ರೇಷನ್ ಕಾರ್ಡ್ ಇದ್ರೂ ರೇಷನ್ ಪಡೆಯೋಕೆ ಹೊಸ ರೂಲ್ಸ್! ರಾತ್ರೋರಾತ್ರಿ ಹೊಸ ನಿಯಮ

ಯಾವ ಕುಟುಂಬ ಬಡತನ ರೇಖೆಗಿಂತ (below poverty line) ಕೆಳಗಿರುತ್ತದೆಯೋ ಯಾವ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ (financial problem) ಇರುತ್ತದೆಯೋ ಹಾಗೂ ಯಾವ ಕುಟುಂಬಕ್ಕೆ ಹಸಿವನ್ನು ನೀಗಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲವೋ ಅಂತವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ರೇಷನ್ ಕಾರ್ಡ್ (Ration Card) ಎನ್ನುವ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರ ಹುಟ್ಟು ಹಾಕಿತ್ತು.
ಈ ಪರಿಕಲ್ಪನೆ (concept) ಅಡಿಯಲ್ಲಿ ಕೋಟ್ಯಾಂತರ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ( BPL card) ಹಾಗೂ ಅಂತ್ಯೋದಯ ಕಾರ್ಡ್ ಅನ್ನು ವಿತರಣೆ ಮಾಡಲಾಗಿದೆ. ಯಾರು ಬಳಿ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ (antyodaya card) ಇದೆಯೋ ಅಂತವರು ಸರ್ಕಾರದಿಂದ ಸಿಗುವ ಉಚಿತ ಪಡಿತರ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಕರೋನ (covid-19) ಸಂಕಷ್ಟದ ಅವಧಿಯಲ್ಲಿ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಉಚಿತ ಅಕ್ಕಿಯನ್ನು (free rice) ನೀಡುತ್ತಿದೆ, ಇದರ ಜೊತೆಗೆ ರಾಜ್ಯ ಸರ್ಕಾರವು ಕೂಡ 5 ಕೆಜಿ ಉಚಿತ ಅಕ್ಕಿ ನೀಡುವ ಭರವಸೆ ನೀಡಿದ್ದು ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗದೆ ಇರುವ ಕಾರಣಕ್ಕೆ, ನಮಗೆ ಯೋಜನೆ ಅಡಿಯಲ್ಲಿ ಪ್ರತಿ ಫಲಾನುಭವಿ ಕುಟುಂಬಕ್ಕೆ ಅಕ್ಕಿ ಬದಲು ಹಣ ವರ್ಗಾವಣೆ (Money Transfer) ಮಾಡಲಾಗುತ್ತದೆ.
ಗೃಹಜ್ಯೋತಿ ಉಚಿತ ವಿದ್ಯುತ್ ಬಳಸುತ್ತಿದ್ದವರಿಗೆ ಧಿಡೀರ್ ಬದಲಾವಣೆ, ಹೊಸ ನಿಯಮ ಜಾರಿ!
ಇಂಥವರಿಗೆ ಇನ್ನು ಮುಂದೆ ಸಿಗುವುದಿಲ್ಲ ಪಡಿತರ ವಸ್ತುಗಳು!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದಾಗಿ (guarantee schemes) ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. ರೇಷನ್ ಕಾರ್ಡ್ ತಿದ್ದುಪಡಿಗೂ ಅವಕಾಶ ಮಾಡಿಕೊಟ್ಟಿದ್ದರಿಂದ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಪಡೆದುಕೊಳ್ಳಲು ಹೆಸರಿನ ತಿದ್ದುಪಡಿ ಕೂಡ ನಡೆದಿವೆ.
ರೇಷನ್ ಕಾರ್ಡ್ ವಿಚಾರದಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಿವೆ, ಅನರ್ಹರು ಕೂಡ ರೇಷನ್ ಕಾರ್ಡ್ ಹೊಂದಿದ್ದು, ಉಚಿತ ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ
ಜೊತೆಗೆ ಉಚಿತವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಅಗತ್ಯ ಇರುವವರೆಗಿಂತಲೂ ಅಗತ್ಯ ಇಲ್ಲದೆ ಇರುವವರ ಕೈ ಸೇರುತ್ತಿರುವುದೇ ಹೆಚ್ಚು. ಇದನ್ನು ಗಮನಿಸಿರುವ ಸರ್ಕಾರ, ರೇಷನ್ ಕಾರ್ಡ್ ವಿತರಣೆಯ ವಿಚಾರದಲ್ಲಿ ಕಟ್ಟು ನೆಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡವರಿಗೆ ಸಂಕಷ್ಟ; ಇನ್ಮುಂದೆ ಇಲ್ಲ ಈ ಸೌಲಭ್ಯ
ಯಾರಿಗೆ ಸಿಗುವುದಿಲ್ಲ ಪಡಿತರ?

ಅದೇ ರೀತಿ ಸರ್ಕಾರಿ ನೌಕರಿಯಲ್ಲಿ (government job) ಇದ್ದರೆ ಅಥವಾ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ಅಂತವರು ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಹೊಂದಿರಬಾರದು. ಯಾರ ಮನೆಯಲ್ಲಿ ಬಿಳಿಯ ಬೋರ್ಡ್ ನಾಲ್ಕು ಚಕ್ರದ ಕಾರು ಇರುತ್ತದೆಯೋ ಅಂತವರು ಇದರ ಪ್ರಯೋಜನ ಪಡೆದುಕೊಳ್ಳುವಂತಿಲ್ಲ.
ಇಂದು ರಾಜ್ಯದಲ್ಲಿ ಅದೆಷ್ಟೋ ಕುಟುಂಬಗಳು ಅರ್ಹತೆ ಇಲ್ಲದೆ ಇದ್ದರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ, ಜೊತೆಗೆ ಉಚಿತವಾಗಿ ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿರುವ ರಾಜ್ಯ ಸರ್ಕಾರ ಇಂಥವರ ರೇಷನ್ ಕಾರ್ಡ್ ರದ್ದುಪಡಿ ಮಾಡುವಂತೆ ಆಹಾರ ಇಲಾಖೆಗೆ ತಿಳಿಸಿದೆ.
ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣದ ಸುಳಿವೇ ಇರದವರಿಗೆ ಕೊನೆಗೂ ಸಿಹಿ ಸುದ್ದಿ!
ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿಯ (ration card correction) ಸಂದರ್ಭದಲ್ಲಿ ಹಾಗೂ ಪಡಿತರ ವಸ್ತುಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ವಿತರಕರು ರೇಷನ್ ಕಾರ್ಡ್ ಅನ್ನು ಸರಿಯಾಗಿ ಪರಿಶೀಲನೆ ಮಾಡಬೇಕು. ಒಂದು ವೇಳೆ ಎಲ್ಲಾ ಸೌಲಭ್ಯಗಳು ಇದ್ದು ಬಿಪಿಎಲ್ ಕಾರ್ಡ್ ಬಳಸುತ್ತಿದ್ದರೆ ಅಂತವರ ಕಾರ್ಡ್ ಅನ್ನು ತಕ್ಷಣವೇ ರದ್ದುಪಡಿಸಬೇಕು.
ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಹೊಂದಿದ್ದು ಕಳೆದ ಆರು ತಿಂಗಳಿನಿಂದ ಯಾರು ರೇಷನ್ ಪಡೆದುಕೊಂಡಿಲ್ಲವೋ ಅಂತವರ ಕಾರ್ಡ್ ಕೂಡ ರದ್ದಾಗಲಿದೆ. ಈಗಾಗಲೇ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಸರ್ಕಾರದ ಬಳಿ 2 ಲಕ್ಷಕ್ಕೂ ಅಧಿಕ ಅರ್ಜಿಗಳು ಸಂದಾಯವಾಗಿವೆ
ಈ ಅರ್ಜಿಗಳನ್ನು ಪರಿಶೀಲನೆ ಮಾಡಿ ಸದ್ಯದಲ್ಲಿಯೇ ಅರ್ಹರಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಆದರೆ ಈಗ ಹೊಸದಾಗಿ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುತ್ತಿಲ್ಲ. ಸರ್ಕಾರದ ಬಳಿ ಸಂದಾಯವಾಗಿರುವ ಅರ್ಜಿಗಳ ಪರಿಶೀಲನೆ ನಡೆಸಿ ಅವುಗಳನ್ನು ಜನರಿಗೆ ನೀಡಿದ ಬಳಿಕ ಅಷ್ಟೇ, ಹೊಸ ಅರ್ಜಿಯನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
New rules to get ration even with a BPL ration card



