ಇಂಥವರಿಗೆ ಮಾತ್ರ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ; ಹೊಸ ಪಟ್ಟಿ ಬಿಡುಗಡೆ

Gas Cylinder Subsidy : ಹಣದುಬ್ಬರದ ಸಮಸ್ಯೆ ಪ್ರತಿಯೊಬ್ಬ ಪ್ರಜೆಯನ್ನು ಕೂಡ ಬಹುವಾಗಿ ಕಾಡುತ್ತಿದೆ. ಇಂದು ಯಾವ ವಸ್ತುವೂ ಕೂಡ ಸಸ್ತಾ ಬೆಲೆಗೆ ಲಭ್ಯವಿದೆ ಎಂದು ಹೇಳಲು ಸಾಧ್ಯವೇ ಇಲ್ಲ

ನಾವು ಖರೀದಿ (purchase) ಮಾಡುವ ಪ್ರತಿಯೊಂದು ದಿನಸಿ ಸಾಮಗ್ರಿಗಳಿಂದ ಹಿಡಿದು, ಪೆಟ್ರೋಲ್ (petrol) ಡೀಸೆಲ್, ಗ್ಯಾಸ್ ಹೀಗೆ ಪ್ರತಿಯೊಂದು ಬೆಲೆ ಕೂಡ ಗಗನಕ್ಕೆ ಏರಿದೆ. ಇದರಿಂದ ಬಡವರಿಗೆ ನಿತ್ಯದ ಜೀವನ ನಡೆಸುವುದೇ ಕಷ್ಟವಾಗಿದೆ.

ಇಂತಹ ಸಂದರ್ಭದಲ್ಲಿ, ಕೇಂದ್ರ ಸರ್ಕಾರ (Central government) ಗ್ಯಾಸ್ ಸಿಲೆಂಡರ್ ಮೇಲೆ ಸಬ್ಸಿಡಿ (subsidy on gas cylinder) ಘೋಷಣೆ ಮಾಡಿದ್ದು ಜನರಿಗೆ ತುಸು ನೆಮ್ಮದಿ ನೀಡಿದೆ ಎನ್ನಬಹುದು.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್

ಹೌದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರು ಗ್ಯಾಸ್ ಸಿಲಿಂಡರ್ ಮೇಲೆ ಸಾಮಾನ್ಯರಿಗೆ 200 ರೂಪಾಯಿ ಹಾಗೂ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡವರಿಗೆ 300 ರೂಪಾಯಿಗಳ ಸಬ್ಸಿಡಿ ಘೋಷಣೆ ಮಾಡಿದ್ದಾರೆ. 14.12 ಕೆಜಿ ಗ್ಯಾಸ್ ಸಿಲಿಂಡರ್ ಅನ್ನು ಇದೀಗ 903 ರೂಪಾಯಿಗಳಿಗೆ ಸಾಮಾನ್ಯ ರೂಪ ಖರೀದಿ ಮಾಡಬಹುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಲಾಭ!

ಇಂದು ದೇಶದಲ್ಲಿ ಬಡ ಮಹಿಳೆಯರ ಹೆಸರಿನಲ್ಲಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಅನ್ನು ಲಕ್ಷಾಂತರ ಕುಟುಂಬಕ್ಕೆ ಕೇಂದ್ರ ಸರ್ಕಾರ ನೀಡಿದೆ. ಇದುವರೆಗೆ ಗ್ಯಾಸ್ ಒಲೆಯನ್ನು ಕಾಣದ, ಬಹಳ ಕಡು ಬಡತನದಲ್ಲಿ ಇದ್ದ ಕುಟುಂಬವು ಕೂಡ ಇಂದು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವಂತೆ ಆಗಿದೆ.

