ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡವರಿಗೆ ಸಂಕಷ್ಟ; ಇನ್ಮುಂದೆ ಇಲ್ಲ ಈ ಸೌಲಭ್ಯ
ರೇಷನ್ ಕಾರ್ಡ್ ತಿದ್ದುಪಡಿ ( ration card correction) ವಿಚಾರದಲ್ಲಿ ಒಂದಲ್ಲ ಒಂದು ರೀತಿಯ ಗೊಂದಲ ನಿರ್ಮಾಣವಾಗುತ್ತಿದೆ, ಸರ್ಕಾರದ ಸೌಲಭ್ಯವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರ (State government) ಜಾರಿಗೆ ತಂದಿರುವ ಯೋಜನೆಗಳು ಜನರಿಗೆ ಹೆಚ್ಚು ಉಪಯುಕ್ತಕಾರಿಯಾಗಿದ್ದರು ಕೂಡ ಕೆಲವರಿಗೆ ಸಮಸ್ಯೆ ಎದುರಾಗಿದೆ. ಮುಖ್ಯವಾಗಿ ರೇಷನ್ ಕಾರ್ಡ್ (Ration Card) ವಿಚಾರದಲ್ಲಿ ಜನ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎನ್ನಬಹುದು.
ರೇಷನ್ ಕಾರ್ಡ್ ತಿದ್ದುಪಡಿ ( ration card correction) ವಿಚಾರದಲ್ಲಿ ಒಂದಲ್ಲ ಒಂದು ರೀತಿಯ ಗೊಂದಲ ನಿರ್ಮಾಣವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನುಭವಿಗಳು ಕಾರ್ಡ್ ತಿದ್ದುಪಡಿ ಮಾಡಲು ಹೋಗಿ, ಸರ್ಕಾರದ ಸೌಲಭ್ಯವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣದ ಸುಳಿವೇ ಇರದವರಿಗೆ ಕೊನೆಗೂ ಸಿಹಿ ಸುದ್ದಿ!
ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಸಮಸ್ಯೆ!
ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಸಾಕಷ್ಟು ಸರ್ಕಾರಿ ಯೋಜನೆಗಳ ಪ್ರಯೋಜನ ಲಭಿಸುತ್ತದೆ, ಅದ್ರಲ್ಲೂ ಮುಖ್ಯವಾಗಿ ಪಡಿತರ ವಸ್ತುಗಳನ್ನು ಉಚಿತವಾಗಿ ಪಡೆಯಬಹುದು.
ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಎರಡನ್ನು ಪಡೆದುಕೊಳ್ಳಲು ಸಾಧ್ಯವಿದೆ
ಆದರೆ ಇದಕ್ಕೆ ಪ್ರಮುಖವಾಗಿ ರೇಷನ್ ಕಾರ್ಡ್ ನಲ್ಲಿ ಕೆಲವು ತಿದ್ದುಪಡಿಗಳು ಆಗುವ ಅಗತ್ಯ ಇದ್ದು, ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ಅವಕಾಶ ಮಾಡಿಕೊಟ್ಟಿತ್ತು.
ತಿದ್ದುಪಡಿಯಲ್ಲಿ ಆಗುತ್ತಿದೆ ವಂಚನೆ!
ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವವರು ಕೂಡ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ವಾಸಿಸುವ ಅತ್ತೆ ಸೊಸೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುವ ಸಲುವಾಗಿ ರೇಷನ್ ಕಾರ್ಡ್ ಡಿವೈಡ್ (divide) ಮಾಡಲು ಪ್ರಯತ್ನಿಸುತ್ತಿದ್ದಾರೆ
ಅಂದರೆ ಒಂದೇ ಮನೆಯಲ್ಲಿ ಎರಡು ರೇಷನ್ ಕಾರ್ಡ್ ಪಡೆದುಕೊಳ್ಳಲು ಬಯಸಿದ್ದು ರೇಷನ್ ಕಾರ್ಡ್ ನಲ್ಲಿ ಅತ್ತೆ ಹಾಗೂ ಸೊಸೆಯ ಹೆಸರು ಇದ್ದರೆ ಸೊಸೆಯ ಹೆಸರನ್ನು ಹಳೆಯ ರೇಷನ್ ಕಾರ್ಡ್ ನಿಂದ ತೆಗೆದುಹಾಕಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ಅಷ್ಟೇ ಅಲ್ಲದೆ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಬದಲಿಗೆ ಸಿಗುತ್ತಿರುವ ಹಣವನ್ನು ಇನ್ನೂ ಹೆಚ್ಚಾಗಿ ಪಡೆದುಕೊಳ್ಳಲು ತಮ್ಮ ಕುಟುಂಬದಲ್ಲಿ ವಾಸಿಸದೆ ಇರುವವರ ಹೆಸರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಸೇರಿಸಲಾಗುತ್ತಿದೆ. ಈ ವಂಚನೆ ಪ್ರಕರಣಗಳು ಆಹಾರ ಇಲಾಖೆಯ ಗಮನಕ್ಕೆ ಬಂದಿದ್ದು ಈ ಬಗ್ಗೆ ವಿಶೇಷವಾದ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬೆಳ್ಳಂಬೆಳಿಗ್ಗೆ ಅನ್ನದಾತ ರೈತರಿಗೆ ಗುಡ್ ನ್ಯೂಸ್; ಸಿಗಲಿದೆ ಉಚಿತ ವಿದ್ಯುತ್! ಮಹತ್ವದ ನಿರ್ಧಾರ
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ!
