Business News

ಸ್ವಂತ ಮನೆ ಕಟ್ಟಿಕೊಳ್ಳಲು ಮಹಿಳೆಯರಿಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಹೋಂ ಲೋನ್

Home Loan : ಒಂದು ಸ್ವಂತ ಮನೆ ನಿರ್ಮಾಣ (own house) ಮಾಡಬೇಕು ಅಂದ್ರೆ, ಕಡಿಮೆ ಬಡ್ಡಿ ದರದಲ್ಲಿ ಸಾಲ (loan) ಸೌಲಭ್ಯ ಸಿಕ್ಕರೆ ಹೋಂ ಲೋನ್ (home loan) ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಲಾಗುತ್ತದೆ.

ಸಾಮಾನ್ಯವಾಗಿ ಹೋಂ ಲೋನ್ ಮಾಡಿದ್ರೆ ಆದಾಯ ತೆರಿಗೆ ಕಡಿತ (income tax deduction) ದಿಂದ ಹಿಡಿದು ಸಾಕಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.

Building a house Even your own land requires permission

ಅದರಲ್ಲೂ ಒಬ್ಬ ಮಹಿಳೆ ಹೋಂ ಲೋನ್ (home loan for women) ಪಡೆದುಕೊಂಡರೆ ಅಥವಾ ಮಹಿಳಾ ಪಾಲುದಾರರ ಹೆಸರಿನಲ್ಲಿ ಗೃಹ ಸಾಲ ಪಡೆದುಕೊಂಡರೆ ಅದರಿಂದ ಹೆಚ್ಚಿನ ಪ್ರಯೋಜನಗಳು ಇವೆ. ಅಂತಹ ಪ್ರಯೋಜನಗಳಲ್ಲಿ ಮುಖ್ಯವಾಗಿರುವುದು, ಅತಿ ಕಡಿಮೆ ಬಡ್ಡಿ ದರ (home loan with less interest) ದಲ್ಲಿ ಗೃಹ ಸಾಲ ಮಂಜೂರಾಗುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್, 38 ಸಾವಿರ ರಿಯಾಯಿತಿ!

ಕಡಿಮೆ ಬಡ್ಡಿ ದರದಲ್ಲಿ ಲೋನ್! (Loan with low interest)

ಒಬ್ಬ ಪುರುಷ ಸಾಲದಾರನಿಗೆ ಸಿಗುವ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಮಹಿಳಾ ಸಾಲಗಾರರು ಹೋಂ ಲೋನ್ ಪಡೆದುಕೊಳ್ಳಬಹುದು ಉದಾಹರಣೆಗೆ ಒಬ್ಬ ಪುರುಷ ಯಾವುದೇ ಬ್ಯಾಂಕ್ (Bank) ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿದ್ರೆ, ಗೃಹ ಸಾಲದ ಬಡ್ಡಿದರ 6.75% ಇದೆ ಎಂದಾದರೆ, ಮಹಿಳೆಯರು 6.65% ನಲ್ಲಿ ಸಾಲ ಪಡೆಯಬಹುದು. ಇದರ ಜೊತೆಗೆ ಸಾಲ ಮರುಪಾವತಿ ಮಾಡುವ ಅವಧಿಯು ಕೂಡ ದೀರ್ಘಾವಧಿ ಆಗಿರುತ್ತದೆ.

ಸರ್ಕಾರದಿಂದ ಸಬ್ಸಿಡಿ! (Get subsidy by government)

ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರ ಬೇರೆ ಬೇರೆ ವಸತಿ ಯೋಜನೆ (home schemes) ಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಮಹಿಳಾ ಮಾಲೀಕರಿಗೆ ಹೆಚ್ಚಿನ ಪ್ರಯೋಜನ ನೀಡಲಾಗುವುದು. ಪಿ ಎಂ ಆವಾಸ್ ಯೋಜನೆ (PM aawas scheme) ಯಂತಹ ಮನೆ ನಿರ್ಮಾಣ ಯೋಜನೆಗಳಲ್ಲಿ ಹೆಣ್ಣು ಮಕ್ಕಳು ಸಾಲ ಸೌಲಭ್ಯ ಪಡೆದುಕೊಳ್ಳುವುದಾದರೆ ಸರ್ಕಾರದಿಂದ ಹೆಚ್ಚಿನ ಸಬ್ಸಿಡಿ ಕೂಡ ಪಡೆಯಬಹುದು.

