ಬೆಳ್ಳಂಬೆಳಿಗ್ಗೆ ಅನ್ನದಾತ ರೈತರಿಗೆ ಗುಡ್ ನ್ಯೂಸ್; ಸಿಗಲಿದೆ ಉಚಿತ ವಿದ್ಯುತ್! ಮಹತ್ವದ ನಿರ್ಧಾರ

ಕರ್ನಾಟಕ ರಾಜ್ಯ ಸರ್ಕಾರ (state government) ಈಗಾಗಲೇ ಜನರಿಗೆ ಅನುಕೂಲವಾಗುವ ಗ್ಯಾರಂಟಿ ಯೋಜನೆಗಳನ್ನು (guarantee schemes) ಜಾರಿಗೆ ತಂದಿರುವುದು ಲಕ್ಷಾಂತರ ಜನರಿಗೆ ಪ್ರಯೋಜನಕಾರಿಯಾಗಿದೆ.

ಅದರಲ್ಲೂ ಕೆಲವು ಯೋಜನೆಗಳು ಹಳ್ಳಿ ಭಾಗದ ಜನರಿಗೆ ಹೆಚ್ಚು ಉಪಯುಕ್ತವಾಗಿದೆ ಎನ್ನಬಹುದು, ಆದರೆ ಈ ನಡುವೆ ಉಚಿತ ವಿದ್ಯುತ್ (free electricity) ನೀಡಿದರು ಕೂಡ ಹಳ್ಳಿ ಭಾಗದಲ್ಲಿ ರೈತರಿಗೆ ಇತ್ತೀಚಿನ ದಿನಗಳಲ್ಲಿ ತಮ್ಮ ಜಮೀನಿಗೆ ನೀರಾವರಿ ಮಾಡಲು ಕಷ್ಟವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಲೋಡ್ ಶೆಡ್ಡಿಂಗ್.

ಗೃಹಲಕ್ಷ್ಮಿ ಯೋಜನೆಯಲ್ಲಿ 3ನೇ ಕಂತಿನ ಹಣ ಜಮೆ ಆಗಬೇಕಾದರೆ ಈ ಕೆಲಸ ಕಡ್ಡಾಯ, ಹೊಸ ಬದಲಾವಣೆ

ರೈತರ ಜಮೀನಿಗೆ ಸಿಗುತ್ತಿಲ್ಲ ವಿದ್ಯುತ್!

ಈ ಬಾರಿ ಮಳೆಗಾಲ ಅಭಾವದಿಂದಾಗಿ, ರೈತರ ಜಮೀನಿಗೆ ಹೆಚ್ಚಿನ ನೀರಾವರಿ ಅಗತ್ಯ ಇದೆ, ಇಲ್ಲವಾದರೆ ಸಂಪೂರ್ಣ ಬೆಳೆ ನಾಶ ಆಗುವ ಸಾಧ್ಯತೆ ಇದೆ ಹಾಗಾಗಿ ತೋಟಕ್ಕೆ ಅಥವಾ ತಮ್ಮ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಪಂಪ್ಸೆಟ್ (pump set) ಬಳಸಿ ನೀರು ಹಾಯಿಸಲಾಗುತ್ತದೆ.

ಆದರೆ ಪಂಪ್ ಸೆಟ್ ಗಳಿಗೆ ವಿದ್ಯುತ್ ಬೇಕೇ ಬೇಕು. ಲೋಡ್ ಶೆಡ್ಡಿಂಗ್ (load shedding) ನಿಂದಾಗಿ ನೀರಾವರಿ ಮಾಡುವುದು ಕಷ್ಟವಾಗುತ್ತಿತ್ತು ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರ ರೈತರಿಗೆ ಅನುಕೂಲವಾಗುವ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಅದುವೇ ಸೋಲಾರೈಸೇಷನ್ (solarisation) ಅಥವಾ ಸೋಲಾರ್ ಯೋಜನೆ (Solar Scheme)!

ಯಾರಿಗೆ ಸಿಗಲಿದೆ ಸೋಲಾರ್ ಯೋಜನೆಯ ಬೆನಿಫಿಟ್!

Free Electricityರಾಜ್ಯದಲ್ಲಿ ವಿದ್ಯುತ್ ಅಭಾವ ಕೂಡ ಇದೆ. ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರೈತರಿಗೆ ಅನುಕೂಲವಾಗಲು ಈ ಹೊಸ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು ರೈತರ ಜಮೀನಿಗೆ ಪಂಪ್ ಸೆಟ್ ಗಳ ಮೂಲಕ ನೀರು ಹಾಯಿಸಲು ಸೋಲಾರ್ ವ್ಯವಸ್ಥೆ (solar electricity) ಮಾಡಿಕೊಡಲು ನಿರ್ಧರಿಸಲಾಗಿದೆ.

