ಅತ್ತೆ ಸೊಸೆ ಇಬ್ಬರಿಗೂ ಸಿಗಲಿದೆಯೇ ಗೃಹಲಕ್ಷ್ಮಿ ಭಾಗ್ಯ? ಆಹಾರ ಇಲಾಖೆಯ ಮಹತ್ವದ ನಿರ್ಧಾರ
ಈಗ ಇರುವ ಸಮಸ್ಯೆ ಅಂದ್ರೆ ರೇಷನ್ ಕಾರ್ಡ್ ಬದಲಾವಣೆ (ration card correction) ಹಾಗೂ ಅದರಿಂದ ಗೃಹಿಣಿಯರ ಖಾತೆಗೆ (Bank Account) ಬರುತ್ತಿರುವ 2000 ರೂ.ಗಳು.
ರಾಜ್ಯ ಸರ್ಕಾರ (state government) ಜನರಿಗಾಗಿ ಪರಿಚಯಿಸಿರುವ 5 ಗ್ಯಾರಂಟಿ ಯೋಜನೆಗಳು ಕೂಡ ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಈ ನಡುವೆ ಯುವನಿಧಿ ಯೋಜನೆ (Yuva Nidhi scheme) ಮಾತ್ರ ಜಾರಿಗೆ ಬರುವುದು ಬಾಕಿ ಇದೆ.
ಈ ಯೋಜನೆಯು ಕೂಡ ಸದ್ಯದಲ್ಲಿಯೇ ಜನರನ್ನು ತಲುಪಲಿದೆ. ಅದು ಹಾಗಿರಲಿ, ಈಗ ಇರುವ ಸಮಸ್ಯೆ ಅಂದ್ರೆ ರೇಷನ್ ಕಾರ್ಡ್ ಬದಲಾವಣೆ (ration card correction) ಹಾಗೂ ಅದರಿಂದ ಗೃಹಿಣಿಯರ ಖಾತೆಗೆ (Bank Account) ಬರುತ್ತಿರುವ 2000 ರೂ.ಗಳು.
ಭವಿಷ್ಯದಲ್ಲಿ ಇಂತಹವರಿಗೆ ರೇಷನ್ ಕಾರ್ಡ್ ಸಿಗಲ್ಲ, ಇದ್ದರೂ ಕೂಡ ರದ್ದು, ಶೀಘ್ರದಲ್ಲೇ ಕೇಂದ್ರದ ನಿರ್ಧಾರ
ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ!
ರಾಜ್ಯ ಸರ್ಕಾರ ಈಗಾಗಲೇ ಮೂರು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ, ಆದರೆ ದುರದೃಷ್ಟವಶಾತ್ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯವಾದ ಕಾರಣ ಅಂದ್ರೆ ರೇಷನ್ ಕಾರ್ಡ್ ತಿದ್ದುಪಡಿಗೆ ಹೋದಾಗ ಸರ್ವರ್ ಸಮಸ್ಯೆ (server problem) ಉಂಟಾಗಿ ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ
ಸೇವಾ ಕೇಂದ್ರಗಳಲ್ಲಿ ಜನರು ತಾಸುಗಟ್ಟಲೆ ಕಾಲಹರಣ ಮಾಡುವಂತೆ ಆಗಿತ್ತು, ಹಾಗಾಗಿ ಜನ ಮತ್ತೆ ಸರ್ಕಾರದ ಮೊರೆ ಹೋಗಿದ್ದು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಡಬೇಕು, ಇಲ್ಲವಾದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮನವಿ ಮಾಡಿದ್ದರು.
ಇದಕ್ಕೆ ಒಪ್ಪಿಗೆ ಸೂಚಿಸಿರುವ ಸರ್ಕಾರ ನವೆಂಬರ್ ಒಂದರಿಂದ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ (ration card correction) ಮಾಡಿಕೊಡಲಿದೆ ಯಾವ ಭಾಗದಲ್ಲಿ ಯಾವ ದಿನಾಂಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ ಎಂಬುದರ ಬಗ್ಗೆ ಸರ್ಕಾರ ಇನ್ನು ಮಾಹಿತಿ ನೀಡಿಲ್ಲ. ಇಂದು ಈ ಬಗ್ಗೆ ಸುತ್ತೋಲೆ ಹೊರಡಿಸುವ ಸಾಧ್ಯತೆ ಇದೆ.
ಈ ನಾಲ್ಕು ದಾಖಲೆ ಕೊಡಿ ಸಾಕು, ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತೆ
ಅತ್ತೆ ಸೊಸೆ ಇಬ್ಬರಿಗೂ ರೇಷನ್ ಕಾರ್ಡ್!
