Cheque Bounce : ಇದು ಸಾಮಾನ್ಯವಾಗಿ ಹಣಕಾಸಿನ ವ್ಯವಹಾರಕ್ಕೆ ನಾವು ಡಿಜಿಟಲ್ ಯುಪಿಐ ಪೇಮೆಂಟ್ (UPI payment) ಮಾದರಿಯನ್ನು ಬಳಸುತ್ತೇವೆ. ಆದರೆ ದೊಡ್ಡ ದೊಡ್ಡ ಕಂಪನಿಗಳು ಹಾಗೂ ವ್ಯಾಪಾರ ಮಾಡುವವರು ಬ್ಯಾಂಕಿನ ಚೆಕ್ (bank cheque) ಮೂಲಕ ವ್ಯವಹಾರ ನಡೆಸುತ್ತಾರೆ
ಹೌದು, ನಾವು ಸಾಕಷ್ಟು ಡಿಜಿಟಲ್ (digital) ಆಗಿ ಮುಂದುವರೆದಿದ್ದರೂ ಕೂಡ ಕೆಲವು ವ್ಯವಹಾರಗಳಿಗೆ ಬ್ಯಾಂಕಿನ ಚೆಕ್ ಕೊಡುವುದು ಮತ್ತು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ರೈತರಿಗೆ ಸಾಲ ಸೌಲಭ್ಯ ಪಡೆಯಲು ಉಚಿತ ಕಿಸಾನ್ ಕ್ರೆಡಿಟ್ ಕಾರ್ಡ್! ಹೀಗೆ ಅರ್ಜಿ ಸಲ್ಲಿಸಿ
ಇಂತಹ ಸಂದರ್ಭದಲ್ಲಿ ಚೆಕ್ ಬೌನ್ಸ್ (bank cheque bounce) ಆಗುವ ಸಾಧ್ಯತೆಗಳು ಕೂಡ ಇರುತ್ತವೆ, ಈಗ ಈ ಚೆಕ್ ಬೌನ್ಸ್ ಆದರೆ ಅದಕ್ಕೆ ಇರುವ ದಂಡ ಹಾಗೂ ಶಿಕ್ಷೆ ಬಗ್ಗೆ ಮಾಹಿತಿ ಕೊಡಲಿದ್ದೇವೆ
ಏನಿದು ಚೆಕ್ ಬೌನ್ಸ್ ಪ್ರಕರಣ (cheque bounce cases)
ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ ಚೆಕ್ ನೀಡಿ, ಆ ಚೆಕ್ ಬ್ಯಾಂಕ್ ಗೆ (Bank) ಹಾಕಿದಾಗ ಆತನ ಅಕೌಂಟ್ (account) ನಲ್ಲಿ ಸಾಕಷ್ಟು ಹಣವಿಲ್ಲದೆ ಇದ್ದಾಗ ಇಂತಹ ಸಂದರ್ಭದಲ್ಲಿ ಚೆಕ್ ತೆಗೆದುಕೊಂಡ ವ್ಯಕ್ತಿ ಚೆಕ್ ಕೊಟ್ಟ ವ್ಯಕ್ತಿಯ ಮೇಲೆ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಬಹುದು.
ಇತ್ತೀಚಿನ ದಿನಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಅದೇ ರೀತಿ ಚೆಕ್ ಬೌನ್ಸ್ ಪ್ರಕರಣಕ್ಕೆ ಜೈಲು ಸೇರುವವರ ಸಂಖ್ಯೆಯು ಜಾಸ್ತಿ ಆಗಿದೆ. ಆದರೆ ಇಂತಹ ಮೋಸ ಹಾಗೂ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಸಂಬಂಧಪಟ್ಟ ಇಲಾಖೆಗೆ ವಿಶೇಷ ಕ್ರಮ ಕೈಗೊಳ್ಳಲು ಸೂಚಿಸಿದೆ. ಹಾಗಾಗಿ ಚೆಕ್ ಕೊಡುವ ಮತ್ತು ತೆಗೆದುಕೊಳ್ಳುವ ನಿಯಮಗಳಲ್ಲಿಯೂ ಕೂಡ ಕಟ್ಟು ನಿಟ್ಟಿನ ಬದಲಾವಣೆಗಳನ್ನು ಮಾಡಲಾಗಿದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಕೇವಲ 18 ರೂ. ಹೂಡಿಕೆ ಮಾಡಿದ್ರೆ ಲಕ್ಷಗಟ್ಟಲೆ ಆದಾಯ
ಚೆಕ್ ಬೌನ್ಸ್ ಆದ್ರೆ ಶಿಕ್ಷೆ ಗ್ಯಾರಂಟಿ!
