ರೈತರಿಗೆ ಸಾಲ ಸೌಲಭ್ಯ ಪಡೆಯಲು ಉಚಿತ ಕಿಸಾನ್ ಕ್ರೆಡಿಟ್ ಕಾರ್ಡ್! ಹೀಗೆ ಅರ್ಜಿ ಸಲ್ಲಿಸಿ

Kisan Credit Card : ಕೆಲವೇ ಕೆಲವು ದಾಖಲೆಗಳನ್ನು ನೀಡಿ ಕ್ಷಣಮಾತ್ರದಲ್ಲಿ ಪಡೆಯಬಹುದು ಕಿಸಾನ್ ಕ್ರೆಡಿಟ್ ಕಾರ್ಡ್; ಇಲ್ಲಿದೆ ಸಂಪೂರ್ಣ ವಿವರ!

Kisan Credit Card : ದೇಶದ ಎಲ್ಲಾ ರೈತ (farmers) ರಿಗೂ ಅನುಕೂಲವಾಗುವಂತೆ ಮಹತ್ತರವಾಗಿರುವ ಯೋಜನೆ ಒಂದನ್ನು ಕೇಂದ್ರ ಸರ್ಕಾರ (central government) , ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (National Agricultural and Rural Development Bank) ಸಹಯೋಗದಲ್ಲಿ ಆರಂಭಿಸಿದೆ.

ಈ ಯೋಜನೆಯ ಪ್ರಯೋಜನವನ್ನು ದೇಶದ ಪ್ರತಿಯೊಬ್ಬ ರೈತರು ಕೂಡ ಸಾಲ ಪಡೆದುಕೊಳ್ಳಲು ಬಳಸಬಹುದಾಗಿದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಕೇವಲ 18 ರೂ. ಹೂಡಿಕೆ ಮಾಡಿದ್ರೆ ಲಕ್ಷಗಟ್ಟಲೆ ಆದಾಯ

ರೈತರಿಗೆ ಸಾಲ ಸೌಲಭ್ಯ ಪಡೆಯಲು ಉಚಿತ ಕಿಸಾನ್ ಕ್ರೆಡಿಟ್ ಕಾರ್ಡ್! ಹೀಗೆ ಅರ್ಜಿ ಸಲ್ಲಿಸಿ - Kannada News

ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಯೋಜನೆ (Kisan credit card scheme)

ದೇಶದ ಬೆನ್ನೆಲುಬು ರೈತ. ರೈತನ ಕೃಷಿ ಚಟುವಟಿಕೆಗೆ ಅಗತ್ಯ ಇರುವ ಹಣ ಅಥವಾ ಆರ್ಥಿಕ ನೆರವು (financial support) ನೀಡುವುದು ಸರ್ಕಾರದ ಕರ್ತವ್ಯ. ರೈತ ಬೆಳೆ, ಉತ್ತಮವಾಗಿ ಬರಲು ಭೂಮಿಗೆ ಅಗತ್ಯ ಇರುವ ಗೊಬ್ಬರ ಹಾಗೂ ಮತ್ತಿತರ ಉಪಕರಣಗಳಿಗಾಗಿ ಸಾಲ (Loan) ತೆಗೆದುಕೊಳ್ಳಬೇಕಾಗುತ್ತದೆ.

ಈ ಹಿಂದೆ ರೈತರು ಬ್ಯಾಂಕ್ಗಳಲ್ಲಿ ಸಾಲ (Bank Loan) ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಈ ಕಾರಣಕ್ಕಾಗಿ ಸಣ್ಣ ಪುಟ್ಟ ಫೈನಾನ್ಸ್ (finance) ಅಥವಾ ಅತಿ ಹೆಚ್ಚು ಬಡ್ಡಿ (rate of interest) ದರಕ್ಕೆ ಸಾಲ ಸೌಲಭ್ಯ ಪಡೆದುಕೊಳ್ಳಬೇಕಿತ್ತು.

ಇಂತಹ ಸಂದರ್ಭದಲ್ಲಿ ರೈತರು ಬಡ್ಡಿ ತೀರಿಸುವುದರಲ್ಲಿ ತಮ್ಮ ಜೀವನವನ್ನು ಕಳೆದುಬಿಡುತ್ತಿದ್ದರು. ಇದನ್ನು ಗಮನಿಸಿರುವ ಸರ್ಕಾರ ಇದೀಗ ರೈತರಿಗೆ ಭರವಸೆಯ ಸಾಲ ಸೌಲಭ್ಯವನ್ನು ಸರ್ಕಾರದ ಮೂಲಕವೇ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಆರಂಭಿಸಿದೆ.

ಬಡವರ ಸ್ವಂತ ಮನೆ ಕನಸು ಈಡೇರಿಸಲು ಮಹತ್ವದ ಯೋಜನೆ ತಂದ ಕೇಂದ್ರ ಸರ್ಕಾರ!

ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್?

Kisan Credit Cardಇದು ರೈತರಿಗೆ ಅಗತ್ಯ ಇರುವ ಸಾಲ ಸೌಲಭ್ಯ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಇದು ಪಕ್ಕಾ ಕ್ರೆಡಿಟ್ ಕಾರ್ಡ್ ನಂತೆಯೇ ಕೆಲಸ ಮಾಡುತ್ತಿದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ರೈತರು ಈ ಕಾರ್ಡ್ ಮೂಲಕ ಸಾಲ ಪಡೆದುಕೊಳ್ಳಬಹುದು. ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಇರುವ ರೈತರಿಗೆ ಸಾಲ ಬಹಳ ಬೇಗ ಮಂಜೂರಾಗುತ್ತಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನ ಬ್ಯಾಂಕ್ ರಜೆ ಇದೆಯಾ? ಇಲ್ಲಿದೆ ಮಾಹಿತಿ!

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ದಾಖಲೆಗಳು (Documents to get Kisan credit card)

ವಿಳಾಸದ ಪುರಾವೆ

ಆಧಾರ್ ಕಾರ್ಡ್

ಕೃಷಿ ಭೂಮಿಯ ದಾಖಲೆಗಳು (ಪಹಣಿ ಇತ್ಯಾದಿ)

ಪಾಸ್ಪೋರ್ಟ್ ಅಳತೆಯ ಫೋಟೋ

ಆಧಾರ್ ಕಾರ್ಡ್ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ; UIDAI ಸೂಚನೆ!

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ? (How to get Kisan credit)

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು ಬಹಳ ಸುಲಭವಾಗಿದೆ, ನೀವು ಯಾವ ಬ್ಯಾಂಕ್ ( Bank ) ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಇದೆಯೋ ಆ ಬ್ಯಾಂಕ್ ಗೆ ಹೋಗಿ, ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ನೀಡಿದರೆ ಕೇವಲ 15 ದಿನಗಳಲ್ಲಿ ನಿಮ್ಮ ಕೈ ಸೇರುತ್ತದೆ.

ಪ್ರತಿಯೊಬ್ಬ ರೈತನ ಬಳಿ ಇರಲೇ ಬೇಕಾಗಿರುವ ಸರ್ಕಾರದ ಕಾರ್ಡ್ ಇದಾಗಿದ್ದು, ತಪ್ಪದೇ ಕೂಡಲೇ ರೈತರು ಕಿಸಾನ್ ಕಾರ್ಡ್ ಪಡೆದುಕೊಳ್ಳಿ.

Apply for Kisan Credit Card to get loan facility for farmers

Follow us On

FaceBook Google News

Apply for Kisan Credit Card to get loan facility for farmers