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಯಿಂದ ಆಗಿರುವ ದೊಡ್ಡ ನಕಾರಾತ್ಮಕ ಬೆಳವಣಿಗೆ ಅಂದ್ರೆ ಅತ್ತೆ ಸೊಸೆ ನಡುವೆ, ಯಾರು ಯಜಮಾನಿ ಎನ್ನುವ ಚರ್ಚೆ ಆರಂಭವಾಗಿದೆ. ಒಂದು ವೇಳೆ ಅತ್ತೆ ವಯಸ್ಸಾಗಿದವರಾಗಿದ್ದು ಅದೇ ಮನೆಯಲ್ಲಿ ಸೊಸೆ ಕೂಡ ಇದ್ರೆ ತನಗೆ ಎರಡು ಸಾವಿರ ರೂಪಾಯಿ ಸಿಗಬೇಕು ಅಂತ ಬಯಸುವುದು ಸಾಮಾನ್ಯವಾಗಿದೆ.
ಅತ್ತೆ ಸೊಸೆ ಜಗಳ ರೇಷನ್ ಕಾರ್ಡ್ ತಿದ್ದುಪಡಿವರೆಗೆ ಬಂದು ಮುಟ್ಟಿದೆ. ಈಗ ಅತ್ತೆ ಸೊಸೆ ಕೂಡ ಪ್ರತ್ಯೇಕ ರೇಷನ್ ಕಾರ್ಡ್ (separate ration card for one family) ಪಡೆದುಕೊಳ್ಳಲು ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವ ಸಮಯದಲ್ಲಿ ಒಂದೇ ಮನೆಯಲ್ಲಿ ಇದ್ರು ಕೂಡ ಸೊಸೆಯ ಹೆಸರನ್ನು ತೆಗೆದುಹಾಕಲಾಗಿದೆ.
ಹೀಗೆ ಅತ್ತೆ ಸೊಸೆಯ ಹೆಸರನ್ನು ಪ್ರತ್ಯೇಕಗೊಳಿಸಿ ಒಂದೇ ಮನೆಯಲ್ಲಿ ಇದ್ದುಕೊಂಡು ಮತ್ತೊಂದು ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ರಾಜ್ಯ ಸರ್ಕಾರ ಆಹಾರ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ವಂಚನೆ ನಡೆಯಬಾರದು ಎಂದು ಅದರ ಬಗ್ಗೆ ಗಮನ ಹರಿಸಬೇಕು ಎಂಬುದನ್ನು ಸೂಚಿಸಿದೆ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದವರ ಅರ್ಜಿ ರಿಜೆಕ್ಟ್! ಹಳೆಯ ಕಾರ್ಡ್ ಇದ್ರೂ ಸಿಗುತ್ತಿಲ್ಲ ರೇಷನ್
ನವೆಂಬರ್ ಒಂದರಿಂದ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು. ಆದರೆ ಈ ಸಂದರ್ಭದಲ್ಲಿ ಯಾವುದೇ ಲೋಪಾದೋಷ ಆಗದಂತೆ ಸರ್ವರ್ ಸಮಸ್ಯೆ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸುವುದಾಗಿ ತಿಳಿಸಿದೆ.
ಇನ್ನು ಯಾವುದೇ ಮನೆಯಲ್ಲಿ ಅತ್ತೆ ಸೊಸೆ ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಕೊಳ್ಳಲು ತಿದ್ದುಪಡಿಗೆ ಪ್ರಯತ್ನಿಸಿದರೆ ಅಂತ ರೇಷನ್ ಕಾರ್ಡ್ ರದ್ದುಪಡಿಸುವ ಸಾಧ್ಯತೆ ಕೂಡ ಇದೆ. ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಮನೆ ಯಜಮಾನನ ಹೆಸರಿನ ಬದಲು ಯಜಮಾನಿಯ ಹೆಸರನ್ನು ಹಾಕಿಸಿಕೊಳ್ಳಬಹುದು. ಹೆಸರು ಅಥವಾ ವಿಳಾಸ ಬದಲಾವಣೆ ಇದ್ದರೆ ಮಾಡಿಕೊಳ್ಳಬಹುದು. ಹೊಸ ಸದಸ್ಯರ ಸೇರ್ಪಡೆ ಹಾಗೂ ಇಲ್ಲದೆ ಇರುವ ಸದಸ್ಯರ ಹೆಸರನ್ನು ತೆಗೆದುಹಾಕುವುದಕ್ಕೆ ಅವಕಾಶ ಮಾಡಿಕೊಡಲಾಗುವುದು.
important decision of food department on Gruha Lakshmi Yojana