ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಖಾತೆಗೆ ಹಣ ಬಂದಿದ್ಯೋ ಇಲ್ವೋ ಚೆಕ್ ಮಾಡುವುದು ಹೇಗೆ?
ನವೆಂಬರ್ 10ನೇ ತಾರೀಕಿನ ಒಳಗೆ ಪ್ರತಿಯೊಬ್ಬರ ಖಾತೆಗೂ (Bank Account) ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಜಮಾ ಆಗುವ ಭರವಸೆಯನ್ನು ಸರ್ಕಾರ ಕೊಟ್ಟಿದೆ.
ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಅಡಿಯಲ್ಲಿ ಪ್ರತಿ ತಿಂಗಳು 2000 ಗಳನ್ನ ಮಹಿಳೆಯರು ಉಚಿತವಾಗಿ ಪಡೆದುಕೊಳ್ಳಬಹುದು. ಈಗಾಗಲೇ ಈ ಯೋಜನೆ ಆರಂಭವಾಗಿ ಎರಡು ತಿಂಗಳು ಕಳೆದಿವೆ, ಹಾಗೆಯೇ ಸರ್ಕಾರ ಎರಡು ತಿಂಗಳ ಕಂತಿನ ಹಣವನ್ನು ಬಿಡುಗಡೆ ಮಾಡಿದೆ
ಮೊದಲ ಕಂತಿನಲ್ಲಿ 96 ಲಕ್ಷ ಜನ 2,000ಗಳನ್ನ ಪಡೆದುಕೊಂಡಿದ್ದರೆ, ಎರಡನೇ ಕಂತಿನ ಹಣ (second installment) ಬಿಡುಗಡೆ ಆದಾಗ ಸುಮಾರು 62 ಲಕ್ಷ ಜನರಿಗೆ ಹಣ ಸಂದಾಯವಾಗಿದೆ.
ನವೆಂಬರ್ 10ನೇ ತಾರೀಕಿನ ಒಳಗೆ ಪ್ರತಿಯೊಬ್ಬರ ಖಾತೆಗೂ (Bank Account) ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಜಮಾ ಆಗುವ ಭರವಸೆಯನ್ನು ಸರ್ಕಾರ ಕೊಟ್ಟಿದೆ.
ನಟ ಅಪ್ಪು ಹೃದಯ ಜ್ಯೋತಿ ಯೋಜನೆ ಆರಂಭ; ಯಾರಿಗೆಲ್ಲಾ ಸಿಗಲಿದೆ ಉಚಿತ ಚಿಕಿತ್ಸೆ ಗೊತ್ತಾ?
ಇನ್ನು ಹಣ ಬಂದಿಲ್ವಾ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಬಂದಿದೆಯಾ ಎಂಬುದನ್ನು ಚೆಕ್ ಮಾಡುವುದಾದರೆ ಸುಮಾರು 30% ನಷ್ಟು ಮಹಿಳೆಯರಿಗೆ ಹಣ ಬಂದಿಲ್ಲ. ಇದಕ್ಕೆ ಮಹಿಳೆಯರ ಖಾತೆಯಲ್ಲಿ (Bank Account) ಇರುವ ಸಮಸ್ಯೆ ಒಂದು ಕಡೆಯಾದರೆ ಸರ್ಕಾರದ ತಾಂತ್ರಿಕ ದೋಷಗಳು (technical error) ಕೂಡ ಇನ್ನೊಂದು ಕಾರಣ.
ಸರ್ಕಾರದಿಂದ ಸಾಕಷ್ಟು ತಾಂತ್ರಿಕ ದೋಷಗಳು ಆಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಹಣ ಸಂದಾಯವಾಗಿಲ್ಲ, ಆದರೆ ಸದ್ಯದಲ್ಲೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಫಲಾನುಭವಿ ಮಹಿಳೆಯರಿಗೆ ಹಣ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
ರೇಷನ್ ಕಾರ್ಡ್ ಇದ್ರೂ ರೇಷನ್ ಪಡೆಯೋಕೆ ಹೊಸ ರೂಲ್ಸ್! ರಾತ್ರೋರಾತ್ರಿ ಹೊಸ ನಿಯಮ
ಗೃಹಲಕ್ಷ್ಮಿ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! (How to check application status)
ಕೆಲವರಿಗೆ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸ್ವೀಕೃತಿಯನ್ನು (acknowledgement) ಕೊಡಲಾಗಿದೆ, ಜೊತೆಗೆ ಸರ್ಕಾರದಿಂದ ಅರ್ಜಿ ಸ್ವೀಕರಿಸಲಾಗಿದೆ ಎನ್ನುವ ಎಸ್ಎಂಎಸ್ (SMS) ಕೂಡ ಬಂದಿದೆ.
