ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದವರ ಅರ್ಜಿ ರಿಜೆಕ್ಟ್! ಹಳೆಯ ಕಾರ್ಡ್ ಇದ್ರೂ ಸಿಗುತ್ತಿಲ್ಲ ರೇಷನ್

ಸರ್ಕಾರ ಇವರಿಗೆ ನಾಲ್ಕು ಬಾರಿ ತಿದ್ದುಪಡಿಗೆ (Ration Card Correction) ಅವಕಾಶ ಮಾಡಿಕೊಟ್ಟಿತ್ತು, ಆದರೆ ಸರ್ವರ್ ಸಮಸ್ಯೆಯಿಂದ (Server Problem) ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರ (state government) ಜಾರಿಗೆ ತಂದಿರುವ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಅಂದ್ರೆ ಪಡಿತರ ಚೀಟಿ (ration card) ಬಹಳ ಅಗತ್ಯವಾಗಿರುವ ವಿಷಯ ಎಂಬುದು ಪ್ರತಿಯೊಬ್ಬರಿಗೂ ಗೊತ್ತು

ಈ ಹಿನ್ನೆಲೆಯಲ್ಲಿ ಸಾಕಷ್ಟು ಜನ ಹೊಸದಾಗಿ ಅರ್ಜಿ ಸಲ್ಲಿಸುವುದರ ಜೊತೆಗೆ ಈಗಾಗಲೇ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಅರ್ಜಿ ತಿದ್ದುಪಡಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇವರಿಗೆ ನಾಲ್ಕು ಬಾರಿ ತಿದ್ದುಪಡಿಗೆ (Ration Card Correction) ಅವಕಾಶ ಮಾಡಿಕೊಟ್ಟಿತ್ತು, ಆದರೆ ಸರ್ವರ್ ಸಮಸ್ಯೆಯಿಂದ (Server Problem) ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

From now on to get BPL card these 6 rules must be followed

ಬಿಪಿಎಲ್ ಕಾರ್ಡ್ ಇರೋರಿಗೆ ಮತ್ತೊಂದು ಅಪ್ಡೇಟ್; ನವೆಂಬರ್ ತಿಂಗಳಿನಲ್ಲಿ ಸಿಗಲಿದೆ ಈ ಸೌಲಭ್ಯ

ಮತ್ತೊಂದು ಸಮಸ್ಯೆ ಎದುರಾಗಿದೆ!

ಇದೀಗ ಮಂಡ್ಯ (Mandya) ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಸದಾಗಿ ಪಡೆದುಕೊಳ್ಳುವುದು ಹಾಗೂ ಪಡಿತರ ವಸ್ತುಗಳನ್ನ ಪಡೆದುಕೊಳ್ಳುವುದರ ಬಗ್ಗೆ ಜನರಲ್ಲಿ ಆಕ್ರೋಶ ಮೂಡಿದೆ. ಇದಕ್ಕೆ ಕಾರಣ ಕಳೆದ ಎರಡುವರೆ ವರ್ಷಗಳಿಂದಲೂ ಕೂಡ ಮಂಡ್ಯ ಜಿಲ್ಲೆಯ ಸಾಕಷ್ಟು ಜನ ಹೊಸ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರು.

ಒಟ್ಟು ಸಲ್ಲಿಕೆಯಾದ 14 ಸಾವಿರಕ್ಕೂ ಹೆಚ್ಚಿನ ಅರ್ಜಿಗಳಲ್ಲಿ ಕೇವಲ ರೂ.5,049 ಅರ್ಜಿಗಳನ್ನು ಮಾನ್ಯ ಗೊಳಿಸಿತ್ತು ಸರ್ಕಾರ. ಅವುಗಳಲ್ಲಿಯೂ 3572ದಷ್ಟು ಅರ್ಜಿಗಳಲ್ಲಿ ಮಾಹಿತಿ ಸರಿಯಾಗಿ ಇಲ್ಲದೆ ಇರುವ ಕಾರಣ ಅಂತಹ ಅರ್ಜಿಗಳನ್ನ ತಿರಸ್ಕರಿಸಿದೆ (application rejected). ಆದರೆ ಮಾನ್ಯ ಮಾಡಿರುವ ಅರ್ಜಿಗಳು ಕೂಡ ಹಾಗೆಯೇ ಉಳಿದುಕೊಂಡಿವೆ, ಅಂತವರಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ.

ಗೃಹಲಕ್ಷ್ಮಿ ಯೋಜನೆ 3ನೇ ಕಂತು ಇಂಥವರಿಗೆ ಸಿಗುವುದೇ ಇಲ್ಲ! ಫಲಾನುಭವಿಗಳ ಲಿಸ್ಟ್ ಬಿಡುಗಡೆ

ನ್ಯಾಯಬೆಲೆ ಅಂಗಡಿಯಲ್ಲಿಯೂ ಸರ್ವರ್ ಸಮಸ್ಯೆ!

Ration Cardರೇಷನ್ ಪಡೆದುಕೊಳ್ಳಲು ಬಯೋಮೆಟ್ರಿಕ್ ಆಧಾರಿತವಾಗಿಯೇ ಮಾಡಬೇಕು ಜೊತೆಗೆ ನಿಮ್ಮ ಮೊಬೈಲ್ ಕೂಡ ಜೊತೆಯಲ್ಲಿ ಇರಬೇಕು ಆದರೆ ಈಗ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು ಮಂಡ್ಯ ಜಿಲ್ಲೆಯಲ್ಲಿ ಜನರು ನ್ಯಾಯಬೆಲೆ ಅಂಗಡಿಯ ಎದುರು ತಾಸುಗಟ್ಟಲೆ ಪಡಿತರ ವಸ್ತು ಪಡೆದುಕೊಳ್ಳುವುದಕ್ಕಾಗಿ ಕಾಯುವಂತೆ ಆಗಿದೆ

ಅದೆಷ್ಟೋ ಜನರಿಗೆ ಬಯೋಮೆಟ್ರಿಕ್ ವರ್ಕ್ ಆಗದೆ ಸರಿಯಾಗಿ ಪಡಿತರ ವಸ್ತು ಪಡೆದುಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಇಲ್ಲಿಯೂ ಕೂಡ ಸರ್ವರ್ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಹಳೆಯ ಅರ್ಜಿಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನು ಹಳೆಯ ಅರ್ಜಿಗಳು ಪರಿಶೀಲನೆಗೊಂಡು ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿಲೇವಾರಿ ಮಾಡುವವರೆಗೂ ಹೊಸ ಬಿಪಿಎಲ್ ಕಾರ್ಡ್ ಅರ್ಜಿಯನ್ನು ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಈಗಾಗಿ ಜನರಲ್ಲಿ ಸಾಕಷ್ಟು ಬೇಸರ ಮೂಡಿದ್ದು ಯಾವಾಗ ಸರ್ವರ್ ಸಮಸ್ಯೆ ಸರಿ ಹೋಗುತ್ತೆ? ಯಾವಾಗ ನಮಗೂ ಹೊಸದಾಗಿ ರೇಷನ್ ಕಾರ್ಡ್ ಸಿಗುತ್ತೆ? ಅಂತ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ.

Application of new ration card applicants rejected