ಅಪಾರ್ಟ್‌ಮೆಂಟ್ ಕಟ್ಟಡದ 11ನೇ ಮಹಡಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕ ಬಿದ್ದು ಸಾವು

ಅಪಾರ್ಟ್‌ಮೆಂಟ್ ಕಟ್ಟಡದ 11ನೇ ಮಹಡಿಯಲ್ಲಿ 5 ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಬಿದ್ದು ಸಾವನ್ನಪ್ಪಿದ್ದಾನೆ.

ಮುಂಬೈ: ಮುಂಬೈನ ಅಪಾರ್ಟ್ಮೆಂಟ್ ಕಟ್ಟಡದ 11 ನೇ ಮಹಡಿಯಲ್ಲಿ 5 ವರ್ಷದ ಬಾಲಕ ಛತ್ರಿಯೊಂದಿಗೆ ಆಟವಾಡುತ್ತಿದ್ದಾಗ ಬಿದ್ದು ಸಾವನ್ನಪ್ಪಿದ್ದಾನೆ. ದಕ್ಷಿಣ ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮೃತ ಬಾಲಕನ ಕುಟುಂಬವು ಬೈಕುಲ್ಲಾ ಪ್ರದೇಶದ ಹೌಸಿಂಗ್ ಸೊಸೈಟಿಯ 11 ನೇ ಮಹಡಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಿತ್ತು. ನಿನ್ನೆ ಬೆಳಗ್ಗೆ ಬಾಲಕ ಕಿಟಕಿಯ ಬಳಿ ಕೊಡೆ ಹಿಡಿದು ಆಟವಾಡುತ್ತಿದ್ದ. ಆ ವೇಳೆ ಅನಿರೀಕ್ಷಿತವಾಗಿ ಬಾಲಕ 11ನೇ ಮಹಡಿಯಿಂದ ಕಿಟಕಿಯಿಂದ ಬಿದ್ದಿದ್ದಾನೆ.

ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಬಿದ್ದ ಬಾಲಕನನ್ನು ಮುಂಬೈ ಸೆಂಟ್ರಲ್ ಬಳಿಯ ಸಿವಿಲ್ ನಾಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್ ಕಟ್ಟಡದ 11ನೇ ಮಹಡಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕ ಬಿದ್ದು ಸಾವು - Kannada News

ಘಟನೆಯ ವೇಳೆ ಬಾಲಕನ ಜೊತೆ ಆತನ ತಾಯಿ ಮತ್ತು ಇತರ ಸಂಬಂಧಿಕರು ಒಂದೇ ಕೋಣೆಯಲ್ಲಿದ್ದರು. ಕಿಟಕಿಯಿಂದ ಇಣುಕಿ ನೋಡಿದಾಗ ಬಾಲಕ ಬಿದ್ದಿರುವುದು ಕಂಡುಬಂತು. ಘಟನೆ ಬಳಿಕ ತಾಯಿಯ ಆತಂಕ ಹೇಳತೀರದು. ಆಕಸ್ಮಿಕ ಘಟನೆಯಿಂದ ಮಗನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

boy playing with umbrella falls to death from 11th floor of mumbai

Follow us On

FaceBook Google News

Advertisement

ಅಪಾರ್ಟ್‌ಮೆಂಟ್ ಕಟ್ಟಡದ 11ನೇ ಮಹಡಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕ ಬಿದ್ದು ಸಾವು - Kannada News

Read More News Today