Yamaha RX 100 Bike : ಹುಡುಗರಿಗೆ ಯಾವಾಗಲೂ ಬೈಕ್ ಗಳ ಮೇಲೆ ಹೆಚ್ಚು ಕ್ರೇಜ್ ಇರುತ್ತದೆ. ಅವರಿಗೆ ಇಷ್ಟ ಆಗುವ ಹಾಗೆ ಹೊಸ ಮಾಡೆಲ್ ಗಳಲ್ಲಿ ಅನೇಕ ಬೈಕ್ ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತದೆ.
ಆದರೆ ನಮ್ಮ ದೇಶದಲ್ಲಿ ಯಾವಾಗಲೂ ಎಲ್ಲಾ ಹುಡುಗರ ಫೇವರೆಟ್ ಬೈಕ್ ಆಗಿರುವುದು RX100 Bike ಎಂದರೆ ತಪ್ಪಲ್ಲ. ಈ ಬೈಕ್ ಬೇರೆಯದೇ ಹವಾ ಸೃಷ್ಟಿಸಿತ್ತು. RX100 ಬೈಕ್ ಉತ್ಪಾದನೆಯನ್ನು ಕಾರಣಾಂತರಗಳಿಂದ ಬೈಕ್ ಕಂಪನಿ ನಿಲ್ಲಿಸಿತ್ತು.
ನಿಮ್ಮ ಸ್ವಂತ ಬ್ಯುಸಿನೆಸ್ ಪ್ರಾರಂಭಕ್ಕೆ 10 ಲಕ್ಷ ರೂಪಾಯಿ ನೀಡುವ ಕೇಂದ್ರದ ಯೋಜನೆ! ಇಂದೇ ಅರ್ಜಿ ಹಾಕಿ
ಆದರೆ RX100 ಬೈಕ್ ಅನ್ನು ಜನರು ತುಂಬಾ ಇಷ್ಟಪಡುತ್ತಿದ್ದ ಕಾರಣ ಇದೀಗ ಯಮಹ ಸಂಸ್ಥೆಯು ಹೊಸ ಮಾದರಿಯಲ್ಲಿ RX ಬೈಕ್ ಅನ್ನು ಮತ್ತೆ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದೆ ಎನ್ನುವ ಹೊಸದೊಂದು ವಿಚಾರ ಈಗ ತಿಳಿದುಬಂದಿದೆ. ಇದರಿಂದ ಎಲ್ಲಾ RX ಅಭಿಮಾನಿಗಳಿಗೆ ಸಂತೋಷವಾಗಿದೆ. ಈ ವಿಚಾರದ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
ಯಮಹ ಸಂಸ್ಥೆ ಈಗ ಒಂದು ಹೊಸ ಬೈಕ್ ಅನ್ನು ಡಿಸೈನ್ ಮಾಡುತ್ತಿದ್ದು, ಈ ಬೈಕ್ ಗೆ RX ಎಂದು ಹೆಸರಿಡಲು ನಿರ್ಧಾರ ಮಾಡಿದೆ. ಈ ಸಂಸ್ಥೆ 1997ರಲ್ಲಿ RXZ ಬೈಕ್ ಅನ್ನು ಬಿಡುಗಡೆ ಮಾಡಿತ್ತು, ಇದೀಗ ಹೊಸ RX ಬೈಕ್ ನ ಹೊಸ ಮಾಡೆಲ್ ಅನ್ನು ಚಿಕ್ಕ ವೀಲ್ ಬೇಸ್ ಜೊತೆಗೆ ಪೂರ್ತಿಯಾಗಿ ಬೇರೆ ರೀತಿಯ ಚಾಸಿಸ್ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಮಾಡೆಲ್ 12bhp ಪವರ್ ಜಾಸ್ತಿ ಉತ್ಪಾದನೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಈ ಯಮಹ RX 100 ಬೈಕ್ ನಲ್ಲಿ ಟಿಯರ್ ಡ್ರಾಪ್ ಮಾದರಿಯ ಇಂಧನ ಟ್ಯಾಂಕ್, ಫ್ಲಾಟ್ ಟೈಪ್ ಸೀಟ್, ದೊಡ್ಡದಾದ ಹ್ಯಾಂಡಲ್ ಬಾರ್, ರೌಂಡ್ ಹೆಡ್ ಲ್ಯಾಮ್ಪ್, ಕ್ರೋಮ್ಡ್ ಫೆಂಡರ್, ಅಪ್ಲಿಫ್ಟ್ ಎಕ್ಸಾಸ್ಟ್ ಸಿಸ್ಟಮ್, ಕ್ಲಾಸಿಕ್-ಲುಕಿಂಗ್ ಟೈಲ್‌ಲ್ಯಾಂಪ್ ಮತ್ತು ಆಧುನಿಕ ಅರೆ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆಲ್ಲವೂ ಇರುತ್ತದೆ.
ಪ್ಯಾನ್ ಕಾರ್ಡ್ ಕುರಿತು ಧಿಡೀರ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ! ಇಂತಹವರಿಗೆ 1000 ರೂಪಾಯಿ ದಂಡ
ಈ ಹೊಸ ಬೈಕ್ ನಲ್ಲಿ 150cc 2 ಸ್ಟ್ರೋಕ್ ಇಂಜಿನ್ ಹೊಂದಿದೆ. ಈ ಇಂಜಿನ್ 11 bhp ಪವರ್, 10.45nm ಟಾರ್ಕ್ ಉತ್ಪಾದನೆ ಮಾಡುತ್ತದೆ.
RX ನ ಈ ಹೊಸ ಮಾಡೆಲ್ ಬೈಕ್ ಬಗ್ಗೆ ಇನ್ನೂ ಪೂರ್ತಿ ಮಾಹಿತಿ ತಿಳಿದುಬಂದಿಲ್ಲ. ಆದರೆ ಬೇರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ RX ಹೊಸ ಮಾಡೆಲ್ ಬೈಕ್ ನ ಬೆಲೆ 1.50 ಲಕ್ಷದವರೆಗು ಇರಬಹುದು ಎಂದು ಹೇಳಲಾಗುತ್ತಿದೆ. ಒಂದು ಲೀಟರ್ ಪೆಟ್ರೋಲ್ ಗೆ 45km ಮೈಲೇಜ್ ಕೊಡುತ್ತದೆ. ಕೆಲವೇ ಸಮಯದಲ್ಲಿ ಈ ಬೈಕ್ ಲಾಂಚ್ ಆಗುತ್ತದೆ ಎಂದು ಹೇಳಲಾಗುತ್ತಿದೆ.
Yamaha RX 100 Bike New Model Launching Soon
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.