ಮಹಿಳೆಯರ ಸ್ವಂತ ವ್ಯಾಪಾರಕ್ಕೆ ಸಿಗಲಿದೆ 5 ಲಕ್ಷ ಸಾಲ! ಬಂಪರ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, ಬ್ಯುಸಿನೆಸ್ ಮಾಡುವುದಕ್ಕೆ 1 ರಿಂದ 5 ಲಕ್ಷದವರೆಗೂ ಸಾಲ (Loan) ಕೊಡಲಾಗುತ್ತದೆ.
Loan Scheme : ಒಂದು ದೇಶದಲ್ಲಿ ಮಹಿಳೆ ಅಭಿವೃದ್ಧಿ ಆದರೆ ಇಡೀ ದೇಶವೇ ಸರಿ ದಾರಿಯಲ್ಲಿ ನಡೆದ ಹಾಗೆ. ಯಾಕೆಂದರೆ ಮಹಿಳೆಯ ಶಕ್ತಿ ಅಂಥದ್ದು. ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಮತ್ತು ಪ್ರೀತಿ ಇದೆ. ನಮ್ಮ ಮಹಿಳೆಯರು ಆರ್ಥಿಕವಾಗಿ ಸ್ವಾತಂತ್ರ್ಯವಾಗಿರಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಮಹಿಳೆಯರಿಗೆ ಹೊಸ ಹೊಸ ಯೋಜನೆಗಳನ್ನು, ಸೌಲಭ್ಯಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ತುಸು ಏರಿಕೆಯಾದ ಚಿನ್ನದ ಬೆಲೆ, ಬುಧವಾರ ಚಿನ್ನ ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ; ಇಲ್ಲಿದೆ ವಿವರ
ಮಹಿಳೆಯರಿಗಾಗಿ ಮತ್ತೊಂದು ಯೋಜನೆ
ನಮ್ಮ ರಾಜ್ಯದಲ್ಲಿ ಈಗಾಗಲೇ ಶಕ್ತಿ ಯೋಜನೆ (Shakti Yojana), ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಜಾರಿಗೆ ತರಲಾಗಿದೆ. ಶಕ್ತಿ ಯೋಜನೆಯ ಮೂಲಕ ಎಲ್ಲಾ ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆ ನಡೆಸಿಕೊಂಡು ಹೋಗುತ್ತಿರುವ ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳು ₹2000 ರೂಪಾಯಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದಿಷ್ಟೇ ಅಲ್ಲದೇ ಇನ್ನು ಅನೇಕ ಯೋಜನೆಗಳನ್ನು ಮಹಿಳೆಯರಿಗಾಗಿ ತರಲಾಗುತ್ತಿದೆ.
ಮನೆ ಇಲ್ಲದ ಬಡವರಿಗೆ ಸ್ವಂತ ಮನೆ ಭಾಗ್ಯ! ವಸತಿ ಯೋಜನೆಗೆ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ
ಲಕ್ಪತಿ ದೀದಿ ಯೋಜನೆ
ಮಹಿಳೆಯರು ಆರ್ಥಿಕವಾಗಿ ಸ್ವಾತಂತ್ರ್ಯವಾಗಿರಲಿ ತಮ್ಮದೇ ಸ್ವಂತ ಕೆಲಸ ಅಥವಾ ಸ್ವಂತ ಉದ್ಯಮ (Own Business) ಶುರು ಮಾಡಲು ಮಹಿಳೆಯರಿಗೆ ಸಹಾಯ ಮಾಡುವುದಕ್ಕಾಗಿ ಲಕ್ಪತಿ ದೀದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಸಾಕಷ್ಟು ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, ಬ್ಯುಸಿನೆಸ್ ಮಾಡುವುದಕ್ಕೆ 1 ರಿಂದ 5 ಲಕ್ಷದವರೆಗೂ ಸಾಲ (Loan) ಕೊಡಲಾಗುತ್ತದೆ. ಹಾಗಿದ್ದಲ್ಲಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ..
ಸ್ಟೇಟ್ ಬ್ಯಾಂಕಿನಲ್ಲಿ ಫಿಕ್ಸೆಡ್ ಇಡುವ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಈ ಯೋಜನೆಯಲ್ಲಿ ನೀವು ಬ್ಯುಸಿನೆಸ್ ಶುರು ಮಾಡುವುದಕ್ಕೆ ಹಣ ಕೊಡುವುದು ಮಾತ್ರವಲ್ಲ, ನಿಮಗೆ ಯಾವ ಬ್ಯುಸಿನೆಸ್ ಮಾಡಬೇಕು ಏನು ಮಾಡಬೇಕು ಎಂದು ಗೊತ್ತಿಲ್ಲ ಎಂದರೆ, ಸರ್ಕಾರದಿಂದಲೇ ನಿಮಗೆ ಕೆಲ ದಿನಗಳ ಕಾಲ ತರಬೇತಿ ನೀಡಿ, ನಂತರ ಬ್ಯುಸಿನೆಸ್ ಶುರು ಮಾಡುವುದಕ್ಕೂ ನಿಮಗೆ ಸಹಾಯ ಮಾಡಲಾಗುತ್ತದೆ. ಇದರಿಂದ ನೀವು ಯಾರ ಮೇಲೂ ಅವಲಂಬಿಸಿರದೆ ನಿಮ್ಮಿಷ್ಟದ , ನಿಮ್ಮ ಕನಸಿನ ಜೀವನ ನಡೆಸಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
*ಮಹಿಳಾ ಅರ್ಜಿದಾರರ ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ಅಡ್ರೆಸ್ ಪ್ರೂಫ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಫೋನ್ ನಂಬರ್
ಈ ಯೋಜನೆಯನ್ನು ಮಹಿಳೆಯರಿಗೋಸ್ಕರ ಮಾತ್ರ ಜಾರಿಗೆ ತರಲಾಗಿದ್ದು, 18 ರಿಂದ 55 ವರ್ಷಗಳ ಒಳಗಿನ ಯಾವುದೇ ಮಹಿಳೆ ಲಕ್ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. 1 ರಿಂದ 5 ಲಕ್ಷಗಳ ವರೆಗು ನಿಮಗೆ ಸಬ್ಸಿಡಿ ಲೋನ್ (Subsidy Loan) ಸಿಗಲಿದ್ದು, ಸ್ವಂತ ಉದ್ಯಮ ಶುರು ಮಾಡಿ ಲಾಭ ಪಡೆಯಬಹುದು.
Women’s own business will get 5 lakh loan by this Scheme