Business News

ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಹೆಚ್ಚಿನ ಸಬ್ಸಿಡಿ

ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಸರ್ಕಾರ ಒಂದಲ್ಲ ಒಂದು ರೀತಿಯ ಪ್ರಯತ್ನ ಮಾಡುತ್ತಲೇ ಇರುತ್ತದೆ. ಆದ್ರೆ ಈ ಪ್ರಯತ್ನದ ಹಿಂದೆ ಕೇಂದ್ರ ಸರ್ಕಾರ (Central government) ದ ಬಹಳ ಮುಖ್ಯವಾಗಿರುವ ಉದ್ದೇಶ ಕಾಣಿಸುತ್ತಿದೆ. ಅದುವೇ ದೇಶದಲ್ಲಿರುವ ಪ್ರತಿಯೊಬ್ಬರೂ ಕೂಡ ಸ್ವಂತ ಸೂರು (Own House) ಹೊಂದಿರಬೇಕು ಎನ್ನುವುದು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 2024ಕ್ಕೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮೇಲೆ ಜನರ ನಿರೀಕ್ಷೆಗಳು ಕೂಡ ಹೆಚ್ಚಾಗಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ.

Free housing Scheme for 3 crore poor people, apply for PM Awas Yojana

ಪೋಸ್ಟ್ ಆಫೀಸ್ ಸ್ಕೀಮ್! ಗಂಡ ಹೆಂಡತಿ ಇಬ್ಬರೂ ಪಡೆಯಬಹುದು 5 ಲಕ್ಷ ಆದಾಯ

ಬಜೆಟ್ ನಲ್ಲಿ ಈ ವಿಷಯ ಪ್ರಸ್ತಾಪ!

ಸರ್ಕಾರದ ಮಾಹಿತಿಯ ಪ್ರಕಾರ, ದೇಶದಲ್ಲಿ ವಾಸಿಸುವ 1.4 ಶತ ಕೋಟಿ ಜನಸಂಖ್ಯೆಯಲ್ಲಿ, ಗ್ರಾಮೀಣ ಭಾಗದಲ್ಲಿ 20 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಸ್ವಂತ ಸೂರು ಇಲ್ಲ. ಮುಂದೆ ನಗರ ಪ್ರದೇಶದಲ್ಲಿಯೂ ಕೂಡ ಇದೇ ಪರಿಸ್ಥಿತಿ ಮುಂದುವರೆಯಲಿದ್ದು 1.5 ಮಿಲಿಯನ್ ಗೂ ಹೆಚ್ಚು ವಸತಿ ಕೊರತೆ ಉಂಟಾಗಲಿದೆ. ಹಾಗಾಗಿ ಸರ್ಕಾರ ಮುಂದಿನ ಬಜೆಟ್ (budget) ನಲ್ಲಿ ಈಗ ವಸತಿ ಯೋಜನೆಗಾಗಿ ಬಿಡುಗಡೆ ಮಾಡಿರುವ ಹಣವನ್ನು ಎರಡು ಪಟ್ಟು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಿದೆ ಎಂದು ಸರ್ಕಾರದ ಮೂಲಗಳು ವರದಿ ಮಾಡಿವೆ.

2023 – 24ರ ಕೇಂದ್ರ ಬಜೆಟ್ ನಲ್ಲಿ 790 ಶತಕೋಟಿ ರೂಪಾಯಿಗಳು ವಸತಿ ಯೋಜನೆಗಾಗಿ (Housing Scheme) ಮೀಸಲಿಡಲಾಗಿತ್ತು. 2024 – 25 ಕ್ಕೆ ಇದರ ಪ್ರಮಾಣವನ್ನು 15% ಹೆಚ್ಚಿಸಿ 12 ಶತಕೋಟಿ ಹಣ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದರಿಂದ ಅತಿ ಕಡಿಮೆ ವೆಚ್ಚದ ವಸತಿ (housing scheme) ಯನ್ನು ಹೆಚ್ಚು ಜನರಿಗೆ ನಿರ್ಮಿಸಿಕೊಡಲು ಸಾಧ್ಯವಿದೆ.

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ದಂಡ ಎಷ್ಟು? ಎಷ್ಟು ದಿನ ಜೈಲು ಶಿಕ್ಷೆ ಗೊತ್ತಾ?

40 ಮಿಲಿಯನ್ ಬಡ ಕುಟುಂಬಗಳಿಗೆ ವಸತಿ ನಿರ್ಮಾಣ!

housing scheme2018ರಲ್ಲಿ ಪ್ರಧಾನ ಮಂತ್ರಿ ಮೋದಿ ಸರ್ಕಾರ ಎಲ್ಲರಿಗೂ ಮನೆ ನಿರ್ಮಾಣ ಮಾಡಿಕೊಡುವ ಕನಸನ್ನು ಹೊತ್ತು ವಸತಿ ಯೋಜನೆಯನ್ನು ಆರಂಭಿಸಿದೆ. ಭಾರತ ಫೆಡರಲ್ ಹಾಗೂ ರಾಜ್ಯ ಸರ್ಕಾರದ ಬೆಂಬಲದಿಂದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಕಡಿಮೆ ವೆಚ್ಚದಲ್ಲಿ 29 ಶತ ಕೋಟಿ ಹಣವನ್ನು ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರ ಕಳೆದ ತಿಂಗಳು ವರದಿ ಸಲ್ಲಿಸಿತ್ತು.

2014 ರಿಂದ ಇಲ್ಲಿಯವರೆಗೆ 40 ಮಿಲಿಯನ್ ಕಾಂಕ್ರೀಟ್ ಮನೆ (concrete houses) ಗಳನ್ನು ನಿರ್ಮಿಸಿ ಕೊಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಹೆಚ್ಚುತ್ತಿರುವ ಕಟ್ಟಡದ ಬೇಡಿಕೆ ಹಾಗೂ ಕಟ್ಟಡ ನಿರ್ಮಾಣ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೆಚ್ಚುವರಿ ಹಣವನ್ನು ವಸತಿ ಯೋಜನೆಗಾಗಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ರೈತರಿಗೆ ಸಾಲ ಸೌಲಭ್ಯ ಪಡೆಯಲು ಉಚಿತ ಕಿಸಾನ್ ಕ್ರೆಡಿಟ್ ಕಾರ್ಡ್! ಹೀಗೆ ಅರ್ಜಿ ಸಲ್ಲಿಸಿ

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗೃಹ ಸಾಲ (Home Loan) ಪಡೆದು ಮನೆ ನಿರ್ಮಾಣ ಮಾಡಿಕೊಂಡವರಿಗೆ ಹೆಚ್ಚು ಸಬ್ಸಿಡಿ ನೀಡಿ ಕಡಿಮೆ ಬಡ್ಡಿ ದರದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ, ಇದಕ್ಕಾಗಿ ಬ್ಯಾಂಕ್ ಗಳೊಂದಿಗೆ (Bank) ಸರ್ಕಾರ ಮಾತುಕತೆ ನಡೆಸಬೇಕಿದೆ.

ಒಟ್ಟಿನಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಪ್ರತಿಯೊಬ್ಬ ಬಡವರಿಗೂ ಕೂಡ ಈ ಸೌಲಭ್ಯ ಕಲ್ಪಿಸಲು ಸರ್ಕಾರ ಕಾರ್ಯ ಪ್ರವೃತ್ತವಾಗಿದೆ.

Housing scheme for the poor, more subsidy to build your own house

Our Whatsapp Channel is Live Now 👇

Whatsapp Channel

Related Stories