ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಆಗಿದೆ, ನಿಮ್ಮ ಖಾತೆಗೆ ಜಮಾ ಆಗಿದ್ಯಾ ಈ ರೀತಿ ತಿಳಿಯಿರಿ
Gas Cylinder Subsidy : ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಲು ಅನುಕೂಲವಾಗುವಂತೆ ಉಚಿತವಾಗಿ ಗ್ಯಾಸ್ ಕನೆಕ್ಷನ್ (free gas connection) ಅನ್ನು ಸರ್ಕಾರ ನೀಡುತ್ತಿದೆ
Gas Cylinder Subsidy : ಇಂದು ಬಹುತೇಕ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲೆಂಡರ್ (LPG gas cylinder) ಬಳಸಲಾಗುತ್ತದೆ. ಮುಂಚಿನಂತೆ ಒಲೆ ಹೊತ್ತಿಸಿ ಅಡುಗೆ ಮಾಡುವ ಕಷ್ಟ ಹೆಣ್ಣು ಮಕ್ಕಳಿಗೆ ಇಲ್ಲ.
ಸಾಮಾನ್ಯರಿಗೆ ಹಣದುಬ್ಬರದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ದರವು ಕೂಡ ಜಾಸ್ತಿ ಇರುವ ಸಮಯದಲ್ಲಿ ಸಾಕಷ್ಟು ತೊಂದರೆಗಳು ಆಗುತ್ತಿತ್ತು. ಈಗ ಸರ್ಕಾರದಿಂದ 200 ರೂಪಾಯಿಗಳಷ್ಟು ಸಬ್ಸಿಡಿ ಸಿಗುತ್ತಿದೆ. ಹಾಗಾಗಿ 900 ಆಸುಪಾಸಿನಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಸಾಧ್ಯವಿದೆ.
18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಹೊಸ ಅಪ್ಡೇಟ್
ಉಜ್ವಲಾ ಯೋಜನೆ ಅಡಿಯಲ್ಲಿ ಸಬ್ಸಿಡಿ! (Pradhanmantri Ujjwala Yojana)
ಭಾರತದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲೆಂಡರ್ ಮೂಲಕವೇ ಅಡುಗೆ ಮಾಡುವಂತೆ ಆಗಬೇಕು. ಮಹಿಳೆಯರಿಗೆ ಅಡುಗೆ ಮಾಡುವಷ್ಟು ಸಮಯ ಹೊರತುಪಡಿಸಿ ಇನ್ನಷ್ಟು ಸಮಯ ಸಿಕ್ಕು, ಆಕೆ ಅದನ್ನು ತನ್ನ ಸ್ವಾವಲಂಬನೆ (independent life) ಯ ಜೀವನ ನಡೆಸಲು ಬಳಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಉಚಿತವಾಗಿ ಗ್ಯಾಸ್ ಕನೆಕ್ಷನ್ (free gas connection) ಅನ್ನು ಸರ್ಕಾರ ನೀಡುತ್ತಿದೆ
ಲಕ್ಷಾಂತರ ಮಹಿಳೆಯರು ಉಜ್ವಲ 2.0 ಯೋಜನೆಯ ಅಡಿಯಲ್ಲಿ ಇಂದು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ನೂರು ರೂಪಾಯಿಗಳ ಸಬ್ಸಿಡಿ )subsidy) ಕೂಡ ನೀಡಲಾಗುತ್ತದೆ. ಗ್ಯಾಸ್ ಸಿಲೆಂಡರ್ ಖರೀದಿ ಮಾಡುವಾಗ ಸಂಪೂರ್ಣ ಹಣವನ್ನು ಪಾವತಿ ಮಾಡಬೇಕು ನಂತರ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುವುದು.
ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದ ಸಹಾಯಧನ; ಹೊಸ ವಸತಿ ಯೋಜನೆ
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಇಂಥವರ ಖಾತೆಗೆ ಬರುವುದಿಲ್ಲ!
ಸರ್ಕಾರ ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಇನ್ನು ಮುಂದೆ ಇಂಥವರ ಖಾತೆಗೆ ಬರುವುದಿಲ್ಲ. ಯಾಕೆ ಎಂದು ನೋಡುವುದಾದರೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡ ಪ್ರತಿಯೊಬ್ಬರೂ ಕೂಡ ತಮ್ಮ ಗ್ಯಾಸ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ (Aadhaar link) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಆದರೆ ಈ ಕೆಲಸವನ್ನ ಯಾರು ಮಾಡಿಕೊಂಡಿಲ್ಲವೋ ಅಂತವರ ಖಾತೆಗೆ ಇನ್ನು ಮುಂದೆ ಸಬ್ಸಿಡಿ ಹಣ ಬರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ನೀವಿನ್ನು ಈ ಕೆಲಸ ಮಾಡಿಕೊಳ್ಳದೆ ಇದ್ದರೆ ತಕ್ಷಣಕ್ಕೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.
ಕೇವಲ ₹600 ರೂಪಾಯಿಗೆ ಗ್ಯಾಸ್ ಸಿಲಿಂಡರ್! ಹೊಸ ಸಬ್ಸಿಡಿ ಪಟ್ಟಿ ಬಿಡುಗಡೆ
ಸಬ್ಸಿಡಿ ಹಣ ಬಂದಿದ್ಯೋ ಇಲ್ವೋ ಚೆಕ್ ಮಾಡುವುದು ಹೇಗೆ? (How to check subsidy status)
ಕಳೆದ ತಿಂಗಳಿನ ಸಬ್ಸಿಡಿ ಹಣ ಕೆಲವರ ಖಾತೆಗೆ ಜಮಾ ಆಗಿದೆ ಹಾಗೂ ಕೆಲವರ ಖಾತೆಗೆ ಜಮಾ ಆಗಿಲ್ಲ ಇನ್ನೂ ಪೆಂಡಿಂಗ್ ಇರುವ ಹಣವನ್ನು ಸದ್ಯದಲ್ಲಿಯೇ ಸರ್ಕಾರ ಬಿಡುಗಡೆ ಮಾಡಬಹುದು.
ಹಾಗಾದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು https://www.mylpg.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ ಭಾರತ್, ಎಚ್ ಪಿ, ಇಂಡಿಯನ್ ಮೂರು ಗ್ಯಾಸ್ ಕಂಪನಿಗಳ ಹೆಸರುಗಳನ್ನು ತೋರಿಸಲಾಗುತ್ತದೆ.
ಇವುಗಳಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಕನೆಕ್ಷನ್ ತೆಗೆದುಕೊಂಡಿದ್ದೀರಾ ಆ ಕಂಪನಿಯ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ಈಗ ನೇರವಾಗಿ ಅದೇ ಕಂಪನಿಯ ವೆಬ್ಸೈಟ್ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಗ್ಯಾಸ್ ಕನೆಕ್ಷನ್ ಐಡಿ ನಮೂದಿಸುವುದರ ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯೋ ಇಲ್ವೋ ಎಂಬುದನ್ನು ತಿಳಿದುಕೊಳ್ಳಬಹುದು.
ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಈ ರೀತಿ ಚೆಕ್ ಮಾಡಿಕೊಳ್ಳಿ
Gas subsidy money has been released, Check credited to your account