ಈ ನಾಲ್ಕು ದಾಖಲೆ ಕೊಡಿ ಸಾಕು, ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತೆ
ನಿಮ್ಮ ಖಾತೆಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಜಮಾ ಆಗಿಲ್ವಾ? ಎರಡು ಕಂತುಗಳಲ್ಲಿ ಒಂದೇ ಒಂದು ಕಂತಿನ ಹಣ ಕೂಡ ಬಂದಿಲ್ವಾ? ಹಾಗಾದ್ರೆ ನೀವು ತಕ್ಷಣ ಇದೊಂದು ಕೆಲಸ ಮಾಡಬೇಕು
ನಿಮ್ಮ ಖಾತೆಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಜಮಾ ಆಗಿಲ್ವಾ? ಎರಡು ಕಂತುಗಳಲ್ಲಿ ಒಂದೇ ಒಂದು ಕಂತಿನ ಹಣ ಕೂಡ ಬಂದಿಲ್ವಾ? ಹಾಗಾದ್ರೆ ನೀವು ತಕ್ಷಣ ಇದೊಂದು ಕೆಲಸ ಮಾಡಬೇಕು ಸ್ಥಳೀಯ CDPO ಕಚೇರಿಗೆ ಭೇಟಿ ನೀಡಿದರೆ ನಿಮ್ಮ ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತದೆ.
12 ಲಕ್ಷ ಜನರಿಗೆ ಜಮಾ ಆಗಿಲ್ಲ ಹಣ!
ಗೃಹಲಕ್ಷ್ಮಿ ಯೋಜನೆಗೆ ರಾಜ್ಯದಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 1.14ಕೋಟಿಯಷ್ಟು. ಸರ್ಕಾರ ಈಗಾಗಲೇ 96 ಲಕ್ಷಕ್ಕೂ ಅಧಿಕ ಜನರ ಖಾತೆಗೆ (Bank Account) ಹಣ ವರ್ಗಾವಣೆ (DBT) ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ
ಆದರೆ 12 ಲಕ್ಷ ಮಹಿಳೆಯರಿಗೆ ಮಾತ್ರ ಒಂದು ಕಂತಿನ ಹಣವು ಬಂದಿಲ್ಲ, ನಾವು ಕೂಡ ಅಗಸ್ಟ್ ತಿಂಗಳಿಗಿಂತಲೂ ಮೊದಲೇ ಅರ್ಜಿ ಸಲ್ಲಿಸಿದ್ದೇವೆ.. ಆದರೆ ನಮಗೆ ಮಾತ್ರ ಹಣ ಬಂದಿಲ್ಲ ಯಾಕೆ ಎನ್ನುವ ಪ್ರಶ್ನೆಯನ್ನು ಮಹಿಳೆಯರು ಮಾಡುತ್ತಿದ್ದಾರೆ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದವರ ಅರ್ಜಿ ರಿಜೆಕ್ಟ್! ಹಳೆಯ ಕಾರ್ಡ್ ಇದ್ರೂ ಸಿಗುತ್ತಿಲ್ಲ ರೇಷನ್
ಈ ಹಿಂದೆ ಮಹಿಳೆಯರಿಗೆ ಹಣ ಬರಬೇಕು ಅಂದ್ರೆ ಅವರ ಖಾತೆಗೆ ಸಂಬಂಧಪಟ್ಟ ಹಾಗೆ ಕೆಲವು ಮಾಹಿತಿಗಳು ಸರಿಯಾಗಿ ಇರಬೇಕಿತ್ತು. ಉದಾಹರಣೆಗೆ ರೇಷನ್ ಕಾರ್ಡ್ (ration card) ಮಹಿಳೆಯ ಹೆಸರಿನಲ್ಲಿಯೇ ಇರಬೇಕು. ಮಹಿಳೆಯ ಹೆಸರು ಮತ್ತು ವಿಳಾಸ ರೇಷನ್ ಕಾರ್ಡ್ ನಲ್ಲಿ ಸರಿಯಾಗಿ ಹೊಂದಾಣಿಕೆ ಆಗಬೇಕು, ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ (Aadhar card link) ಆಗಿರಬೇಕು, ಹೀಗೆ ಮೊದಲದ ಮಾಹಿತಿಗಳನ್ನು ಸರಿಯಾಗಿ ಕೊಡಬೇಕಿತ್ತು, ಯಾರು ಇವರಿಗೆ ಈ ಕೆಲಸಗಳನ್ನು ಮಾಡಿಕೊಂಡಿಲ್ಲವೋ ಅಂತವರ ಖಾತೆಗೆ ಹಣ ಜಮಾ ಆಗಿಲ್ಲ
