ಪೋಸ್ಟ್ ಆಫೀಸ್ ಸ್ಕೀಮ್! ಗಂಡ ಹೆಂಡತಿ ಇಬ್ಬರೂ ಪಡೆಯಬಹುದು 5 ಲಕ್ಷ ಆದಾಯ

Story Highlights

Post Office Scheme : ಅಂಚೆ ಕಚೇರಿಯಲ್ಲಿ (Post Office) ಸುಮಾರು 12 ಬೇರೆ ಬೇರೆ ರೀತಿಯ ಉಳಿತಾಯ ಯೋಜನೆಗಳನ್ನು (Savings Scheme) ಆರಂಭಿಸಲಾಗಿದೆ

Post Office Scheme : ಅಂಚೆ ಕಚೇರಿ (post office) ಯಲ್ಲಿ ಹೂಡಿಕೆ ( Investment) ಮಾಡಿದರೆ ಯಾವುದೇ ಮಾರುಕಟ್ಟೆ ಅಪಾಯವು (market risk) ಇಲ್ಲದೆ ಇರುವ ಹಿನ್ನೆಲೆಯಲ್ಲಿ, ಜನರು ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯ ಉಳಿತಾಯ ಯೋಜನೆ (savings plan) ಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಇಲ್ಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಭದ್ರತೆಯನ್ನು ಒದಗಿಸುತ್ತದೆ.

ಅಂಚೆ ಕಚೇರಿಯಲ್ಲಿ (Post Office) ಸುಮಾರು 12 ಬೇರೆ ಬೇರೆ ರೀತಿಯ ಉಳಿತಾಯ ಯೋಜನೆಗಳನ್ನು (Savings Scheme) ಆರಂಭಿಸಲಾಗಿದೆ, ಇದರಲ್ಲಿ ಯಾವುದೇ ಯೋಜನೆಯಲ್ಲಿ, ನೀವು ಹೂಡಿಕೆ ಮಾಡಿದರು ಅತಿಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು.

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ದಂಡ ಎಷ್ಟು? ಎಷ್ಟು ದಿನ ಜೈಲು ಶಿಕ್ಷೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ನಲ್ಲಿ ಉಳಿತಾಯದ ಮೇಲಿನ ಬಡ್ಡಿ ದರ (rate of interest) ವನ್ನು ಹೆಚ್ಚಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರವನ್ನು ಪರಿಷ್ಕರಿಸಿ ಗ್ರಾಹಕರಿಗೆ ಉತ್ತಮ ರೀತಿಯ ಬಡ್ಡಿಯನ್ನು ನೀಡಲಾಗುವುದು.

ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ!

ಹೂಡಿಕೆ ಮಾಡಿದವರಿಗೆ ನಿಶ್ಚಿತ ಆದಾಯ ನೀಡುವ ಯೋಜನೆ ಇದಾಗಿದೆ. ಇದರಲ್ಲಿ ಅತಿ ಉತ್ತಮ ಬಡ್ಡಿದರವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಪ್ರತಿ ತಿಂಗಳು ಲಾಭ ರೂಪದ ಆದಾಯ ನಿಮ್ಮ ಉಳಿತಾಯ ಖಾತೆಯನ್ನು ಸೇರುತ್ತದೆ. ಐದು ವರ್ಷಗಳ ಮೆಚುರಿಟಿ ಅವಧಿಯಲ್ಲಿ ನೀವು ಲಕ್ಷಗಟ್ಟಲೆ ಹಣವನ್ನು ಆದಾಯವಾಗಿ ಸ್ವೀಕರಿಸಲು ಸಾಧ್ಯವಿದೆ.

ರೈತರಿಗೆ ಸಾಲ ಸೌಲಭ್ಯ ಪಡೆಯಲು ಉಚಿತ ಕಿಸಾನ್ ಕ್ರೆಡಿಟ್ ಕಾರ್ಡ್! ಹೀಗೆ ಅರ್ಜಿ ಸಲ್ಲಿಸಿ

Post office Schemeಎಷ್ಟು ಹೂಡಿಕೆ ಮಾಡಬಹುದು? (How much you can invest)

ಈ ತಿಂಗಳ ಉಳಿತಾಯ ಯೋಜನೆಗೆ 7.4% ಬಡ್ಡಿ ದರವನ್ನು ಅಂಚೆ ಕಛೇರಿ ನಿಗದಿಪಡಿಸಿದೆ. ಯೋಜನೆಯಲ್ಲಿ ಸಿಂಗಲ್ ಖಾತೆ ಅಥವಾ ಗಂಡ ಹೆಂಡತಿ ಜಂಟಿಯಾಗಿಯೂ ಕೂಡ ಖಾತೆ ಆರಂಭಿಸಬಹುದು.

