ಬಾಡಿಗೆ ಮನೆಯಲ್ಲಿ ಇರೋರು ತಪ್ಪದೆ ತಿಳಿಯಿರಿ! ನಿಯಮದಲ್ಲಿ ಹೊಸ ಬದಲಾವಣೆ

Story Highlights

ಬಾಡಿಗೆಗೆ ಅಥವಾ ಭೋಗ್ಯಕ್ಕೆ ಮನೆ ತೆಗೆದುಕೊಳ್ಳುವುದಕ್ಕೂ ಮೊದಲು ಈ ವಿಷಯ ಗಮನಿಸಿ ಇಲ್ಲವಾದರೆ ನಿಮಗೆ ಆಗಬಹುದು ದೊಡ್ಡ ನಷ್ಟ

ನಾವು ಪಟ್ಟಣ ಪ್ರದೇಶಗಳಿಗೆ ಯಾವುದಾದರೂ ಕೆಲಸಕ್ಕಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗಿ, ಅಲ್ಲಿ ಉಳಿದುಕೊಳ್ಳುವುದಕ್ಕೆ ಬಾಡಿಗೆ ಮನೆ (rented house) ಹುಡುಕುವುದು ಸಹಜ.

ಮನೆ ಅಂಗಡಿ ಅಥವಾ ಇತರ ಕಟ್ಟಡಗಳನ್ನು ತಿಂಗಳ ಬಾಡಿಗೆ ಆಧಾರದ ಮೇಲೆ ಕೊಡುವುದು ಒಂದು ರೀತಿಯಾದರೆ, ಇನ್ನೊಂದು ಕಡೆ ಭೋಗ್ಯಕ್ಕೆ (house for lease) ಕೂಡ ಮನೆ ಪಡೆಯಬಹುದು.

ಅಂದರೆ ನೀವು ಬಾಡಿಗೆ ಪಾವತಿಸುವ ಅಗತ್ಯವಿಲ್ಲ. ಒಂದು ದೊಡ್ಡ ಮೊತ್ತದ ಹಣವನ್ನು ಮೊದಲೇ ಮನೆಯ ಓನರ್ ಗೆ ಕೊಡಬೇಕು. ಆತ ಅದನ್ನ ಐದು ವರ್ಷಕ್ಕೆ ಅಥವಾ ಮೂರು ವರ್ಷಕ್ಕೆ ಲೀಸ್ ಹಾಕಿ ಕೊಡಬಹುದು.

ಆಸ್ತಿ, ಜಮೀನು, ಮನೆ ಖರೀದಿ ಮಾಡೋರಿಗೆ ಹೊಸ ನಿಯಮ! ಬಾರೀ ಬದಲಾವಣೆ

ಹೀಗೆ ಲೀಸ್ಗೆ ಮನೆ ತೆಗೆದುಕೊಂಡರೆ ನೀವು ಯಾವಾಗ ಮನೆ ಬಿಡುತ್ತೀರೋ ಆಗ ಆ ಮನೆಯ ಮಾಲೀಕ ನಿಮಗೆ ನೀವು ಕೊಟ್ಟಿರುವ ದೊಡ್ಡ ಮೊತ್ತದ ಹಣವನ್ನು ಹಿಂತಿರುಗಿಸಬೇಕು.

ಬಾಡಿಗೆ ಮನೆಯಲ್ಲಿ ಪ್ರತಿ ತಿಂಗಳು ಇಂತಿಷ್ಟು ಹಣ ಬಾಡಿಗೆ ಪಾವತಿ ಮಾಡಬೇಕು ಆದರೆ ಭೋಗ್ಯಕ್ಕೆ ಮನೆ ತೆಗೆದುಕೊಂಡರೆ ನೀವು ಒಂದಷ್ಟು ದೊಡ್ಡ ಮೊತ್ತವನ್ನು ಮನೆ ಓನರ್ಗೆ ಕೊಟ್ಟು ಉಳಿದಷ್ಟು ವರ್ಷಗಳ ಕಾಲ ನೆಮ್ಮದಿಯಿಂದ ಇರಬಹುದು.

ಇನ್ನು ಬಾಡಿಗೆಗಾಗಲಿ ಭೋಗ್ಯಕ್ಕಾಗಲಿ ಮನೆ ತೆಗೆದುಕೊಳ್ಳುವಾಗ, ಕೆಲವು ವಿಚಾರಗಳನ್ನು ನೆನಪಿಟ್ಟುಕೊಳ್ಳಿ.. ಇಲ್ಲವಾದರೆ ನಿಮಗೆ ದೊಡ್ಡ ನಷ್ಟ ಆಗಬಹುದು.

ಮನೆ ಮಾಲೀಕ ಸಾಲ ಮಾಡಿದ್ದರೆ – Home Loan

ನೀವು ಯಾವುದೇ ಬಾಡಿಗೆ ಮನೆಯಲ್ಲಿ ಇದ್ದರೆ ಅಥವಾ ಭೋಗ್ಯಕ್ಕೆ ಮನೆಯನ್ನು ತೆಗೆದುಕೊಂಡಿದ್ದರೆ ಆ ಕಟ್ಟಡದ ಮೇಲೆ ಮನೆಯ ಮಾಲೀಕ ಸಾಲ ಮಾಡಿದ್ದರೆ ಹಾಗೂ ಸಾಲ ತೀರಿಸದೇ (Loan Re Payment) ಇದ್ದಾಗ ಬ್ಯಾಂಕ್ ಆ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ಆ ಕಟ್ಟಡವನ್ನೇ ಕೆಡವಿ ಬಿಡಬಹುದು.

