ಸಾಮಾನ್ಯವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas Yojana) ಯ ಬಗ್ಗೆ ನೀವೆಲ್ಲರೂ ಕೇಳಿಯೇ ಇರುತ್ತೀರಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಯೋಜನೆಯ ಬಗ್ಗೆ ಚರ್ಚೆಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಯಾಕಂದ್ರೆ ಇದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ.
ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಬೇಕು. ಎನ್ನುವ ಕನಸು ಕಾಣುವುದು ಸಹಜ. ಆದರೆ ಅದನ್ನ ಈಡೇರಿಸಿಕೊಳ್ಳುವುದಕ್ಕೆ ಯಾರದಾದರೂ ಸಹಾಯ ಬೇಕು, ಹಾಗಂದ ಮಾತ್ರಕ್ಕೆ ಸುಲಭವಾಗಿ ಎಲ್ಲರೂ ಹಣ ಕೊಡುವುದಿಲ್ಲ.
ರೈತರಿಗಾಗಿ ಬಂಪರ್ ಯೋಜನೆ; ಪ್ರತಿ ತಿಂಗಳು ಸಿಗಲಿದೆ 3,000 ರೂಪಾಯಿ
ಅದಕ್ಕಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಕೂಡ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಸಹಾಯ ನೀಡುತ್ತದೆ. ಅತಿ ಕಡಿಮೆ ಬಡ್ಡಿ (less interest rate) ದರದಲ್ಲಿ ಅಥವಾ ಬಡ್ಡಿಯೇ ಇಲ್ಲದೆ ಗೃಹ ಸಾಲವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಪಡೆದುಕೊಳ್ಳಲು ಸಾಧ್ಯ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಹಾಗೂ ನಗರ ಎಂದು ಎರಡು ವಿಭಾಗಗಳನ್ನು ಮಾಡಲಾಗಿದೆ. ಹಾಗಾಗಿ ಗ್ರಾಮೀಣ ಭಾಗದ ಜನರಿಗೆ ಮಾತ್ರವಲ್ಲದೆ ನಗರದಲ್ಲಿ ವಾಸಿಸುವ ಜನರಿಗೂ ಕೂಡ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ಬಂದಿದೆ.
ಈ ಯೋಜನೆಯಡಿಯಲ್ಲಿ 1.9 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ ಹಾಗೂ 75 ಲಕ್ಷ ಮನೆಗಳನ್ನು ಪಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ವರದಿ ನೀಡಿದೆ.
ಮನೆ ಕಟ್ಟುವವರಿಗೆ, ಖರೀದಿ ಮಾಡುವವರಿಗೆ ಸಿಹಿ ಸುದ್ದಿ! ಗೃಹ ಸಾಲದ ಬಗ್ಗೆ ಅಪ್ಡೇಟ್
PMAY ಪಟ್ಟಿ ಬಿಡುಗಡೆ, ಆನ್ಲೈನ್ ನಲ್ಲಿ ಚೆಕ್ ಮಾಡಿ! (Check beneficiary name in online)
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಲಿಸ್ಟ್ ಜನವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿದೆ. ಆನ್ಲೈನ್ ಮೂಲಕ ಸುಲಭವಾಗಿ ಯಾರ ಹೆಸರು ಫಲಾನುಭವಿಗಳ ಲಿಸ್ಟ್ ನಲ್ಲಿ ಇದೆ ಅನ್ನೋದನ್ನ ತಿಳಿದುಕೊಳ್ಳಬಹುದು.
*https://pmaymis.gov.in/ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.
*ಹುಡುಕಾಟದಲ್ಲಿ ಫಲಾನುಭವಿ ಎಂದು ಟೈಪ್ ಮಾಡಿ.
*ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನ ನಮೂದಿಸಬೇಕು.
*ಈಗ ಸೆಂಡ್ ಒಟಿಪಿ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ ಅದನ್ನ ನಮೂದಿಸಿ.
*ಈಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಪಡೆದುಕೊಳ್ಳುವ ಫಲಾನುಭವಿಗಳ ಲಿಸ್ಟ್ ಕಾಣಿಸುತ್ತದೆ. ಇದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಜನಸಾಮಾನ್ಯರಿಗೆ ಬಿಗ್ ರಿಲೀಫ್! ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಗೆ ಸರ್ಕಾರ ಚಿಂತನೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಇದಕ್ಕಾಗಿ ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ https://pmaymis.gov.in/ ಗೆ ಭೇಟಿ ನೀಡಿ. ಸಿಟಿಜನ್ ಅಸಿಸ್ಮೆಂಟ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಈಗ ಒಂದು ಅರ್ಜಿ ಫಾರಂ ಕಾಣಿಸುತ್ತದೆ. ಸರಿಯಾದ ಮಾಹಿತಿಯನ್ನು ಕೊಟ್ಟು ಅರ್ಜಿ ಸಬ್ಮಿಟ್ ಮಾಡಿ.
PMAY ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್, ವಿಳಾಸದ ಪುರಾವೆ, ಆದಾಯ ಪ್ರಮಾಣ ಪತ್ರ, ಫೋಟೋ, ಮೊಬೈಲ್ ಸಂಖ್ಯೆ ಮೊದಲಾದವು ಅಗತ್ಯ ಇರುವ ದಾಖಲೆಗಳು.
ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಹೆಚ್ಚಿನ ಸಬ್ಸಿಡಿ
Only such people will get a Free house, Eligible list release
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.