ನಟ ಅಪ್ಪು ಹೃದಯ ಜ್ಯೋತಿ ಯೋಜನೆ ಆರಂಭ; ಯಾರಿಗೆಲ್ಲಾ ಸಿಗಲಿದೆ ಉಚಿತ ಚಿಕಿತ್ಸೆ ಗೊತ್ತಾ?

Story Highlights

ಸರ್ಕಾರ ಈಗಾಗಲೇ ಸಾಕಷ್ಟು ಜನರಿಗೆ ಪ್ರಯೋಜನಕಾರಿ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಮತ್ತೊಂದು ಯೋಜನೆಯನ್ನು ಜನರಿಗೆ ನೀಡಲಿದ್ದು ಅದುವೇ ಅಪ್ಪು ಹೃದಯ ಜ್ಯೋತಿ ಯೋಜನೆ (Appu hrudaya Jyoti scheme).

ಇತ್ತೀಚಿಗಷ್ಟೇ ಡಾಕ್ಟರ್ ಪುನೀತ್ ರಾಜಕುಮಾರ್ (Dr Puneet Rajkumar) ಅವರ ಪುಣ್ಯ ಸ್ಮರಣೆ ನೆರವೇರಿದೆ. ಅಪ್ಪು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೆ ಇದ್ದರೂ ಅವರು ಹಾಕಿಕೊಟ್ಟ ಹಾಗೂ ತೋರಿಸಿಕೊಟ್ಟ ಆದರ್ಶಗಳು ಯಾರೂ ಮರೆಯಲಾರರು. ಹೀಗಾಗಿ ರಾಜ್ಯ ಸರ್ಕಾರ (state government) ಇದೀಗ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರ ಹೃದಯಕ್ಕೂ ವಿಶೇಷ ವ್ಯಾಲ್ಯೂ ನೀಡುತ್ತಿದೆ.

ಹೌದು ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಜನರಿಗೆ ಪ್ರಯೋಜನಕಾರಿ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಮತ್ತೊಂದು ಯೋಜನೆಯನ್ನು ಜನರಿಗೆ ನೀಡಲಿದ್ದು ಅದುವೇ ಅಪ್ಪು ಹೃದಯ ಜ್ಯೋತಿ ಯೋಜನೆ (Appu Hrudaya Jyothi scheme).

ಪುನೀತ್ ರಾಜಕುಮಾರ್ ಅವರ ಸವಿ ನೆನಪಿನಲ್ಲಿ ಈ ಯೋಜನೆಯ ಆರಂಭಿಸಲಾಗಿದ್ದು ಎಪಿಎಲ್ (BPL card) ಹಾಗೂ ಬಿಪಿಎಲ್ ಕಾರ್ಡ್ (BPL card) ಇದ್ದವರು ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿದೆ.

ರೇಷನ್ ಕಾರ್ಡ್ ಇದ್ರೂ ರೇಷನ್ ಪಡೆಯೋಕೆ ಹೊಸ ರೂಲ್ಸ್! ರಾತ್ರೋರಾತ್ರಿ ಹೊಸ ನಿಯಮ

ಏನಿದು ಅಪ್ಪು ಹೃದಯ ಜ್ಯೋತಿ ಯೋಜನೆ?

ಈ ಯೋಜನೆಯ ಅಡಿಯಲ್ಲಿ ಅಗತ್ಯ ಹಾಗೂ ಅರ್ಹ ಫಲಾನುಭವಿಗಳಿಗೆ ಉಚಿತ ಇಸಿಜಿ ಚಿಕಿತ್ಸೆ (ECG treatment) ನೀಡಲು ಸರ್ಕಾರ ಮುಂದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಹಬ್ ಅಂಡ್ ಸ್ಪೋಕ್ (hub and spoke) ಮಾದರಿ ಹಾಗೂ ಎಇಡಿ ಸಾಧನೆಗಳನ್ನು ಅಳವಡಿಸಲು ಸರ್ಕಾರ ತೀರ್ಮಾನಿಸಿದೆ

ಈ ಮೂಲಕ ಯಾವುದೇ ಸ್ಥಳದಲ್ಲಿ ಸಾರ್ವಜನಿಕರಿಗೆ ಹೃದಯಾಘಾತ (heart attack) ಕಾಣಿಸಿಕೊಂಡರೂ ತಕ್ಷಣವೇ ಈ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಉಚಿತವಾಗಿ ಇಸಿಜಿ (free ECG test) ಮಾಡಿಸಿಕೊಳ್ಳುವುದು.

ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ!

Health Schemeಇನ್ನು ಎದೆ ನೋವು ಅಥವಾ ಹೃದಯಘಾತ ಸಂಭವಿಸಿದ ವ್ಯಕ್ತಿ ಬಿಪಿಎಲ್ ಕಾರ್ಡ್ ಹೊಂದಿದ್ರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (multispecialty hospital) ಗಳಲ್ಲಿ ಇರುವ ಹಾಗೂ ಕೇಂದ್ರಗಳಲ್ಲಿ ಇರುವ ಹಬ್ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ನಿಮ್ಮ ಬಳಿ ಎಪಿಎಲ್ ಕಾರ್ಡ್ ಇದ್ದು ಆಯುಷ್ಮಾನ್ ಭಾರತ್ ಕಾರ್ಡ್ (Ayushman Bharat card) ಕೂಡ ಹೊಂದಿದ್ದರೆ ಅಂತವರಿಗೂ ಉಚಿತ ಚಿಕಿತ್ಸೆ ಲಭ್ಯವಿದೆ.

ಗೃಹಜ್ಯೋತಿ ಉಚಿತ ವಿದ್ಯುತ್ ಬಳಸುತ್ತಿದ್ದವರಿಗೆ ಧಿಡೀರ್ ಬದಲಾವಣೆ, ಹೊಸ ನಿಯಮ ಜಾರಿ!

ಮಾಹಿತಿ ನೀಡಿದ ಸಚಿವರು!

ಅಪ್ಪು ಹೃದಯ ಜ್ಯೋತಿ ಯೋಜನೆಯ ಬಗ್ಗೆ ಸಚಿವರಾಗಿರುವ ದಿನೇಶ್ ಗುಂಡೂರಾವ್ (Dinesh gundurao) ಮಾಧ್ಯಮ ಮಿತ್ರರಿಗೆ ಮಾಹಿತಿ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಅಧಿಕೃತವಾಗಿ ಅಪ್ಪು ಹೃದಯ ಜ್ಯೋತಿ ಯೋಜನೆಯನ್ನು ಘೋಷಣೆ ಮಾಡಲಿದೆ ಇದರಿಂದ ಲಕ್ಷಾಂತರ ಸಾರ್ವಜನಿಕರಿಗೆ ಸಹಾಯಕವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

Appu Hrudaya Jyothi Health scheme for APL and BPL Ration Card Holders

Related Stories