ಯಾರು ಅನಗತ್ಯವಾಗಿ ರೇಷನ್ ಕಾರ್ಡ್ ಬದಲಾವಣೆ ಮಾಡಿಕೊಳ್ಳಲು ಬಯಸುತ್ತಾರೋ, ಕುಟುಂಬದ ಸದಸ್ಯರಲ್ಲದೆ ಇರುವವರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಸೇರಿಸಲು ಬಯಸುತ್ತಾರೋ ಅಂಥವರ ರೇಷನ್ ಕಾರ್ಡ್ ಅನ್ನು ಶಾಶ್ವತವಾಗಿ ರದ್ದು ಪಡಿಸಲು (ration card cancellation) ಆಹಾರ ಇಲಾಖೆ ನಿರ್ಧರಿಸಿದೆ.
ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಜನರು ಬಿಪಿಎಲ್ ಕಾರ್ಡ್ ಹೊಂದಿದ್ದು ಪಡಿತರ ಪಡೆದುಕೊಳ್ಳುತ್ತಿಲ್ಲ ಅಂತವರ ಕಾರ್ಡ್ ಅನ್ನು ಕೂಡ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟಿನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಹೋಗಿ ಲಕ್ಷಾಂತರ ಜನ ತಮ್ಮ ಬಳಿ ಇರುವ ರೇಷನ್ ಕಾರ್ಡ್ ಕಳೆದುಕೊಳ್ಳುವಂತಾಗಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 3ನೇ ಕಂತಿನ ಹಣ ಜಮೆ ಆಗಬೇಕಾದರೆ ಈ ಕೆಲಸ ಕಡ್ಡಾಯ, ಹೊಸ ಬದಲಾವಣೆ
ಹೊಸ ರೇಷನ್ ಕಾರ್ಡ್ ಇಲ್ಲ ಈಗಿರುವ ರೇಷನ್ ಕಾರ್ಡ್ ಮತ್ತೆ ಸಿಗುವುದಿಲ್ಲ!
ಈಗಾಗಲೇ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಹಾಕಿರುವವರು ಲಕ್ಷಾಂತರ ಮಂದಿ. ಅರ್ಚಿ ಸಲ್ಲಿಕೆಯನ್ನು ಪರಿಶೀಲಿಸಿ ಫಲಾನುಭವಿಗಳಿಗೆ ಸದ್ಯದಲ್ಲಿ ಬಿಪಿಎಲ್ ಕಾರ್ಡ್ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಆದರೆ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಸದ್ಯಕ್ಕೆ ಅವಕಾಶವಿಲ್ಲ ಹಾಗಾಗಿ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿ ಹೆಸರು ಬೇರ್ಪಡಿಸಿಕೊಂಡು ಬೇರೆ ಬೇರೆ ಪಡಿತರ ಚೀಟಿ ಪಡೆದುಕೊಳ್ಳಬೇಕು ಎಂದು ಬಯಸುವವರಿಗೆ ಇದು ನಿರಾಸೆ ಮೂಡಿಸಿದೆ.
ಇನ್ನು ಯಾರು ಸರ್ಕಾರಕ್ಕೆ ಮೋಸ ಮಾಡಿ ಬಿಪಿಎಲ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಬಯಸುತ್ತಾರೋ ಅಂತವರಿಗೆ ಸರಕಾರದ ಯಾವುದೇ ಯೋಜನೆಯ ಪ್ರಯೋಜನಗಳು ಕೂಡ ಸಿಗದೇ ಇರುವ ಸಾಧ್ಯತೆ ಇದೆ.
ನವೆಂಬರ್ ಮೊದಲ ವಾರದಿಂದಲೇ ಸರ್ಕಾರ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ್ದು, ಅಗತ್ಯ ಇರುವವರನ್ನು ಹೊರತುಪಡಿಸಿ ಅಗತ್ಯ ಇಲ್ಲದೆ ಇರುವವರು ಕೂಡ ತಿದ್ದುಪಡಿ ಮಾಡಿಕೊಳ್ಳುವ ನೆಪದಲ್ಲಿ ಸರ್ಕಾರಕ್ಕೆ ವಂಚನೆ ಮಾಡಿದ್ರೆ ಅಂತವರ ರೇಷನ್ ಕಾರ್ಡ್ ಯಾವುದೇ ನೋಟೀಸ್ ಇಲ್ಲದೆ ತಕ್ಷಣವೇ ರದ್ದಾಗಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
This facility is not available for ration card holders