ಒಂದು ವೇಳೆ ನೀವು ಈ ಅರ್ಜಿ ಸ್ವೀಕೃತಿಯನ್ನು ಸ್ವೀಕರಿಸದೆ ಇದ್ದಲ್ಲಿ ಅಥವಾ ನಿಮಗೆ ಸರ್ಕಾರದಿಂದ ಯಾವುದೇ ಸಂದೇಶ ಬಾರದೇ ಇದ್ದಲ್ಲಿ, https://sevasindhugs.karnataka.gov.in/ ವೆಬ್ಸೈಟ್ನಲ್ಲಿ ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
ಒಂದು ವೇಳೆ ಇಲ್ಲಿ ನಿಮ್ಮ ಅರ್ಜಿ ಸ್ವೀಕರಿಸಲಾಗಿಲ್ಲ ಎನ್ನುವ ಸಂದೇಶ ಕಾಣಿಸಿದರೆ, ನೀವು ಮತ್ತೆ ಸೇವಾ ಕೇಂದ್ರಗಳಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಗೃಹಜ್ಯೋತಿ ಉಚಿತ ವಿದ್ಯುತ್ ಬಳಸುತ್ತಿದ್ದವರಿಗೆ ಧಿಡೀರ್ ಬದಲಾವಣೆ, ಹೊಸ ನಿಯಮ ಜಾರಿ!
ಹಣ ಜಮಾ ಆಗಿಲ್ಲ ಅಂದ್ರೆ ಏನು ಮಾಡಬೇಕು?
ಈಗಾಗಲೇ ಸರ್ಕಾರ ತಿಳಿಸಿರುವಂತೆ ಗೃಹಿಣಿಯರು ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪ್ರತಿ, ಆಧಾರ್ ಕಾರ್ಡ್ (Aadhaar Card) ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಗಳನ್ನೂ ತೆಗೆದುಕೊಂಡು ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಳೀಯ ಅಧಿಕಾರಿಗಳ (CDPO) ಬಳಿಗೆ ಹೋಗಿ ದಾಖಲೆಗಳನ್ನು ನೀಡಿ ಪರಿಶೀಲಿಸಿಕೊಳ್ಳಬೇಕು.
ಅಲ್ಲಿನ ಅಧಿಕಾರಿಗಳು ಚೆಕ್ ಮಾಡಿ ಯಾವ ಕಾರಣಕ್ಕೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದನ್ನ ತಿಳಿಸುತ್ತಾರೆ ಹಾಗೂ ಇದಕ್ಕೆ ಪರಿಹಾರವನ್ನು ಕೂಡ ಸೂಚಿಸುತ್ತಾರೆ.
ನಂತರ ನೀವು ಬೇಕಾಗಿರುವ ಬದಲಾವಣೆಗಳನ್ನು ಮಾಡಿಕೊಂಡು ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣದ ಸುಳಿವೇ ಇರದವರಿಗೆ ಕೊನೆಗೂ ಸಿಹಿ ಸುದ್ದಿ!
ಇನ್ನು ಯಾರಿಗೆ ಮೊದಲ ತಿಂಗಳ ಹಣ ಸಂದಾಯವಾಗಿದೆಯೋ ಅಂತವರಿಗೆ ಎರಡನೇ ಕಂತಿನ ಹಣವು ಕೂಡ ಬರುತ್ತದೆ, ಸ್ವಲ್ಪ ವಿಳಂಬವಾದರೂ ನಿಮ್ಮ ಖಾತೆಗೆ ಹಣ ಬರುತ್ತದೆ ಆದ್ದರಿಂದ ಆತಂಕ ಪಟ್ಟುಕೊಳ್ಳುವ ಅಗತ್ಯ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಅದೇ ರೀತಿ ನಿಮ್ಮ ಖಾತೆಗೆ ಹಣ ಹಾಕಿರುವ ಬಗ್ಗೆ ಸರ್ಕಾರ ಸಂದೇಶವನ್ನು ಕಳುಹಿಸಿದರೆ ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಖಾತೆಯನ್ನು ಪರಿಶೀಲಿಸಿಕೊಳ್ಳಿ. ನವೆಂಬರ್ 10ನೇ ತಾರೀಖಿನ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
Gruha Lakshmi Yojana New Update, How to check money Debited or Not to Your Bank account