ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲವಾಗಲು ಸರ್ಕಾರ ಹೊಸ ಹೊಸ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಲು ಹಲವು ಯೋಜನೆಗಳನ್ನು (government schemes) ಕೂಡ ಜಾರಿಗೆ ತರುತ್ತಿದೆ.
ಇನ್ನು ಈ ಎಲ್ಲಾ ಸಮುದಾಯದ ಜನರ ಉದ್ಧಾರಕ್ಕೂ ಶ್ರಮಿಸುತ್ತಿರುವ ಸರ್ಕಾರ ಇದೀಗ ಸ್ವ ಉದ್ಯೋಗ (self employment) ಮಾಡಲು ಬಯಸುವ ಯುವಕರಿಗೆ ಅನುಕೂಲವಾಗಲು ಸ್ವಯಂ ಉದ್ಯೋಗ ನೇರ ಸಾಲ (self employment direct loan scheme 2023) ಯೋಜನೆಯನ್ನು ಜಾರಿಗೆ ತಂದಿದೆ
ಹೊಸ ಪೋಸ್ಟ್ ಆಫೀಸ್ ಸ್ಕೀಮ್; 5 ಸಾವಿರಕ್ಕೆ ಪಡೆಯಬಹುದು 3 ಲಕ್ಷ ರೂಪಾಯಿ ರಿಟರ್ನ್ಸ್
ಸಾಲ ಸೌಲಭ್ಯ – Loan
ಅಗತ್ಯ ಇರುವ ಹಾಗೂ ಅರ್ಹ ಯುವಕರು ಈ ಯೋಜನೆಯ ಅಡಿಯಲ್ಲಿ ಸುಲಭವಾಗಿ ಸಾಲ ಸೌಲಭ್ಯ (Subsidy Loan) ಪಡೆದುಕೊಳ್ಳಬಹುದು.
ಸಾಂಪ್ರದಾಯಿಕ ವೃತ್ತಿಗಳನ್ನು ಹೊರತುಪಡಿಸಿ ಇನ್ನಿತರ ಕೆಲವು ಸಣ್ಣಪುಟ್ಟ ಉದ್ಯಮ ಮಾಡಲು ಬಯಸುವವರು, ಮೀನು ಮಾಂಸ ಮಾರಾಟ, ಕುರಿ ಹಸು ಹಂದಿ ಮೊದಲಾದವುಗಳ ಸಾಕಾಣಿಕೆ ಹೀಗೆ ಸ್ವಂತ ಉದ್ಯಮ (Own Business) ಆರಂಭಿಸುವವರಿಗೆ ಸಹಾಯಧನವನ್ನು (subsidy Business Loan) ಸರ್ಕಾರ ನೀಡಲಿದೆ.
ಯಾರು ಅರ್ಜಿ ಸಲ್ಲಿಸಬಹುದು?
21 ರಿಂದ 50 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಯ ಅಡಿಯಲ್ಲಿ ನಿಗಮದಿಂದ ಒಂದು ಲಕ್ಷ ರೂಪಾಯಿ ಪಡೆದುಕೊಳ್ಳಬಹುದು ಇದರಲ್ಲಿ 50,000 ಸಹಾಯಧನ ಹಾಗೂ ಇನ್ನು ಐವತ್ತು ಸಾವಿರ ರೂಪಾಯಿಗಳಿಗೆ 4% ಬಡ್ಡಿ ದರದಲ್ಲಿ 30 ಕಂತುಗಳಲ್ಲಿ ಸಾಲ ಹಿಂತಿರುಗಿಸಲು ಅವಕಾಶ ಮಾಡಿಕೊಡಲಾಗಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕರಿಗೆ ಅನುಕೂಲವಾಗಲು ಈ ಯೋಜನೆ ಜಾರಿಗೆ ತರಲಾಗಿದ್ದು ಅಂಥವರು ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿಯರಿಗಾಗಿ ಸರ್ಕಾರದಿಂದ ಬಂಪರ್ ಗಿಫ್ಟ್; ಹೊಸ ಯೋಜನೆಗೆ ಮುಗಿಬಿದ್ದ ಮಹಿಳೆಯರು
ಅರ್ಜಿ ಸಲ್ಲಿಸಲು ನೀವು ಈ ಸಮುದಾಯಗಳಿಗೆ ಸೇರಿದವರಾಗಿರಬೇಕು!
ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ.
18 ರಿಂದ 55 ವರ್ಷ ವಯಸ್ಸಿನವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅವಕಾಶ. ಸರಕು ವಾಹನ ಅಥವಾ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಗೆ ಶೇಕಡಾ 75ರಷ್ಟು ವಾಹನದ ಖರೀದಿಯ ಹಣ ಅಥವಾ ಗರಿಷ್ಠ ನಾಲ್ಕು ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ನೀಡಲಾಗುವುದು.
60 ವರ್ಷ ಮೇಲ್ಪಟ್ಟ ಜನರಿಗೆ ಕೇಂದ್ರದಿಂದ ಆನ್ಲೈನ್ ಮೂಲಕವೇ ಹೊಸ ಸೇವೆ ಆರಂಭ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, ಬ್ಯಾಂಕು ಖಾತೆಯ ವಿವರ, ವಾಹನ ಖರೀದಿಯ ಅಂದಾಜು ಪಟ್ಟಿ ಮೊದಲಾದ ದಾಖಲೆಗಳನ್ನು ಕೊಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ!
ಯೋಜನೆಯಡಿಯಲ್ಲಿ ಲಾಭ ಪಡೆದುಕೊಳ್ಳಲು ಆನ್ಲೈನ್ (online application) ಮೂಲಕವೇ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ಸೈಟ್ (seva Sindhu website) ಮೂಲಕ ಅರ್ಜಿ ಹಾಕಬಹುದಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 29, 2023
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ; https://sevasindhu.karnataka.gov.in/Sevasindhu/Kannada?ReturnUrl=%2F
You can get 1 lakh money to start your own business, Apply for a government scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.