ಸರ್ಕಾರದಿಂದ ಉಚಿತ ಮನೆ! ಅರ್ಹರ ಪಟ್ಟಿ ಬಿಡುಗಡೆ; ಇಂಥವರಿಗೆ ಮಾತ್ರ ಸಿಗಲಿದೆ ಮನೆ

LPG Gas Cylinderಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಉಚಿತ ಗ್ಯಾಸ್ ಕನೆಕ್ಷನ್ (free gas connection) ಪಡೆದುಕೊಂಡವರಿಗೆ, ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್. ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಂಡವರ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು, ನಿಮ್ಮ ಹೆಸರು ಇದೆಯಾ ಎಂದು ಜನ ಚೆಕ್ ಮಾಡಿಕೊಳ್ಳಬಹುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 903 ರೂಪಾಯಿಗಳ ಗ್ಯಾಸ ಸಿಲಿಂಡರ್ ಅನ್ನು 300 ರೂಪಾಯಿಗಳ ಸಬ್ಸಿಡಿ ಯೊಂದಿಗೆ ಕೇವಲ 503 ರೂಪಾಯಿಗೆ ಪಡೆಯಬಹುದು. ವರ್ಷದಲ್ಲಿ 12 ಸಿಲೆಂಡರ್ ಗೆ ಮಾತ್ರ ಈ ಸಬ್ಸಿಡಿ (subsidy) ಅಪ್ಲೈ ಆಗುತ್ತದೆ. ಗ್ಯಾಸ್ ಸಿಲೆಂಡರ್ ಖರೀದಿ ಮಾಡುವಾಗ ಸಂಪೂರ್ಣ ಹಣವನ್ನು ಪಾವತಿ ಮಾಡಬೇಕು. ನಂತರ ಸಬ್ಸಿಡಿ ಹಣ ಫಲಾನುಭವಿಗಳ ಖಾತೆಗೆ ಬರುತ್ತದೆ.

ರೈತರಿಗಾಗಿ ಬಂಪರ್ ಯೋಜನೆ; ಪ್ರತಿ ತಿಂಗಳು ಸಿಗಲಿದೆ 3,000 ರೂಪಾಯಿ

ಅರ್ಹತಾ ಪಟ್ಟಿ ಪರಿಶೀಲಿಸಿ! (Check beneficiaries list)

ಇತ್ತೀಚಿಗೆ ಅನರ್ಹರ ಬಿಪಿಎಲ್ ಕಾರ್ಡ್ (BPL card) ಅನ್ನು ಸರ್ಕಾರ ರದ್ದು ಪಡಿಸುತ್ತಿದೆ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ (Ration Card) ಕೂಡ ರದ್ದಾಗಿದ್ದರೆ ಉಜ್ವಲ ಯೋಜನೆಯ ಪ್ರಯೋಜನ ಪಡೆದುಕೊಳ್ಳುವ ಸಾಧ್ಯವಿಲ್ಲ. ಹಾಗಾಗಿ ಆನ್ ಲೈನ್ (online) ಮೂಲಕ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.

https://www.mylpg.in/ ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ Bharat, HP, Indian ಈ ಮೂರು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದೀರೋ ಅದರ ಮೇಲೆ ಕ್ಲಿಕ್ ಮಾಡಿ.

ಈಗ Ujjwala beneficiaries ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮೊದಲಾದ ವಿವರಗಳನ್ನು ನೀಡಿ, ಸಬ್ಮಿಟ್ ಎಂದು ಕೊಡಿ. ಈಗ ಉಚಿತವಾಗಿ ಗ್ಯಾಸ ಸಿಲಿಂಡರ್ ಪಡೆದುಕೊಂಡ ಫಲಾನುಭವಿಗಳ ಲಿಸ್ಟ್ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಹೆಸರು ಇದ್ರೆ ಸಬ್ಸಿಡಿ ಹಣ ನಿಮ್ಮ ಖಾತೆಗೆ ಮಿಸ್ ಆಗದೆ ಜಮಾ ಆಗುತ್ತದೆ.

ಮನೆ ಕಟ್ಟುವವರಿಗೆ, ಖರೀದಿ ಮಾಡುವವರಿಗೆ ಸಿಹಿ ಸುದ್ದಿ! ಗೃಹ ಸಾಲದ ಬಗ್ಗೆ ಅಪ್ಡೇಟ್

Only such people will get gas cylinder subsidy, New list released

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories