ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ (Karnataka state) ರೇಷನ್ ಕಾರ್ಡ್ (Ration Card) ಬಳಕೆ ಹಾಗೂ ಅದರ ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರ ಹೆಚ್ಚು ಮುತುವರ್ಜಿವಹಿಸಿದೆ ಎನ್ನಬಹುದು
ಅದರಲ್ಲೂ ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ನೀಡಲಾಗುವ ಹಾಗೂ ಜನರ ಹಸಿವನ್ನು ನೀಗಿಸುವ ಉದ್ದೇಶದಿಂದ ಪಡಿತರ ವಿತರಣೆ ಮಾಡಲು ಅಗತ್ಯ ಇರುವ ರೇಷನ್ ಕಾರ್ಡ್ ಅನ್ನು ರಾಜ್ಯದಲ್ಲಿ ಕೋಟ್ಯಾಂತರ ಜನ ಪಡೆದುಕೊಂಡಿದ್ದಾರೆ
ಈ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ನಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಬದಲಾವಣೆಗಳು ಬೇಕಿದ್ದರೂ ಮಾಡಿಕೊಳ್ಳಬಹುದು ಎಂದು ತಿದ್ದುಪಡಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.
ಗೃಹಲಕ್ಷ್ಮಿ ಯೋಜನೆ 3ನೇ ಕಂತು ಇಂಥವರಿಗೆ ಸಿಗುವುದೇ ಇಲ್ಲ! ಫಲಾನುಭವಿಗಳ ಲಿಸ್ಟ್ ಬಿಡುಗಡೆ
ಅನ್ನಭಾಗ್ಯ ಯೋಜನೆಗೆ ಬಿಪಿಎಲ್ ಕಾರ್ಡ್! (BPL Ration card for Annabhagya scheme)
ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಹೇಳಿರುವಂತೆ ಕೇಂದ್ರ ಸರ್ಕಾರದ ಉಚಿತ 5 ಕೆಜಿ ಅಕ್ಕಿಯ ಜೊತೆಗೆ ತಾವು ಇನ್ನೂ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ನೀಡುವುದಾಗಿ ತಿಳಿಸಿತ್ತು
ಆದರೆ ನಿಮಗೆಲ್ಲಾ ಗೊತ್ತಿರುವ ಹಾಗೆ ಐದು ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ಹೊಂದಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ (Bank Account) 5 ಕೆಜಿ ಅಕ್ಕಿ ಬದಲು ಹಣ ವರ್ಗಾವಣೆ (Money Transfer) ಆಗುತ್ತದೆ. ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ!
ಬಹಳ ಮುಖ್ಯವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಅಡಿಯಲ್ಲಿ ಉಚಿತವಾಗಿ ಮಹಿಳೆಯರು 2,000 ರೂ.ಗಳನ್ನು ಪಡೆದುಕೊಳ್ಳಬೇಕು ಅಂದ್ರೆ, ರೇಷನ್ ಕಾರ್ಡ್ ಮನೆಯ ಮೊದಲ ಗೃಹಿಣಿಯ ಹೆಸರಿನಲ್ಲಿ ಇರಬೇಕು.
ಅಂದರೆ ಮನೆಯ ಯಜಮಾನನ ಹೆಸರಿನಲ್ಲಿ ಇರುವ ರೇಷನ್ ಕಾರ್ಡ್ ಮಹಿಳೆಯ ಹೆಸರಿಗೆ ವರ್ಗಾವಣೆ ಆಗಬೇಕು, ಆದ್ದರಿಂದ ಈ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ಮೂರು ಬಾರಿ ಅವಕಾಶ ಮಾಡಿಕೊಟ್ಟಿತ್ತು.
ಆದರೆ ಸರ್ಕಾರದ ಸರ್ವರ್ ಸಮಸ್ಯೆಯಿಂದಾಗಿ ಎಲ್ಲಾ ಫಲಾನುಭವಿಗಳ ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ.
ಯಾವ ತಿದ್ದುಪಡಿ ಮಾಡಿಕೊಳ್ಳಬಹುದು?
*ರೇಷನ್ ಕಾರ್ಡ್ ನಲ್ಲಿ ಯಜಮಾನನ ಹೆಸರಿನ ಬದಲು ಯಜಮಾನಿ ಹೆಸರು ಸೇರಿಸಬಹುದು.
*ಹೊಸ ಸದಸ್ಯರ ಹೆಸರನ್ನು ಸೇರಿಸಬಹುದು
*ಹಳೆಯ ವಿಳಾಸವನ್ನು ಬದಲಿಸಿ ಹೊಸ ವಿಳಾಸ ಹಾಕಿಸಿಕೊಳ್ಳಬಹುದು
*ಮರಣ ಹೊಂದಿದ ಸದಸ್ಯರ ಹೆಸರು ತೆಗೆದು ಹಾಕಬಹುದು
*ಫೋಟೋ ಬದಲಾಯಿಸಬಹುದು
ಈ ಕೆಲವು ಪ್ರಮುಖ ತಿದ್ದುಪಡಿಯನ್ನ ರೇಷನ್ ಕಾರ್ಡ್ ನಲ್ಲಿ ಮಾಡಿಕೊಳ್ಳಬಹುದು. ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಯಾವಾಗ ಅವಕಾಶ ಸಿಗಲಿದೆ ಎಂಬುದನ್ನು ನೋಡುವುದಾದರೆ ಸರ್ಕಾರ ಈಗಾಗಲೇ ತಿಳಿಸಿರುವಂತೆ ನವೆಂಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗುವುದು.
ಸೇವಾ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 7:00 ವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇದೆ. ಇನ್ನು ನವೆಂಬರ್ ಯಾವ ತಾರೀಖಿನಿಂದ ತಿದ್ದುಪಡಿಗೆ ಅವಕಾಶ ನೀಡಲಾಗುವುದು ಎನ್ನುವ ದಿನಾಂಕವನ್ನು ಸರ್ಕಾರ ಸದ್ಯದಲ್ಲಿಯೇ ಪ್ರಕಟಿಸಲಿದೆ.
Another update for BPL card Holders
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.