಮುಖ ವಿಷಯಗಳನ್ನು ಗಮನಿಸಿ.
ಮದರ್ ಡೀಡ್ (mother deed)
ನೀವು ಖರೀದಿಸಿದ ಆಸ್ತಿ ಯಾರ ಹೆಸರಿನಲ್ಲಿ ಇತ್ತು ಯಾರಿಂದ ಯಾರಿಗೆ ವರ್ಗಾವಣೆ ಆಗಿದೆ ಎನ್ನುವುದನ್ನು ಮದರ್ ಡೀಡ್ ನಿಂದ ತಿಳಿದುಕೊಳ್ಳಬಹುದು. ಮೊದಲು ಇದನ್ನು ಪರಿಶೀಲನೆ ಮಾಡಿ.
ರೂಪಾಂತರ ನೋಂದಣಿ (mutation register)
ಡೆವಲಪರ್ ಯಾವ ಜಾಗದಲ್ಲಿ ಸೈಟ್ ನಿರ್ಮಾಣ ಮಾಡುತ್ತಿದ್ದಾರೆ, ಯಾವಾಗ ನಿರ್ಮಾಣ ಆರಂಭಿಸಿದ್ದಾರೆ, ಯಾವಾಗ ಹಕ್ಕು ಬದಲಾವಣೆ ಆಗಿದೆ, ಈಗ ಯಾರ ಬಳಿ ಹಕ್ಕು ಇದೆ? ಈ ಎಲ್ಲಾ ವಿಚಾರಗಳನ್ನು ರೂಪಾಂತರ ನೋಂದಣಿ ಮೂಲಕ ತಿಳಿದುಕೊಳ್ಳಬಹುದು.
ಜನವರಿ ತಿಂಗಳ ಎಲ್ಲಾ ವಿಧದ ಪಿಂಚಣಿ ಹಣ ಬಿಡುಗಡೆ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
RTC – ಇದನ್ನು ಕೂಡ ಬಹಳ ಮುತುವರ್ಜಿ ಇಂದ ಪರಿಶೀಲಿಸಬೇಕು. ಯಾರು ಎಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ? ಯಾರ ಜಮೀನು ಯಾರ ಹೆಸರಿನಲ್ಲಿ ಇದೆ, ಮೊದಲಾದ ದಾಖಲೆಗಳು ನಿಮಗೆ ಆರ್ ಟಿ ಸಿ ಮೂಲಕ ತಿಳಿಯಬಹುದು. ಹಾಗಾಗಿ ಯಾವುದೇ ಜಮೀನಿನ ಆರ್ ಟಿ ಸಿ ಇಲ್ಲದೆ ಇದ್ದರೆ ನೀವು ಅದನ್ನು ಖರೀದಿ ಮಾಡಲು ಹೋಗಬೇಡಿ.
ಪೋಸ್ಟ್ ಆಫೀಸ್ ಸ್ಕೀಮ್! ಗಂಡ ಹೆಂಡತಿ ಇಬ್ಬರೂ ಪಡೆಯಬಹುದು 5 ಲಕ್ಷ ಆದಾಯ
ಡಿಸಿ ಕನ್ವರ್ಷನ್ ಆರ್ಡರ್ (DC conversion order)
ಇಂದು ಲೇಔಟ್ (layout) ಆಗಿರುವ ಜಾಗ ಈ ಹಿಂದೆ ವ್ಯವಸಾಯ ಮಾಡುತ್ತಿದ್ದ ಭೂಮಿ ಆಗಿತ್ತೆ ? ಅದನ್ನ ಬದಲಾವಣೆ ಮಾಡಲು ಅಥವಾ ಕನ್ವರ್ಷನ್ ಮಾಡಲು ಡಿಸಿ ಪರ್ಮಿಷನ್ ಸಿಕ್ಕಿದೆಯೇ ಎಂಬುದನ್ನ ತಿಳಿದುಕೊಳ್ಳಬೇಕು.