ಹಳೆಯ 100 ರೂಪಾಯಿ ನೋಟುಗಳು ರದ್ದು! ಏನಿದು ವೈರಲ್ ಸುದ್ದಿಯ ಸತ್ಯಾಂಶ

Home Loanತೆರಿಗೆ ವಿನಾಯಿತಿ ಪಡೆಯಬಹುದು! (Get tax deduction)

ಮೊದಲ ಬಾರಿಗೆ ಮಹಿಳಾ ಮಾಲೀಕರು ಮನೆ ಖರೀದಿ ಮಾಡುವುದಾಗಿದ್ದರೆ ಆದಾಯ ತೆರಿಗೆ ಸೆಕ್ಷನ್ 80EE ಹಾಗೂ ಸೆಕ್ಷನ್ 80 EEA ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಮಹಿಳಾ ಮಾಲೀಕರಿಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ಚಿನ್ನಾಭರಣ ಪ್ರಿಯರಿಗೆ ಕೊಂಚ ರಿಲೀಫ್! ಭಾನುವಾರವೂ ಚಿನ್ನದ ಬೆಲೆ ಸ್ಥಿರ

ಆಸ್ತಿ ನೋಂದಾವಣೆ ಶುಲ್ಕ ಕಡಿಮೆ!

ಯಾವುದೇ ಆಸ್ತಿ ನೋಂದಾವಣೆ ಮಾಡಿಕೊಳ್ಳುವಾಗ ಸ್ಟ್ಯಾಂಪ್ ಡ್ಯೂಟಿ (stamp duty) ಎನ್ನುವ ಕಾನೂನಿನ ತೆರಿಗೆ ಪಾವತಿ ಮಾಡಬೇಕು. ಪುರುಷ ಮಾಲೀಕರಿಗೆ ಹೋಲಿಸಿದರೆ ಆಸ್ತಿ ನೋಂದಾವಣೆ ಮಾಡಿಕೊಳ್ಳಲು ಮಹಿಳೆಯರಿಗೆ ಇರುವ ಶುಲ್ಕ ಕಡಿಮೆ. ಯಾವುದೇ ಆಸ್ತಿ ನೋಂದಾವಣೆ ಮಾಡಿಕೊಳುವುದಕ್ಕೆ ಸ್ಟ್ಯಾಂಪ್ ಡ್ಯೂಟಿ ಕಡ್ಡಾಯವಾಗಿದೆ. ಪ್ರಮಾಣಿಕೃತ ಬೆಲೆಗಿಂತ ಒಂದರಿಂದ 2% ನಷ್ಟು ಕಡಿಮೆ ಶುಲ್ಕವನ್ನು ಮಹಿಳೆಯರು ಸ್ಟ್ಯಾಂಪ್ ಡ್ಯೂಟಿ ಆಗಿ ಪಾವತಿಸಬಹುದು.

Home Loanಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ! (Credit linked subsidy schemes)

ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas Yojana) ಮೂಲಕ ಸಾಕಷ್ಟು ಫಲಾನುಭವಿ ಕುಟುಂಬಗಳಿಗೆ ಅತಿ ಕಡಿಮೆ ಬೆಲೆಗೆ ಮನೆ ಕಟ್ಟಿಸಿ ಕೊಡಲಾಗುತ್ತದೆ. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ (CLSS) ಗಳನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಪರಿಚಯಿಸಿದ್ದು ಈ ಮೂಲಕ ಮಹಿಳೆಯರು CLSS ನ ಹೆಚ್ಚಿನ ಬೆನಿಫಿಟ್ ಪಡೆದುಕೊಳ್ಳಬಹುದು. ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡು ಸುಲಭವಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಮಹಿಳೆಯರಿಗೆ ವಿಶೇಷ ಅವಕಾಶವನ್ನು ಸರಕಾರ ಮಾಡಿಕೊಟ್ಟಿದೆ.

ಮೋದಿ ಸರ್ಕಾರದಿಂದ ಹೊಸ ವರ್ಷದ ಗಿಫ್ಟ್, ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಸಾಧ್ಯತೆ!

Women will get low interest home loan to build their own house

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories