ಸ್ವಂತ ವ್ಯಾಪಾರ ಮಾಡಿಕೊಳ್ಳಲು ಸರ್ಕಾರವೇ ನೀಡುತ್ತೆ ಸಾಲ ಸೌಲಭ್ಯ; ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಒಂದು ಲಕ್ಷ ಸಾಲ ತೆಗೆದುಕೊಂಡರೆ ಐವತ್ತು ಸಾವಿರ ರೂಪಾಯಿಗಳನ್ನು ಸಹಾಯಧನವಾಗಿ ಪಡೆಯುತ್ತೀರಿ ಹಾಗೂ ಇನ್ನೂ ಐವತ್ತು ಸಾವಿರ ರೂಪಾಯಿಗಳಿಗೆ ಕೇವಲ 4%ಬಡ್ಡಿಯಲ್ಲಿ ಸಾಲ ಮರುಪಾವತಿ (Loan Re-Payment) ಮಾಡಿದರೆ ಆಯ್ತು.

ಕಳೆದ ಬಾರಿ ವಿಧಾನಸಭಾ ಎಲೆಕ್ಷನ್ (vidhansabha election) ನಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ (Congress government) ಮುಂಬರುವ ಚುನಾವಣೆಗೂ ಕೂಡ ತಯಾರಿ ನಡೆಸುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಒಂದರ ಮೇಲೆ ಒಂದರಂತೆ ಹಲವು ಸೌಲಭ್ಯಗಳನ್ನು, ಉಪಯುಕ್ತ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗ ಸರ್ಕಾರ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗುವಂತಹ ಸೌಲಭ್ಯವನ್ನು ನೀಡಲು ಮುಂದಾಗಿದೆ

ಇದರ ಪ್ರಯೋಜನ ಪಡೆದುಕೊಳ್ಳಲು ನೀವು ಯೋಜನೆಯ ಬಗ್ಗೆ ಮಾಹಿತಿ ಹೊಂದಿರಬೇಕು. ಸರ್ಕಾರ ಘೋಷಿಸಿರುವ ಹೊಸ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇದೆ ಮುಂದೆ ಓದಿ.

ಸ್ವಂತ ವ್ಯಾಪಾರ ಮಾಡಿಕೊಳ್ಳಲು ಸರ್ಕಾರವೇ ನೀಡುತ್ತೆ ಸಾಲ ಸೌಲಭ್ಯ; ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ - Kannada News

ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಖಾತೆಗೆ ಹಣ ಬಂದಿದ್ಯೋ ಇಲ್ವೋ ಚೆಕ್ ಮಾಡುವುದು ಹೇಗೆ?

ಸ್ವಉದ್ಯೋಗಕ್ಕೆ ಸಾಲ ಸೌಲಭ್ಯ (Business Loan)

ತಮ್ಮದೇ ಆಗಿರುವ ಸ್ವಂತ ಉದ್ಯೋಗ (Own Business) ಮಾಡಬೇಕು ಎನ್ನುವ ಆಸೆ ಹಲವರಲ್ಲಿ ಇರುತ್ತೆ, ಇದು ಕೇವಲ ಪುರುಷರಲ್ಲಿ ಮಾತ್ರವಲ್ಲ ಸಾಕಷ್ಟು ಮಹಿಳೆಯರು ಕೂಡ ತಮ್ಮ ಸ್ವಂತ ದುಡಿಮೆ ಮಾಡಲು ಬಯಸುತ್ತಾರೆ

ಆರ್ಥಿಕ ಸ್ವಾವಲಂಬನೆಯನ್ನು (financial stability) ಪ್ರೋತ್ಸಾಹಿಸಲು ಸರ್ಕಾರದಿಂದ ಅತಿ ಕಡಿಮೆ ಬಡ್ಡಿ (Low interest) ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಒಂದು ಲಕ್ಷಗಳವರೆಗೆ ಈ ಯೋಜನೆಯಡಿಯಲ್ಲಿ ಸಾಲ ಪಡೆದುಕೊಳ್ಳಬಹುದಾಗಿದ್ದು ಅದರಲ್ಲಿ ಅರ್ಧದಷ್ಟು ಹಣಕ್ಕೆ ಸರ್ಕಾರ ಸಬ್ಸಿಡಿ (subsidy) ನೀಡುತ್ತದೆ.

ಅಂದರೆ ನೀವು ಒಂದು ಲಕ್ಷ ಸಾಲ ತೆಗೆದುಕೊಂಡರೆ ಐವತ್ತು ಸಾವಿರ ರೂಪಾಯಿಗಳನ್ನು ಸಹಾಯಧನವಾಗಿ ಪಡೆಯುತ್ತೀರಿ ಹಾಗೂ ಇನ್ನೂ ಐವತ್ತು ಸಾವಿರ ರೂಪಾಯಿಗಳಿಗೆ ಕೇವಲ 4%ಬಡ್ಡಿಯಲ್ಲಿ ಸಾಲ ಮರುಪಾವತಿ (Loan Re-Payment) ಮಾಡಿದರೆ ಆಯ್ತು.

ರೇಷನ್ ಕಾರ್ಡ್ ಇದ್ರೂ ರೇಷನ್ ಪಡೆಯೋಕೆ ಹೊಸ ರೂಲ್ಸ್! ರಾತ್ರೋರಾತ್ರಿ ಹೊಸ ನಿಯಮ

Own Business Loanಯಾರಿಗೆ ಸಿಗಲಿದೆ ಸಾಲ!

ಯಾರು ಸ್ವತ: ಟೈಲರಿಂಗ್ (tailoring) , ಗುಡಿ ಕೈಗಾರಿಕೆ, ಕುರಿ ಮೇಕೆ ಸಾಕಾಣಿಕೆ, ಹೈನುಗಾರಿಕೆ ಮೊದಲದ ಸಣ್ಣ ಪುಟ್ಟ ಉದ್ಯೋಗ ಮಾಡುತ್ತಾರೋ ಅಂಥವರಿಗೆ ಈ ಸಾಲ ಸೌಲಭ್ಯ ದೊರೆಯಲಿದೆ. ಈ ಸಾಲ ಸೌಲಭ್ಯ ಪಡೆದುಕೊಳ್ಳಲು ಆಸಕ್ತಿ ಹೊಂದಿರುವ ಯುವಕ ಯುವತಿಯರು ಬೆಂಗಳೂರು ಒನ್, ಗ್ರಾಮ ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು. 21 ವರ್ಷ ವಯಸ್ಸಿನಿಂದ 50 ವರ್ಷಗಳ ವಯಸ್ಸಿನವರು ಈ ಸಾಲ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ.

ಬೇಕಾಗಿರುವ ದಾಖಲೆಗಳು!

ಆದಾಯ ಪ್ರಮಾಣ ಪತ್ರ (income certificate)
ಜಾತಿ ಪ್ರಮಾಣ ಪತ್ರ (caste certificate)
ಆರಂಭಿಸುತ್ತಿರುವ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ
ಆಧಾರ್ ಕಾರ್ಡ್ (Aadhaar card)
ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ

ಶರತ್ತುಗಳು ಅನ್ವಯ;

ಸರ್ಕಾರದಿಂದ ಸಿಗುತ್ತಿರುವ ಅತಿ ಕಡಿಮೆ ಬಡ್ಡಿ ದರದ ಈ ಸಾಲ ಸೌಲಭ್ಯವನ್ನು (Loan Scheme) ಪಡೆದುಕೊಳ್ಳಲು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಮಾತ್ರ ಅರ್ಹರು. ಈ ಯೋಜನೆಗೆ ಅರ್ಜಿ ಹಾಕುವ ಅರ್ಜಿದಾರರ ಕುಟುಂಬದ ಒಟ್ಟು ವಾರ್ಷಿಕ ಆದಾಯ 1.50 ಲಕ್ಷ ಮೀರಬಾರದು. ಯಾವುದೇ ಸರ್ಕಾರಿ ನೌಕರಿಯಲ್ಲಿ ಇಲ್ಲದ ವ್ಯಕ್ತಿಗೆ ಮಾತ್ರ ಈ ಸಾಲ ಸೌಲಭ್ಯ ದೊರೆಯುತ್ತದೆ.

ಅತಿ ಕಡಿಮೆ ಬಡ್ಡಿದರಕ್ಕೆ ಸಹಾಯಧನದ ಜೊತೆಗೆ ಸಾಲ ನೀಡುವ ಮೂಲಕ ಮಹಿಳೆಯರ ಮತ್ತು ಯುವಕರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಮುಂದಾಗಿದೆ. ಹಾಗಾಗಿ ತಮ್ಮ ಸ್ವಂತ ಉದ್ಯೋಗವನ್ನು (Own Business) ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಕನಸು ಕಾಣುವವರಿಗೆ ಈ ಸಾಲ ಸೌಲಭ್ಯ ಬಹಳ ಪ್ರಯೋಜನಕಾರಿ ಆಗಲಿದೆ, ಹಾಗಾಗಿ ಅಗತ್ಯ ಇರುವವರು ಕೂಡಲೇ ಅಪ್ಲೈ ಮಾಡಿ.

Follow us On

FaceBook Google News