ಅಂತಹ ಸಂದರ್ಭದಲ್ಲಿ ನಿಜಕ್ಕೂ ಲಾಸ್ ಆಗುವುದು ಬಾಡಿಗೆದಾರರಿಗೆ. ಯಾಕಂದ್ರೆ ನಿಮ್ಮ ಹಣಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಬಾಡಿಗೆದಾರರಿಗೆ ಅಥವಾ ಭೋಗ್ಯಕ್ಕೆ ಮನೆ ತೆಗೆದುಕೊಂಡವರಿಗೆ ಅವರು ಡೆಪಾಸಿಟ್ ಹಣವನ್ನು ತಿರುಗಿಸುವುದಿಲ್ಲ.

ದಿನಕ್ಕೆ ಕೇವಲ ಎರಡು ಗಂಟೆ ಕೆಲಸ ಮಾಡಿ 30 ಸಾವಿರ ಗಳಿಸುವ ಬೆಸ್ಟ್ ಉದ್ಯೋಗ!

Rent Houseಹಾಗಾಗಿ ನೀವು ಇಂತಹ ಸಂದರ್ಭದಲ್ಲಿ ದೊಡ್ಡ ಮೊತ್ತದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ನೀವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ, ಡಿಪಾಸಿಟ್ ಹಣ ದೊಡ್ಡ ಮೊತ್ತದಲ್ಲದೆ ಇರಬಹುದು. ಆದರೆ ಭೋಗ್ಯಕ್ಕೆ ಅಥವಾ ಲೀಸ್ಗೆ ಮನೆ ತೆಗೆದುಕೊಂಡು ಇದ್ದರೆ ಐದು ಅಥವಾ ಹತ್ತು ಲಕ್ಷ ರೂಪಾಯಿಗಳನ್ನು ನೀವು ಕೊಟ್ಟಿರಬಹುದು ಅಂತಹ ಸಂದರ್ಭದಲ್ಲಿ ನೀವು ಈ ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ.

ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ಸ್ಟೆ ಆರ್ಡರ್ ತನ್ನಿ!

ನೀವು ಇದರಿಂದ ತಪ್ಪಿಸಿಕೊಳ್ಳಬೇಕು, ನಿಮ್ಮ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂದಾದರೆ ಇರುವ ಒಂದೇ ಒಂದು ಮಾರ್ಗ ನೀವು ಕಟ್ಟಡ ಕೆಡವದಂತೆ ತಡೆಯಾಜ್ಞೆ (stay order) ತರಬಹುದು. ಮನೆಯ ಮಾಲಿಕ ಹಾಗೂ ಬ್ಯಾಂಕ್ ಇಬ್ಬರನ್ನು ಗುರಿಯಾಗಿಸಿ ಸ್ಟೆ ಆರ್ಡರ್, ಕೋರ್ಟ್ ನಿಂದ ತಂದರೆ ನಿಮಗೆ ನ್ಯಾಯ ಸಿಗುವ ಸಾಧ್ಯತೆ ಇರುತ್ತದೆ.

ಅಗ್ರಿಮೆಂಟ್ ಮಾಡಿಸಿಕೊಳ್ಳಿ!

ಇನ್ನು ಯಾವುದೇ ಸಂದರ್ಭದಲ್ಲಿ ಮನೆ ಬಾಡಿಗೆಗೆ ತೆಗೆದುಕೊಳ್ಳುವದಿದ್ದರೆ ಅಥವಾ ಭೋಗ್ಯಕ್ಕೆ ಮನೆ ತೆಗೆದುಕೊಳ್ಳುವುದಿದ್ದರೆ ತಪ್ಪದೆ ಅಗ್ರಿಮೆಂಟ್ (agreement) ಮಾಡಿಸಿಕೊಳ್ಳಿ.

ಇದರಲ್ಲಿ ಎಲ್ಲಾ ವಿಚಾರಗಳನ್ನು ಸರಿಯಾಗಿ ನಮೂದಿಸಿ. ಇನ್ನು ಮನೆಯ ಮಾಲೀಕ ನೀವು ಕೊಟ್ಟ ಹಣವನ್ನು ಹಿಂತಿರುಗಿ ಕೊಡುವಷ್ಟು ಶಕ್ತನಾಗಿದ್ದಾನೆ ಎನ್ನುವುದನ್ನು ದೃಢೀ ಪಡಿಸಿಕೊಳ್ಳಿ. ಈ ರೀತಿ ನೀವು ಜಾಗರೂಕರಾಗಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇಲ್ಲವಾದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್; ಸಿಗಲಿದೆ 10 ಲಕ್ಷ ರೂಪಾಯಿವರೆಗೆ ಸುಲಭ ಸಾಲ

Be sure to stay in a rental home, Rented House Rules