ಜನಸಾಮಾನ್ಯರಿಗೆ ಬಿಗ್ ರಿಲೀಫ್! ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಗೆ ಸರ್ಕಾರ ಚಿಂತನೆ

Story Highlights

ಎಲ್ಪಿಜಿ ಸಿಲೆಂಡರ್ ದರ ಇಳಿಕೆ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ಅಪ್ಡೇಟ್; ಜನಸಾಮಾನ್ಯರಿಗೆ ಸಮಾಧಾನ ತರಲಿದ್ಯಾ ಸರ್ಕಾರದ ಈ ನಿರ್ಧಾರ

LPG Gas Cylinder Price : ಕಳೆದ ಒಂದೆರಡು ವರ್ಷಗಳ ಹಿಂದೆ ಎಲ್‌ಪಿಜಿ ಸಿಲಿಂಡರ್ (LPG cylinder) ದರ ಒಂದೇ ಸಮನೆ ಏರಿಕೆ ಆಗಿತ್ತು. ಇದು ಗ್ರಾಹಕರಲ್ಲಿ ದೊಡ್ಡ ಅಸಮಾಧಾನವನ್ನು ಹುಟ್ಟು ಹಾಕಿತ್ತು.

ಯಾಕಂದ್ರೆ ಪ್ರತಿ ತಿಂಗಳು ಸಾವಿರಕ್ಕಿಂತಲೂ ಹೆಚ್ಚು ಹಣವನ್ನು ಎಲ್‌ಪಿಜಿ ಸಿಲೆಂಡರ್ ಖರೀದಿ ಮಾಡುವುದಕ್ಕೆ ವ್ಯಯಿಸಬೇಕಿತ್ತು. ಆದ್ರೆ 2023 ರಲ್ಲಿ ಜನರಿಗೆ ತುಸು ರಿಲೀಫ್ ತಂದುಕೊಟ್ಟಿತ್ತು ಕೇಂದ್ರ ಸರ್ಕಾರ!

ಮನೆ, ಆಸ್ತಿ, ಜಮೀನು ಖರೀದಿಗೂ ಮುನ್ನ ಈ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ!

ಸಿಲೆಂಡರ್ ದರ ಇಳಿಕೆ! (LPG cylinder rate decrease)

2023ರಲ್ಲಿ ಪಂಚ ರಾಜ್ಯ ಚುನಾವಣೆ (election) ಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಲ್ ಪಿ ಜಿ ಸಿಲಿಂಡರ್ ಮೇಲೆ ಸಬ್ಸಿಡಿ ಘೋಷಣೆ ಮಾಡಿತು. ಸಾಮಾನ್ಯರಿಗೆ 200 ರೂಪಾಯಿಗಳ ಸಬ್ಸಿಡಿ ಹಾಗೂ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡವರಿಗೆ ರೂ.300 ಸಬ್ಸಿಡಿ ಒದಗಿಸಲಾಗುತ್ತಿದೆ.

ಇದೀಗ ಸರ್ಕಾರ ಎಲ್ ಪಿ ಜಿ ಸಿ ಸಿಲಿಂಡರ್ ಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಹೊಸ ಅಪ್ಡೇಟ್ ನೀಡಿದೆ, ಇದರಿಂದ ಸಾಮಾನ್ಯ ಜನರಿಗೆ ಅನುಕೂಲ ಇದೆಯಾ ಎಂಬುದನ್ನು ತಿಳಿದುಕೊಳ್ಳೋಣ.

ರಾಜ್ಯ ಸರ್ಕಾರವು ಕೂಡ ಕೇಂದ್ರ ಸರ್ಕಾರದ ಮೇಲೆ ಗ್ಯಾಸ್ ಸಿಲಿಂಡರ್ ತರ ಇಳಿಕೆ ಮಾಡುವಂತೆ ಒತ್ತಾಯ ಹೇರಿದೆ. ಇನ್ನೇನು ಲೋಕಸಭಾ ಚುನಾವಣೆ (Loksabha election) ಯು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central government) , ಬೆಲೆ ಇಳಿಕೆ ಬಗ್ಗೆ ಬಹಳ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ವರದಿಯಾಗಿದೆ.

ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಹೆಚ್ಚಿನ ಸಬ್ಸಿಡಿ

LPG Gas Cylinderಪ್ರಸ್ತುತ ದೇಶದಲ್ಲಿ ಎಲ್ ಪಿ ಜಿ ಸಿಲಿಂಡರ್ ಬಳಸುವವರ ಸಂಖ್ಯೆ 33 ಕೋಟಿ ಅಷ್ಟು. 2025 – 26ರ ವೇಳೆಗೆ 75 ಲಕ್ಷ ಹೊಸ ಗ್ಯಾಸ್ ಕನೆಕ್ಷನ್ (gas connection) ಸೇರ್ಪಡೆಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಇದೀಗ ಗ್ಯಾಸ್ ಸಿಲಿಂಡರ್ ದರವನ್ನು ಇನ್ನಷ್ಟು ಇಳಿಕೆ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಚುನಾವಣೆಯನ್ನು ಎದುರಿಸುವಲ್ಲಿ ಸಹಾಯಕವಾಗಬಹುದು ಎಂದು ತಜ್ಞರು ಊಹಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಸಬ್ಸಿಡಿ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.

ಪೋಸ್ಟ್ ಆಫೀಸ್ ಸ್ಕೀಮ್! ಗಂಡ ಹೆಂಡತಿ ಇಬ್ಬರೂ ಪಡೆಯಬಹುದು 5 ಲಕ್ಷ ಆದಾಯ

200 ರೂಪಾಯಿ ಬದಲು 300ಗೆ ಸಬ್ಸಿಡಿ ದರದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಸದ್ಯದಲ್ಲಿ ಗ್ಯಾಸ್ ಸಿಲಿಂಡರ್ ದರದ ಬಗ್ಗೆ ಹೊಸ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ.

Government is thinking of reducing the price of LPG gas cylinder

Related Stories