ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಈ ರೀತಿ ಚೆಕ್ ಮಾಡಿಕೊಳ್ಳಿ

Story Highlights

Bank Loan : ನೀವು ಬ್ಯಾಂಕ್ ಲೋನ್ ಪಡೆದುಕೊಳ್ಳಲು ಅರ್ಹರಾಗಿದ್ದೀರೋ ಇಲ್ಲವೂ ಎಂಬುದನ್ನು ಸುಲಭವಾಗಿ ಮೊಬೈಲ್ ನಲ್ಲಿಯೇ ತಿಳಿಯಬಹುದು.. ಹೇಗೆ ಗೊತ್ತಾ?

Bank Loan : ದುಡ್ಡಿದ್ದವನೇ ದೊಡ್ಡಪ್ಪ ಎನ್ನುವಂತೆ ಯಾರ ಬಳಿ ಹಣ (Money) ಇಲ್ಲವೋ ಅವರಿಗೆ ಜೀವನ ನಡೆಸುವುದು ಬಹಳ ಕಷ್ಟವಾಗುತ್ತದೆ. ಅದೆಷ್ಟೋ ಬಾರಿ ನಾವು ತಿಂಗಳುಗಟ್ಟಲೆ ದುಡಿದು ಲಕ್ಷ ಹಣ ಸಂಪಾದಿಸಿದರು ಕೂಡ ತಿಂಗಳ ಕೊನೆಯಲಿ ಒಂದು ರೂಪಾಯಿ ಹಣ ಇಲ್ಲದೆ ಪರದಾಡುವ ಪರಿಸ್ಥಿತಿ ಬರುತ್ತದೆ. ಹಾಗಂದ ಮಾತ್ರಕ್ಕೆ ಪ್ರತಿ ಬಾರಿ ಯಾರ ಮುಂದೆಯೂ ಕೂಡ ಹಣಕ್ಕಾಗಿ ಕೈ ಚಾಚಲು ಸಾಧ್ಯವಿಲ್ಲ.

ಅದಕ್ಕಾಗಿ ನಾವು ಸುಲಭವಾಗಿ ಸಿಗಬಹುದಾದ ಬ್ಯಾಂಕ್ (Bank Loan) ಅಥವಾ ಬ್ಯಾಂಕೇತರ ಹಣಕಾಸು ಕಂಪನಿ (non banking) ಗಳಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ವೈಯಕ್ತಿಕ ಸಾಲ (personal loan) ಕ್ಕೆ ಬೇಡಿಕೆ ಹೆಚ್ಚು.

ಈ 2 ರೂಪಾಯಿ ಕಾಯಿನ್ ನಿಮ್ಮತ್ರ ಇದ್ರೆ ನೀವೇ ಲಕ್ಷಾಧಿಪತಿ; ಲಕ್ಷ ಗಳಿಸೋದು ಹೇಗೆ ಗೊತ್ತಾ?

ತಿಂಗಳ ಸಂಬಳ ಪಡೆದುಕೊಳ್ಳುವವರಾಗಿದ್ದರೆ ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯ ಬಡ್ಡಿ ದರ ( interest rate) ದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಇನ್ನು ಸಾಲ ಎಂದ ಕೂಡಲೇ ನಾವು ನಮ್ಮ ಅಮೂಲ್ಯವಾದ ವಸ್ತುವನ್ನು ಅಡವಿಡಲೇಬೇಕು.. ಅಂದ್ರೆ ಗ್ಯಾರಂಟಿ (guarantee) ಯಾಗಿ ಆಸ್ತಿ ಪತ್ರ (property papers) ಅಥವಾ ಒಡವೆಗಳನ್ನು ನೀಡಬೇಕು. ಜೊತೆಗೆ ಇನ್ನೊಬ್ಬ ವ್ಯಕ್ತಿಯ ಗ್ಯಾರಂಟಿ ಕೂಡ ಬೇಕಾಗಿರುತ್ತದೆ. ಆದರೆ ನಿಮಗೆ ಗೊತ್ತಾ ಯಾವ ಸಮಸ್ಯೆಯೂ ಇಲ್ಲದೆ ನೀವು ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಅಡಮಾನವಿಲ್ಲದೇ ಪಡೆಯಿರಿ ವೈಯಕ್ತಿಕ ಸಾಲ – Personal Loan

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ನಿಂದ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಸಾಲ ಸೌಲಭ್ಯವನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ. ಯಾವ ಗ್ಯಾರಂಟಿ ಯು ನೀಡದೆ ನೀವು ಸುಲಭವಾಗಿ ಸಾಲ ಪಡೆದುಕೊಳ್ಳಬೇಕು ಅಂದ್ರೆ ಅದಕ್ಕೆ ಇರುವ ಏಕೈಕ ಮಾರ್ಗ ಸಿಬಿಲ್ ಸ್ಕೋರ್.

ಹೌದು, ನಿಮ್ಮ ಸಿಬಿಲ್ ಸ್ಕೋರ್ (CIBIL score) ಅಥವಾ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ ಸುಲಭವಾಗಿ ಯಾವುದೇ ಬ್ಯಾಂಕ್ ನಿಂದ ಆದರೂ ಸಾಲ ಪಡೆದುಕೊಳ್ಳಲು ಸಾಧ್ಯವಿದೆ. ಕೆಲವೊಮ್ಮೆ ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದೇ ಇದ್ದರೆ, ಅಡಮಾನ ಇಟ್ಟರೂ ಕೂಡ ಸಾಲದ ಮೊತ್ತ ಬಹಳ ಕಡಿಮೆ ನೀಡಲಾಗುತ್ತದೆ.

