ಜನ ಹಣಕಾಸಿನ ವಹಿವಾಟು ಮಾಡುವಾಗ ಡಿಜಿಟಲೀಕರಣದತ್ತ ದಿನದಿಂದ ದಿನಕ್ಕೆ ವಾಲುತ್ತಿದ್ದಾರೆ ಎನ್ನಬಹುದು. ಯಾಕಂದ್ರೆ ಈಗ ಸಾಂಪ್ರದಾಯಿಕ ಹಣಕಾಸು ವಹಿವಾಟಿನ ಪದ್ಧತಿ ಇಲ್ಲ ಅದರ ಬದಲು ಕೈ ಬೆರಳ ತುದಿಯಲ್ಲಿ ಮೊಬೈಲ್ ಮೂಲಕ ಎಲ್ಲಾ ಪೇಮೆಂಟ್ ಗಳನ್ನು (Online Payment) ಹಾಗೂ ಇತರ ಹಣಕಾಸು ವ್ಯವಹಾರಗಳನ್ನು ಕೂಡ ಮಾಡಿಕೊಳ್ಳಬಹುದು.
ಬ್ಯಾಂಕ್ ನಲ್ಲಿ (Bank) ಉಳಿತಾಯ ಖಾತೆಯನ್ನು (Savings Account) ಹೊಂದಿರುವುದು ಸಹಜ, ಅದರಲ್ಲೂ ಸಾಮಾನ್ಯ ಜನರು ಯಾವುದೇ ಸಣ್ಣಪುಟ್ಟ ವ್ಯವಹಾರ ಕೂಡ ಉಳಿತಾಯ ಖಾತೆಯನ್ನು ಹೊಂದಿರಬೇಕು. ಅಷ್ಟೇ ಅಲ್ಲದೆ ಸಾಕಷ್ಟು ಜನ ತಮ್ಮ ಬಳಿ ಇರುವ ಹಣವನ್ನು ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯ ಮೂಲಕವೇ ಠೇವಣಿ ಇಡುತ್ತಾರೆ ಹಾಗೂ ಇದಕ್ಕೆ ಉತ್ತಮ ಬಡ್ಡಿಯನ್ನು ಕೂಡ ಬ್ಯಾಂಕ್ ನೀಡುತ್ತದೆ.
ಇದೀಗ ಬ್ಯಾಂಕ್ ನಲ್ಲಿ ನೀವು ಇಟ್ಟ ನಿಮ್ಮ ಹಣವನ್ನೇ ಹಿಂಪಡೆಯಲು ತೆರಿಗೆ ವಿಧಿಸುವ ಬಗ್ಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ.
ಇನ್ಮುಂದೆ ಆಸ್ತಿ ಮಾರಾಟ, ಖರೀದಿ ಹಾಗೂ ನೋಂದಣಿಗೆ ಹೊಸ ರೂಲ್ಸ್! ಇಲ್ಲಿದೆ ಮಾಹಿತಿ
ಆದಾಯ ತೆರಿಗೆ ಹೊಸ ನಿಯಮ!
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194N ಅನ್ನು 2019 ರ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಇದರ ಅನ್ವಯ, 20 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟು ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಮೂರು ವರ್ಷಗಳಿಂದ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸದೆ ಇರುವವರಿಗೆ ಈ ನಿಯಮ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇಟ್ಟಾಗ ಅದನ್ನು ಪಾಸ್ ಬುಕ್ ಮೂಲಕ ನಗದು ರೂಪದಲ್ಲಿ ಹಿಂಪಡೆಯಲು ಜನ ಬಯಸುತ್ತಾರೆ.
ಅದೇ ರೀತಿ ಎಟಿಎಂನಿಂದ ನಗದು ಹಣ ಹಿಂಪಡೆದರೆ ಬ್ಯಾಂಕ್ ಈಗಾಗಲೇ ಶುಲ್ಕ ವಿಧಿಸಲು ಆರಂಭಿಸಿದೆ. ಇದೀಗ ಪಾಸ್ ಬುಕ್ ಮೂಲಕ ಬ್ಯಾಂಕಿಗೆ ಹೋಗಿ ನೀವು ಕ್ಯಾಶ್ ತೆಗೆದುಕೊಂಡರೆ ಅದರ ಮೇಲೆ ಕೂಡ ಶುಲ್ಕ ವಿಧಿಸಲಾಗುವುದು.
ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ದಂಡ! ಹೊಸ ಅಪ್ಡೇಟ್
ನಗದು ವ್ಯವಹಾರ ಕಡಿಮೆ ಮಾಡುವುದು ಸರ್ಕಾರದ ಉದ್ದೇಶ!
ನಾವು ಈಗಾಗಲೇ ದೇಶಾದ್ಯಂತ ಕ್ಯಾಶ್ ಲೆಸ್ ವ್ಯವಹಾರಕ್ಕೆ ಸರ್ಕಾರ ಉತ್ತೇಜಿಸುತ್ತಿರುವುದನ್ನು ಕಂಡಿದ್ದೇವೆ . ಇದರಿಂದಾಗಿ ಸಾಕಷ್ಟು ವಂಚನೆಯ ಅಥವಾ ಕಪ್ಪು ಹಣದ ಬಳಕೆ ಕಡಿಮೆ ಆಗಿದೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ನಗದು ರೂಪದ ಹಣಕಾಸಿನ ವ್ಯವಹಾರವನ್ನು ಕಡಿಮೆ ಮಾಡುವ ಸಲುವಾಗಿ ತೆರಿಗೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ.
ರೈತರ ಖಾತೆಗೆ ಈ ದಿನ ಜಮಾ ಆಗಲಿದೆ 2,000 ರೂಪಾಯಿ, ಅಧಿಕೃತ ಘೋಷಣೆ
ಹೊಸ ನಗದು ನಿಯಮ ಹೀಗಿದೆ!
ಏಕ ಕಾಲಕ್ಕೆ 20 ಲಕ್ಷ ರೂಪಾಯಿಗಳ ನಗದು ಹಣ ಹಿಂಪಡೆಯುವುದಿದ್ದರೆ ಗ್ರಾಹಕರು ತಮ್ಮ ಆಧಾರ್ ಕಾರ್ಡ್ (Aadhaar Card) ಮಾತ್ರವಲ್ಲದೇ ಪ್ಯಾನ್ ಕಾರ್ಡ್ ಕೂಡ ಸಲ್ಲಿಕೆ ಮಾಡಬೇಕು. ಇನ್ನು ಒಂದು ದಿನದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ ಖಾತೆಯಿಂದ ಹಿಂಪಡೆದರೆ 1% ಶುಲ್ಕ ಪಾವತಿಸಬೇಕು. ಅದೇ ರೀತಿ 10 ಲಕ್ಷ ರೂಪಾಯಿಗಳನ್ನು ಒಂದು ತಿಂಗಳ ಅವಧಿಯಲ್ಲಿ ಖಾತೆಯಿಂದ ಹಿಂಪಡೆದರೆ 2% ನಷ್ಟು ಶುಲ್ಕ ವಿಧಿಸಲಾಗುತ್ತದೆ. 75,000ಗಳಿಗಿಂತ ಹೆಚ್ಚಿನ ನಗದು ಹಿಂಪಡೆದರೆ ಗ್ರಾಹಕರು ತಮ್ಮ ಗುರುತಿನ ಪುರಾವೆಯನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ.
ನಗದು ಪಾವತಿಯ ಮೇಲೆ ಪರಿಣಾಮ!
ಗ್ರಾಹಕರು 75,000ಗಳನ್ನು ನಗದು, ಹಿಂಪಡೆಯುವಿಕೆಯ ಮೇಲೆ ಅಂಚೆ ಕಚೇರಿ ಬ್ಯಾಂಕ್ ಅಥವಾ ಸಹಕಾರಿ ಸಂಘಗಳು ಗ್ರಾಹಕರ ಪ್ರಮಾಣ ಪತ್ರವನ್ನು ಕೇಳಬಹುದು. ಹೋಟೆಲ್ ಹಾಗೂ ಅಂಗಡಿ ಉದ್ಯಮದಲ್ಲಿ ನಗದು ವಹಿವಾಟಿನ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಲಿದೆ.
Tax is payable on withdrawals from your bank account
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.