ಗೃಹಲಕ್ಷ್ಮಿಯರಿಗಾಗಿ ಸರ್ಕಾರದಿಂದ ಬಂಪರ್ ಗಿಫ್ಟ್; ಹೊಸ ಯೋಜನೆಗೆ ಮುಗಿಬಿದ್ದ ಮಹಿಳೆಯರು
ಮಹಿಳಾ ಸಬಲೀಕರಣ (women empowerment) ಎನ್ನುವುದು ಪ್ರತಿಯೊಂದು ರಾಷ್ಟ್ರದಲ್ಲಿಯೂ ಬಹಳ ಮುಖ್ಯವಾಗಿರುವ ವಿಚಾರ, ಕೇವಲ ಪುರುಷರು ಮಾತ್ರ ದುಡಿದು ಸಂಪಾದನೆ ಮಾಡುವುದಲ್ಲ ಮಹಿಳೆಯರು ಕೂಡ ತಮ್ಮದೇ ಆಗಿರುವ ಉದ್ಯೋಗ (job) ಆರಂಭಿಸಿ ತಮ್ಮ ಆರ್ಥಿಕ ಸ್ವಾವಲಂಬನ (financial independence) ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಪ್ರಮುಖ ಉದ್ದೇಶವಾಗಿರುತ್ತದೆ
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಶಕ್ತಿ ಯೋಜನೆ (Shakti Yojana) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಜಾರಿಗೆ ತಂದಿದ್ದು ಬಹುತೇಕ ಯಶಸ್ವಿಯಾಗಿವೆ.
ಇದೀಗ ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ಯೋಜನೆಯನ್ನು ಜಾರಿಗೆ ತಂದಿದೆ, ಇದರಿಂದ ಮಹಿಳೆಯರು ತಮ್ಮದೇ ಆಗಿರುವ ಉದ್ಯೋಗ ಆರಂಭಿಸಲು ಸರ್ಕಾರ ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಸಾಕಷ್ಟು ಜನ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದಕ್ಕಿಂತ ತಮ್ಮದೇ ಆಗಿರುವ ರೀತಿಯಲ್ಲಿ ಹಣ ಸಂಪಾದನೆ ಮಾಡಲು ಬಯಸುತ್ತಾರೆ, ಆದರೆ ಅದೆಷ್ಟೋ ಜನರಿಗೆ ಎಲ್ಲಾ ವಿಷಯದಲ್ಲಿಯೂ ಅರಿವು ಇರುವುದಿಲ್ಲ.. ಇದಕ್ಕಾಗಿ ಕೇಂದ್ರ ಸರ್ಕಾರ (Central government) ಪ್ರಮುಖ ಯೋಜನೆ ಒಂದನ್ನು ಜಾರಿಗೆ ತಂದಿದೆ.
ಸ್ವಂತ ವ್ಯಾಪಾರ ಮಾಡಿಕೊಳ್ಳಲು ಸರ್ಕಾರವೇ ನೀಡುತ್ತೆ ಸಾಲ ಸೌಲಭ್ಯ; ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ
ಲಕ್ಪತಿ ದೀದಿ ಯೋಜನೆ! (Lakhpati didi Yojana)
ದೇಶಾದ್ಯಂತ ಪ್ರತಿ ಹಳ್ಳಿ ಹಾಗೂ ಸಣ್ಣ ಪಟ್ಟಣ ಪ್ರದೇಶದಲ್ಲಿ ವಾಸಿಸುವ ಹೆಣ್ಣುಮಕ್ಕಳು ಸ್ವಾವಲಂಬಿ ಜೀವನ (independent life) ನಡೆಸಲು ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ
ಇದರಿಂದ ಸುಮಾರು ಹೆಣ್ಣು ಮಕ್ಕಳಿಗೆ ಪ್ರಯೋಜನ ಸಿಗಲಿದೆ. ಪ್ರತಿ ಹಳ್ಳಿ ಹಾಗೂ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಮಹಿಳೆಯರಿಗೆ ತರಬೇತಿ (training) ನೀಡುವುದರ ಮೂಲಕ ಅವರ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು ಲಕ್ಪತಿ ದೀದಿ ಯೋಜನೆಯ ಉದ್ದೇಶ.
ಲತ್ಪತಿ ದೀದಿ ಯೋಚನೆ ಅಡಿಯಲ್ಲಿ ಎರಡು ದಶಲಕ್ಷ ಮಹಿಳೆಯರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ, ಯಾರು ಉದ್ಯೋಗ ಮಾಡಲು ಬಯಸುತ್ತಾರೋ ಅಂತವರಿಗೆ ಕೌಶಲ್ಯ ತರಬೇತಿ ನೀಡುವ ಸಲುವಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ.
ಪ್ಲಂಬಿಂಗ್, ಎಲ್ ಇಡಿ ಬಲ್ಪ್ ತಯಾರಿಕೆ, ಡ್ರೋನ್ ಗಳ ನಿರ್ವಹಣೆ ಮೊದಲದ ಕೌಶಲ್ಯ ತರಬೇತಿಗಳನ್ನು ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ಉಚಿತವಾಗಿರುವ ತರಬೇತಿ ಆಗಿರುತ್ತದೆ. ಪ್ರತಿ ರಾಜ್ಯದಲ್ಲಿ ಎರಡು ಕೋಟಿ ಅಷ್ಟು ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.
ಈ ಬ್ಯಾಂಕ್‌ನಲ್ಲಿ ಖಾತೆ ಇದ್ರೆ ಪ್ರತಿ ತಿಂಗಳು ಸಿಗುತ್ತೆ 1 ಲಕ್ಷ ಪಿಂಚಣಿ; ನಿಮ್ಮದೂ ಸಹ ಅಕೌಂಟ್ ಇದಿಯಾ?
ಮಹಿಳೆಯರಿಗೆ ಅಗತ್ಯ ಇರುವ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಿ ಅವರು ಸ್ವಉದ್ಯೋಗ ಆರಂಭಿಸಿ ಆರ್ಥಿಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದು ಈ ಯೋಜನೆಯ ಉದ್ದೇಶ.
ಹಾಗಾಗಿ ಯಾರಿಗೆ ಕೌಶಲ್ಯ ತರಬೇತಿಯ ಅಗತ್ಯ ಇರುತ್ತದೆಯೋ ಅಂತವರು ಕೇಂದ್ರ ಸರ್ಕಾರದ ಲಕ್ಪತಿ ದೀದಿ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು. ಸಣ್ಣ ವ್ಯಾಪಾರ ಆರಂಭಿಸಲು ಮಹಿಳೆಯರು ತಕ್ಷಣವೇ ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
Bumper Gift from Govt for Women, A new Scheme for Start Own Business