ಮನೆ, ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದ ಮಹತ್ವದ ಸೂಚನೆ

Loanಸಿಬಿಲ್ ಸ್ಕೋರ್ ಯಾಕೆ ಬೇಕು?

ಒಬ್ಬ ವ್ಯಕ್ತಿಯ ಅಥವಾ ಕಂಪನಿಯ ಹಣಕಾಸು ವ್ಯವಹಾರದಲ್ಲಿನ ಪಾರದರ್ಶಕತೆಯನ್ನು ಸೂಚಿಸುತ್ತದೆ ಈ ಸಿಬಿಲ್ ಸ್ಕೋರ್! ಕ್ರೆಡಿಟ್ ಸ್ಕೋರ್ (credit score) ಚೆನ್ನಾಗಿದ್ರೆ ಯಾವ ಗ್ಯಾರಂಟಿಯನ್ನು ನೀಡಿದೆ ವಯಕ್ತಿಕ ಸಾಲವನ್ನು ಬ್ಯಾಂಕ್ ಗಳಿಂದ ಪಡೆದುಕೊಳ್ಳಬಹುದು. ಸಿಬಿಲ್ ಸ್ಕೋರ್ ಅನ್ನು 300 ರಿಂದ 950 ಪಾಯಿಂಟ್ ಗಳವರೆಗೆ ಗುರುತಿಸಲಾಗುತ್ತದೆ.

ಇನ್ಫಾರ್ಮಶನ್ ಬ್ಯೂರೋ ಇಂಡಿಯಾ ಲಿಮಿಟೆಡ್ (Information bureau India limited) ಮೂಲಕ ಈ ಸ್ಕೋರ್ ಗಳನ್ನು ನಿರ್ವಹಿಸಲಾಗುತ್ತದೆ. ಇದರ ಜೊತೆಗೆ ಎಕ್ಸ್ಪರಿಯನ್, ಇಕ್ವಿ ಫ್ಯಾಕ್ಸ್ ಮತ್ತು CIRF ಕ್ರೆಡಿಟ್ ಸ್ಕೋರ್ ನಿರ್ವಹಿಸುವ ಇತರ ಕಂಪನಿಗಳಾಗಿವೆ.

ಸಿಬಿಲ್ ಸ್ಕೋರ್ ಗ್ರೇಡಿಂಗ್ (CIBIL score grading)

750 ರಿಂದ 900 ಪಾಯಿಂಟ್ ಗಳು – ಅತ್ಯುತ್ತಮ
650 ರಿಂದ 750 ಪಾಯಿಂಟ್ ಗಳು – ಉತ್ತಮ
650 ರಿಂದ 550 ರವರೆಗಿನ ಪಾಯಿಂಟ್ ಗಳು – ಸರಾಸರಿ (average)
550 – 300 ಪಾಯಿಂಟ್ ಗಳು – ಕಳಪೆ

ರೈತರಿಗೆ ಸಿಹಿ ಸುದ್ದಿ; ಒಂದೇ ಒಂದು ರೂಪಾಯಿ ಬಡ್ಡಿ ಇಲ್ಲದೆ ಪಡೆಯಿರಿ 5 ಲಕ್ಷ ಸಾಲ!

ಸಿಬಿಲ್ ಸ್ಕೋರ್ ಕಡಿಮೆಯಾಗಲು ಕಾರಣ ಏನು?

ನೀವು ಬ್ಯಾಂಕ್ನಿಂದ ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದೆ ಇದ್ದರೆ, ಬ್ಯಾಂಕ್ ನಲ್ಲಿ ಕ್ರೆಡಿಟ್ ಕಾರ್ಡ್ (credit card) ತೆಗೆದುಕೊಂಡು ಅದನ್ನು ಬಳಸಿ ಪ್ರತಿ ತಿಂಗಳು ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದೆ ಇದ್ದಲ್ಲಿ, ನೀವು ಬೇರೆ ಯಾರಿಗಾದರೂ ಗ್ಯಾರಂಟಿ ಸಹಿ ಮಾಡಿ ಅವರು ಸಾಲ ಮರುಪಾವತಿ ಮಾಡದೆ ವಿಳಂಬ ಮಾಡಿದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ.

ನೀವು ಸರಿಯಾದ ಸಮಯಕ್ಕೆ ನಿಮ್ಮ ಸಾಲವನ್ನು ಮರುಪಾವತಿ ಮಾಡಿದರೆ, ಕ್ರೆಡಿಟ್ ಕಾರ್ಡ್ ನ ಡ್ಯು ಡೇಟ್ ಒಳಗೆ ಬಿಲ್ ಪಾವತಿ ಮಾಡಿದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿರಿಸಿಕೊಳ್ಳಬಹುದು.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪಕ್ಕಾ 5 ಲಕ್ಷ ಆದಾಯ!

ನೀವು ಯಾವ ಬ್ಯಾಂಕ್ ನ ಅಪ್ಲಿಕೇಶನ್ ಬಳಸುತ್ತಿರೋ ಆ ಬ್ಯಾಂಕ್ ನಲ್ಲಿ ಉಚಿತವಾಗಿ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಬಹುದು. ಅಥವಾ ಗೂಗಲ್ ನಲ್ಲಿ ಚೆಕ್ ಮೈ ಕ್ರೆಡಿಟ್ ಸ್ಕೋರ್ ಎಂದು ಟೈಪ್ ಮಾಡಿ ಅಲ್ಲಿ ಮೊದಲು ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿಕೊಳ್ಳಿ.

Check this way whether you get a bank loan or not

Related Stories