ಅದೇ ರೀತಿ ಸ್ಥಳೀಯ ಪ್ರಾಧಿಕಾರದ ಒಪ್ಪಿಗೆ ತೆಗೆದುಕೊಂಡು ಲೇಔಟ್ ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಚೆಕ್ ಮಾಡಬೇಕು. ಇಲ್ಲದೆ ಹೋದಲ್ಲಿ ಇದೇನಾದರೂ ಸರ್ಕಾರಿ ಜಾಗವಾಗಿದ್ದು ನಿಮಗೆ ಅದು ಗೊತ್ತಿಲ್ಲದೆ ಖರೀದಿ ಮಾಡಿದ್ದರೆ ಯಾವುದೇ ಸಂದರ್ಭದಲ್ಲಿ ಆ ಜಾಗದ ಮೇಲೆ ಸ್ಟೆ ತರಬಹುದು. ಈ ರೀತಿ ಆದರೆ ನಿಮಗೆ ಹಣ ಇಲ್ಲ ಆಸ್ತಿಯೂ ಇಲ್ಲ ಎಂಬಂತೆ ಆಗುತ್ತದೆ.
NOC – ಸಾಕಷ್ಟು ಬಾರಿ ಬಡವರಿಗಾಗಿ ಸರ್ಕಾರ ಜಾಗವನ್ನು ನೀಡಿರುತ್ತದೆ. ಈ ಜಾಗವನ್ನು ಬಡವರಿಂದ ತೆಗೆದುಕೊಂಡು ಖಾಸಗಿಯವರು ಮತ್ತೆ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಇದು ಮುಂದೆ ದೊಡ್ಡ ಸಮಸ್ಯೆಯನ್ನು ಹುಟ್ಟು ಹಾಕಬಹುದು. ಆದ್ದರಿಂದ ನೀವು ಲೇಔಟ್ ಖರೀದಿಸುವುದಕ್ಕಿಂತ ಮೊದಲು ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ ಎನ್ ಓ ಸಿ (NOC) ಇದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ದಂಡ ಎಷ್ಟು? ಎಷ್ಟು ದಿನ ಜೈಲು ಶಿಕ್ಷೆ ಗೊತ್ತಾ?
ಖಾತಾ ಬದಲಾವಣೆ!
ಮಾರಾಟಗಾರರ ಹೆಸರಿನಲ್ಲಿ ಪ್ರತ್ಯೇಕವಾಗಿ ಖಾತಾ ಬದಲಾವಣೆ ಆಗಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಇದರ ಜೊತೆಗೆ real estate regulatory authority of Karnataka ಇವರಿಂದ ಅಪ್ರುವಲ್ ಪಡೆದುಕೊಂಡ ಸರ್ಟಿಫಿಕೇಟ್ ಇದಿಯಾ ಎಂಬುದನ್ನು ಚೆಕ್ ಮಾಡಿ.
ಒಂದು ಸೈಟ್ ಖರೀದಿ ಮಾಡುವುದಕ್ಕಿಂತ ಮುಂಚೆ ಅಕ್ಕಪಕ್ಕದಲ್ಲಿ ಇರುವ ಜಾಗವನ್ನು ಪರಿಶೀಲಿಸಿ ಸಾಧ್ಯವಾದರೆ ಯಾರನ್ನಾದರೂ ಕೇಳಿ, ನೀವು ಖರೀದಿಸಲು ಬಯಸುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಅಥವಾ ಒಬ್ಬ ಉತ್ತಮ ಲಾಯರ್ ಸಹಾಯದಿಂದ ಅಗತ್ಯ ಇರುವ ಎಲ್ಲಾ ಕಾಗದ ಪತ್ರಗಳನ್ನು ಪಡೆದುಕೊಳ್ಳಿ. ಹಣವನ್ನ ಹೂಡಿಕೆ ಮಾಡುವುದಕ್ಕೂ ಮೊದಲು ದಾಖಲೆಗಳು (Property Documents) ಸರಿಯಾಗಿ ಇದ್ದರೆ ಯಾವುದೇ ರೀತಿ ನಷ್ಟ ಅನುಭವಿಸಬೇಕಾಗಿಲ್ಲ.
ರೈತರಿಗೆ ಸಾಲ ಸೌಲಭ್ಯ ಪಡೆಯಲು ಉಚಿತ ಕಿಸಾನ್ ಕ್ರೆಡಿಟ್ ಕಾರ್ಡ್! ಹೀಗೆ ಅರ್ಜಿ ಸಲ್ಲಿಸಿ
Check these documents before buying house, property, land