ಚೆಕ್ ಬೌನ್ಸ್ ಸಣ್ಣ ಪ್ರಕರಣವಲ್ಲ ಇದನ್ನ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಹಾಗೂ ಚೆಕ್ ಅನ್ನು ಇನ್ನೊಬ್ಬ ವ್ಯಕ್ತಿಗೆ ನೀಡಿ ಆ ಚೆಕ್ ಬೌನ್ಸ್ ಆದರೆ ಚೆಕ್ ಕೊಟ್ಟ ವ್ಯಕ್ತಿಗೆ ಕಾನೂನಿನ ಪ್ರಕಾರ ಶಿಕ್ಷೆ ಹಾಗೂ ತಂಡ ವಿಧಿಸಲಾಗುತ್ತದೆ.
ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಚೆಕ್ ನೀಡಿದ ವ್ಯಕ್ತಿಯ ವಿರುದ್ಧ ಕಾನೂನಿನ ಕ್ರಮವನ್ನು ಕೈಗೊಳ್ಳಲಾಗುವುದು. ಒಂದು ವೇಳೆ ಆತ ನೀಡಿದ ಚೆಕ್ ಬೌನ್ಸ್ ಆಗಿ ಅಂದ್ರೆ ಆತನ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗ ಆತನ ವಿರುದ್ಧ ಕಂಪ್ಲೇಂಟ್ ದಾಖಲಿಸಬಹುದು.
ಬಡವರ ಸ್ವಂತ ಮನೆ ಕನಸು ಈಡೇರಿಸಲು ಮಹತ್ವದ ಯೋಜನೆ ತಂದ ಕೇಂದ್ರ ಸರ್ಕಾರ!
ಈ ರೀತಿ ದೂರು ತೆಗೆದುಕೊಂಡ ನಂತರ ಚೆಕ್ ಕೊಟ್ಟ ವ್ಯಕ್ತಿಗೆ ಲೀಗಲ್ ನೋಟಿಸ್ (legal notice) ಕಳುಹಿಸಲಾಗುತ್ತದೆ. ಆತ 15 ದಿನಗಳ ಒಳಗೆ ಈ ನೋಟೀಸ್ ಗೆ ಉತ್ತರಿಸಬೇಕು, ಒಂದು ವೇಳೆ ಹಾಗೆ ಮಾಡದೇ ಇದ್ದಲ್ಲಿ ಆತನನ್ನು ಅಪರಾಧಿ ಎಂದೇ ಪರಿಗಣಿಸಿ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ನೆ
ಗೋಷಿಯೇಬಲ್ ಇನ್ ಸ್ಟ್ರುಮೆಂಟ್ಸ್ ಆಕ್ಟ್ (negotiable instrument Act) 1881ರ ಅಡಿಯಲ್ಲಿ ಕೇಸ್ ದಾಖಲಿಸಲಾಗುತ್ತದೆ. ಇನ್ನು ಸೆಕ್ಷನ್ 148 ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಲಾಗುವುದು.
ಚೆಕ್ ಬೌನ್ಸ್ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ 800 rs. ದಂಡ (penalty) ಹಾಗೂ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಆಗಬಹುದು ಅಥವಾ ಇದು ಏಳು ವರ್ಷಗಳವರೆಗೂ ಮುಂದುವರೆಯಬಹುದು. ಇನ್ನು ಚೆಕ್ ಬೌನ್ಸ್ ಮಾಡಿದ ವ್ಯಕ್ತಿ, ಅಂದರೆ ಚೆಕ್ ನೀಡಿದ ವ್ಯಕ್ತಿ ಯಾವ ಚೆಕ್ ನಲ್ಲಿ ಎಷ್ಟು ಮೊತ್ತವನ್ನು ನಮೂದಿಸಿರುತ್ತಾನೋ ಅದರ ದುಪ್ಪಟ್ಟು ಹಣವನ್ನು ಚೆಕ್ ಕೊಟ್ಟ ವ್ಯಕ್ತಿಗೆ ತುಂಬಿಕೊಡಬೇಕು. ಕೆಲವೊಮ್ಮೆ ಇದು ಬಹಳ ದೊಡ್ಡ ಪ್ರಮಾಣದ ವ್ಯವಹಾರವಾಗಿದ್ದು ದೊಡ್ಡ ಮೊತ್ತವನ್ನೇ ಭರಿಸಬೇಕಾಗುತ್ತದೆ.
ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3,000 ಪಿಂಚಣಿ, ಯೋಜನೆಗೆ ನೋಂದಾಯಿಸಿಕೊಳ್ಳಿ!
ಒಟ್ಟಿನಲ್ಲಿ ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು, ಅದರಲ್ಲೂ ವ್ಯವಹಾರ ಮಾಡುವುದಾದರೆ ಬಹಳ ಎಚ್ಚರಿಕೆಯಿಂದ ಇರಬೇಕು. ಮಿಸ್ಟೇಕ್ ಆಗಿದ್ದರೂ ಕೂಡ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ಚೆಕ್ ಬೌನ್ಸ್ ಪ್ರಕರಣ, ಶಿಕ್ಷಾರ್ಹ ಅಪರಾಧವಾಗಿದೆ ಎಂಬುದನ್ನ ನೆನಪಿಟ್ಟುಕೊಳ್ಳಿ.
Do You Know What is the penalty if your Cheque bounce
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.