ಆದರೆ ನಮ್ಮ ಎಲ್ಲಾ ದಾಖಲೆಗಳು ಸರಿಯಾಗಿಯೇ ಇವೆ ಪರಿಶೀಲನೆಯನ್ನು ಮಾಡಿಕೊಂಡಿದ್ದೇವೆ ಎನ್ನುವ ಮಹಿಳೆಯರಿಗೂ ಕೂಡ ಹಣ ಬಾರದೆ ಇರುವುದು ನಿಜಕ್ಕೂ ಬೇಸರದ ಸಂಗತಿ, ಇದಕ್ಕೆ ಸರ್ಕಾರ ತಾಂತ್ರಿಕ ದೋಷದ (technical error) ಕಾರಣದಿಂದ ಅಂತ ಮಹಿಳೆಯರಿಗೆ ಹಣ ಜಮಾ ಆಗಿಲ್ಲ ಆದರೆ ಸದ್ಯದಲ್ಲಿಯೇ ಆ ಸಮಸ್ಯೆ ಪರಿಹರಿಸಿ ಎಲ್ಲರಿಗೂ ಹಣ ಬರುವಂತೆ ಮಾಡುತ್ತೇವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಬಿಪಿಎಲ್ ಕಾರ್ಡ್ ಇರೋರಿಗೆ ಮತ್ತೊಂದು ಅಪ್ಡೇಟ್; ನವೆಂಬರ್ ತಿಂಗಳಿನಲ್ಲಿ ಸಿಗಲಿದೆ ಈ ಸೌಲಭ್ಯ
ಈ ನಾಲ್ಕು ದಾಖಲೆಗಳನ್ನು ಕೊಟ್ಟು ಪರಿಶೀಲಿಸಿ!
ಹಾಗಾದ್ರೆ ಯಾವ ನಾಲ್ಕು ದಾಖಲೆಗಳನ್ನು ಕೊಡಬೇಕು ಅಂತ ನೋಡುವುದಾದರೆ, ಫಲಾನುಭವಿ ಮಹಿಳೆಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ರೇಷನ್ ಕಾರ್ಡ್ ಹಾಗೂ ಅರ್ಜಿ ಸ್ವೀಕೃತಿ ಪತ್ರ. ದಾಖಲೆಗಳ ಕಾಪಿ ತೆಗೆದುಕೊಂಡು ಸಿಡಿಪಿಓ ಕಚೇರಿಗೆ ಹೋದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
ಗೃಹಲಕ್ಷ್ಮಿ ಯೋಜನೆ 3ನೇ ಕಂತು ಇಂಥವರಿಗೆ ಸಿಗುವುದೇ ಇಲ್ಲ! ಫಲಾನುಭವಿಗಳ ಲಿಸ್ಟ್ ಬಿಡುಗಡೆ
ಈಗಾಗಲೇ ಎರಡು ಕಂತಿನ ಹಣ ಜಮಾ ಆಗಿದೆ. ಎರಡನೇ ಕಂತಿನ ಹಣ ಸಂಪೂರ್ಣವಾಗಿ ಫಲಾನುಭವಿಗಳ ಖಾತೆಗೆ ನವೆಂಬರ್ 10ರ ಒಳಗೆ ಜಮಾ ಆಗಲಿದೆ ಹಾಗೂ ಮೂರನೇ ಕಂತು ಕೂಡ ಬಿಡುಗಡೆ (third installment) ಆಗಲಿದೆ ಈಗ ಸರ್ಕಾರ ಹೇಳಿರುವ ಇದೊಂದು ಕೆಲಸ ಮಾಡಿದರೆ ನಿಮಗೆ ಮೊದಲ ಕಂತಿನ ಹಣ ಬಾರದೆ ಇದ್ದರೂ ಕೊನೆ ಪಕ್ಷ ಎರಡನೇ ಕಂತಿನ ಹಣ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ತಕ್ಷಣವೇ ಸಿಡಿಪಿಓ ಅಧಿಕಾರಿಗಳನ್ನು ಸಂಪರ್ಕಿಸಿ.
provide these documents, Gruha lakshmi Yojana money will be credited to your Bank account
Follow us On
Google News |