ರೈತರ ಜಮೀನಿನಲ್ಲಿ ಇರುವ ನೀರಾವರಿ ಪಂಪ್ ಸೆಟ್ ಗಳನ್ನು ಸೋಲಾರ್ ಪಂಪ್ ಸೆಟ್ ಆಗಿ ಪರಿವರ್ತಿಸಲು ಸರ್ಕಾರ ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಕೊಟ್ಟು 34 ಲಕ್ಷ ನೀರಾವರಿ ಪಂಪ್ ಸೆಟ್ ಗಳು ಇವೆ. ಇದನ್ನು ಸೋಲಾರ್ ಪಂಪ್ ಸೆಟ್ ಗಳಾಗಿ ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ

ಈ ಮೂಲಕ ರೈತರ ಜಮೀನಿಗೆ ನೀರಾವರಿಗಾಗಿ ವಿದ್ಯುತ್ ಒದಗಿಸಲು ಸಾಧ್ಯವಿದೆ. ಇದಕ್ಕಾಗಿ ಸರಕಾರ ಶೇಕಡ 70ರಿಂದ 80% ವಿದ್ಯುತ್ ಗಾಗಿ ಸಭ್ ಸ್ಟೇಷನ್ (sub station) ನಿರ್ಮಾಣ ಮಾಡಿ ಅಲ್ಲಿಂದ ವಿದ್ಯುತ್ ಸರಬರಾಜು ಮಾಡಲಿದೆ.

ಅತ್ತೆ ಸೊಸೆ ಇಬ್ಬರಿಗೂ ಸಿಗಲಿದೆಯೇ ಗೃಹಲಕ್ಷ್ಮಿ ಭಾಗ್ಯ? ಆಹಾರ ಇಲಾಖೆಯ ಮಹತ್ವದ ನಿರ್ಧಾರ

ಸರ್ಕಾರಕ್ಕೆ ಇಳಿಯಲಿದೆ ಆರ್ಥಿಕ ಭಾರ!

ಸರ್ಕಾರ ಪ್ರತಿ ವರ್ಷ ರೈತರಿಗೆ ವಿದ್ಯುತ್ ಸಬ್ಸಿಡಿ (electricity subsidy) ನೀಡಲು 15,000 ಕೋಟಿ ರೂಪಾಯಿಗಳನ್ನು ಮೀಸಲಿಡುತ್ತದೆ. ಒಂದು ವೇಳೆ ಸೋಲಾರ್ ಯೋಜನೆ ಸಕ್ಸಸ್ ಫುಲ್ ಆದರೆ ರಾಜ್ಯಕ್ಕೆ ಆರ್ಥಿಕ ಭಾರ ಕಡಿಮೆ ಆಗಲಿದೆ. ವಿದ್ಯುತ್ ಖರ್ಚು ಅಷ್ಟಾಗಿ ಇರದೇ ಇರುವ ಕಾರಣ ಸೋಲಾರ್ ಮೂಲಕವೇ ರೈತರ ಜಮೀನಿಗೆ ವಿದ್ಯುತ್ ಸಿಗಲಿದೆ.

ರೈತರ ಜಮೀನಿಗೆ ಅನುಕೂಲವಾಗುವಂತೆ ಸೌರ ಘಟಕಗಳನ್ನು ಸ್ಥಾಪಿಸಲು ಕಂದಾಯ ಭೂಮಿಯನ್ನು ಗುತ್ತಿಗೆ ಪಡೆಯುವುದು ಹಾಗೂ ಮಾರುಕಟ್ಟೆ ದರದಲ್ಲಿ ಖಾಸಗಿ ಜಾಗವನ್ನು ಬಾಡಿಗೆ ತೆಗೆದುಕೊಳ್ಳುವುದು ಅಥವಾ ಖರೀದಿ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದೆ. ಇದರಿಂದ ಸಾಕಷ್ಟು ಸಬ್ ಸ್ಟೇಷನ್ ಗಳು ನಿರ್ಮಾಣವಾಗಲಿದ್ದು, ಅಲ್ಲಿಂದಲೇ ಸೋಲಾರ್ ವಿದ್ಯುತ್ ರೈತರ ಪಂಪ್ ಸೆಟ್ ಗಳಿಗೆ ಸಿಗಲಿದೆ.

Farmers of the state will get free electricity

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories