ಮನೆ ಕಟ್ಟುವವರಿಗೆ, ಖರೀದಿ ಮಾಡುವವರಿಗೆ ಸಿಹಿ ಸುದ್ದಿ! ಗೃಹ ಸಾಲದ ಬಗ್ಗೆ ಅಪ್ಡೇಟ್
Home Loan : ಹೊಸಮನೆ ಖರೀದಿ ಮತ್ತು ನಿರ್ಮಾಣ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ; ಗೃಹ ಸಾಲದ ಬಗ್ಗೆ ಮಹತ್ವದ ಬಜೆಟ್
Home Loan : ಕೇಂದ್ರ ಸರ್ಕಾರ (Central government) ಇನ್ನು ಮುಂದೆ ಮನೆ ನಿರ್ಮಾಣ ಮಾಡಿಕೊಡುವವರಿಗೆ ಅಥವಾ ಹೊಸ ಮನೆ ಖರೀದಿ ಮಾಡುವವರಿಗೆ ಸಹಾಯಕವಾಗುವಂತೆ 2024ರ ಬಜೆಟ್ (budget) ಮಂಡಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Nirmala sitaraman) 2024 ಫೆಬ್ರುವರಿ 1ನೇ ತಾರೀಖಿನಂದು ಕೇಂದ್ರ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ ಈ ಬಜೆಟ್ ನಲ್ಲಿ ಗೃಹ ಸಾಲಕ್ಕೆ (Home Loan) ಹೆಚ್ಚಿನ ಆದ್ಯತೆ ನೀಡಲಾಗುವುದು.
ಜನಸಾಮಾನ್ಯರಿಗೆ ಬಿಗ್ ರಿಲೀಫ್! ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಗೆ ಸರ್ಕಾರ ಚಿಂತನೆ
ಈ ಬಾರಿಯ ಕೇಂದ್ರ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸದ್ಯದಲ್ಲಿಯೇ ಲೋಕಸಭಾ ಎಲೆಕ್ಷನ್ (lok sabha election) ಕೂಡ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಕೇಂದ್ರ ಬಜೆಟ್ ಮೇಲೆ ಭರವಸೆಯನ್ನು ಇಟ್ಟಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ! Tax deduction
ಗೃಹ ಸಾಲ ಪಡೆದುಕೊಂಡು ಮನೆ ನಿರ್ಮಾಣ ಮಾಡಲು ಬಯಸುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ (poor and middle class family) ಕೇಂದ್ರ ಸರ್ಕಾರದಿಂದ ಹೊಸ ವಸತಿ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ.
ಮನೆ, ಆಸ್ತಿ, ಜಮೀನು ಖರೀದಿಗೂ ಮುನ್ನ ಈ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ!
ಗೃಹ ಸಾಲದ ಮೇಲೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ. ವರದಿಯ ಪ್ರಕಾರ ಇದಕ್ಕಾಗಿ ಸರ್ಕಾರ 60,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡಿ ಕೊಳ್ಳುವವರಿಗೆ 3ರಿಂದ 6% ಬಡ್ಡಿ ದರದಲ್ಲಿ ರಿಯಾಯಿತಿ ಸಿಗಬಹುದು.
ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಹೆಚ್ಚಿನ ಸಬ್ಸಿಡಿ
ಹೊಸ ವಸತಿ ಯೋಜನೆ!
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅಗತ್ಯ ಇರುವ ಸಾಲ ಸೌಲಭ್ಯ (Loan) ಕ್ಕೆ ರಿಯಾಯಿತಿ ನೀಡುವ ಸಾಧ್ಯತೆ ಇದೆ.
ಹೊಸ ವಸತಿ ಯೋಜನೆ ಜಾರಿಗೆ ಬರಲಿದ್ದು, ಗೃಹ ಸಾಲ (Home loan) ಪಡೆದುಕೊಳ್ಳುವವರಿಗೆ ಇದು ಹೆಚ್ಚಿನ ಪ್ರಯೋಜನ ಆಗಲಿದೆ. ಏಕೆಂದರೆ 3%-6% ವರೆಗೆ ಬಡ್ಡಿ ಕಡಿತಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಫೆಬ್ರುವರಿ 1, 2024 ಕೇಂದ್ರ ಬಜೆಟ್ ಗಾಗಿ ಜನರು ಕಾದು ಕುಳಿತಿದ್ದಾರೆ. ಜನರ ನಿರೀಕ್ಷೆಯನ್ನು ಪೂರ್ಣಗೊಳಿಸಲಿದಿಯಾ ಸರ್ಕಾರ ಎಂಬುದನ್ನು ಕಾದು ನೋಡಬೇಕು.
Good news for home builders and buyers, Update on Home Loan