ಜಂಟಿಯಾಗಿ ಉಳಿತಾಯ ಖಾತೆ ಆರಂಭಿಸಿದರೆ ಮೆಚುರಿಟಿ ಅವಧಿಯಲ್ಲಿ ದೊಡ್ಡ ಮೊತ್ತದ ಹಣ ನಿಮ್ಮ ಕೈ ಸೇರುತ್ತದೆ. ಒಬ್ಬ ವ್ಯಕ್ತಿ ಗರಿಷ್ಠ 9 ಲಕ್ಷದವರೆಗೆ ಹಾಗೂ ಗಂಡ ಹೆಂಡತಿ ಜಂಟಿಯಾಗಿ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಲೆಕ್ಕಾಚಾರದ ಪ್ರಕಾರ 9 lakh ಗಳನ್ನ ಹೂಡಿಕೆ ನೋಡಿದರೆ ಈಗಿನ ಬಡ್ಡಿ ದರದಲ್ಲಿ ಪ್ರತಿ ತಿಂಗಳು 5,550 ರೂಪಾಯಿಗಳನ್ನು ಮೆಚುರಿಟಿ ಅವಧಿಯ ನಂತರ ಪಡೆದುಕೊಳ್ಳಬಹುದು. ಅಂದರೆ ವರ್ಷಕ್ಕೆ 66,600 ಮತ್ತು 5 ವರ್ಷಕ್ಕೆ ರೂ.3,33,000ಗಳನ್ನು ಹಿಂಪಡೆಯಬಹುದು. ಜಂಟಿ ಖಾತೆಯನ್ನು ಆರಂಭಿಸಿದರೆ, ಹೂಡಿಕೆ ಮಾಡಿದ ಹದಿನೈದು ಲಕ್ಷ ರೂಪಾಯಿಗಳಿಗೆ ಐದು ಲಕ್ಷಕ್ಕೂ ಹೆಚ್ಚಿನ ಬಡ್ಡಿ ಸಿಗುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಕೇವಲ 18 ರೂ. ಹೂಡಿಕೆ ಮಾಡಿದ್ರೆ ಲಕ್ಷಗಟ್ಟಲೆ ಆದಾಯ

ಜಂಟಿ ಖಾತೆ ತೆರೆಯುವುದು!

ಅಂಚೆ ಕಚೇರಿಗೆ ತಿಂಗಳ ಉಳಿತಾಯ ಯೋಜನೆಯಲ್ಲಿ ಜಂಟಿ ಖಾತೆ (joint account) ತೆರೆಯುವುದು ಅಂದರೆ, ಕೇವಲ ಪ್ರತಿ – ಪತ್ನಿ ಮಾತ್ರವಲ್ಲ, ತಂದೆ ಮಕ್ಕಳು, ಸಹೋದರ – ಸಹೋದರಿ ಹೀಗೆ ಯಾರೂ ಬೇಕಾದರೂ ಜಂಟಿಯಾಗಿ ಖಾತೆ ಆರಂಭಿಸಿ ಹೂಡಿಕೆ ಮಾಡಬಹುದು. ಹತ್ತು ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಸಿಂಗಲ್ ಅಥವಾ ಜಂಟಿ ಖಾತೆ ತೆರೆಯಬಹುದು. ಯೋಜನೆಯಲ್ಲಿ ನಾಮಿನಿಯನ್ನು ಕೂಡ ಸೂಚಿಸಬೇಕಾಗುತ್ತದೆ.

ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷಗಳ ನಂತರ ಸಿಗುವ ಆದಾಯವನ್ನು ಮತ್ತೆ ಇತರ ಪೋಸ್ಟ್ ಆಫೀಸ್ ನ ಇತರ ಯೋಜನೆಯಲ್ಲಿ ಠೇವಣಿ ಮಾಡಿದರೆ ಹೆಚ್ಚಿನ ಬೆನಿಫಿಟ್ ಕೂಡ ಸಿಗಲಿದೆ. ಅಥವಾ ಈ ದೊಡ್ಡ ಮೊತ್ತವನ್ನು ನೀವು ಇತರ ಬ್ಯಾಂಕ್ ನಲ್ಲಿ (Bank) ಇಟ್ಟು ಬಡ್ಡಿ ಪಡೆಯಬಹುದು. ತಿಂಗಳ ಆದಾಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

ಬಡವರ ಸ್ವಂತ ಮನೆ ಕನಸು ಈಡೇರಿಸಲು ಮಹತ್ವದ ಯೋಜನೆ ತಂದ ಕೇಂದ್ರ ಸರ್ಕಾರ!

Both husband and wife can get 5 lakh income in this Post Office Scheme

Related Stories